Health Tips : ನಮ್ಮ ಕೈ ಅಂಚಿನಲ್ಲೇ ಸಿಗುವಂತಹ ಅನೇಕ ವಸ್ತುಗಳಲ್ಲಿ, ಸಸಿಗಳಲ್ಲಿ, ತರಕಾರಿಗಳಲ್ಲಿ ನಮಗೆ ತಿಳಿಯದೇ ಇರುವಂತಹ ಅನೇಕ ಔಷಧಿಯ ಗುಣಗಳಿರುತ್ತವೆ. ಅವುಗಳನ್ನು ಅರಿತು ಸರಿಯಾದ ರೀತಿಯ ಸೇವನೆ ಮಾಡಿದ್ದೇ ಆದರೇ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಬಹುದಾಗಿದೆ. ಇದೀಗ ಈ ಲೇಖನದ ಮೂಲಕ ಬೆಳ್ಳುಳ್ಳಿ (Health Tips) ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ಸಂಗ್ರಹ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Health Tips – ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳಾಗುತ್ತವೆ. ಆದರೆ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ (Health Tips)ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣದಿಂದ ಹೆಚ್ಚಾಗಿ ಬೆಳ್ಳುಳ್ಳಿಯನ್ನು ಸೇವನ ಮಾಡಬಾರದು. ನಿಯಮಿತವಾಗಿ ಸೇವನೆ ಮಾಡಬೇಕು. ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. (Health Tips)ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳಿಂದಲೂ ಪರಿಹಾರವನ್ನು ಸಹ ಪಡೆದುಕೊಳ್ಳಬಹುದಾಗಿದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ತಡೆಯಬಹುದು (Health Tips) ಮತ್ತು ಹೃದಯಾಘಾತದ ಅಪಾಯವನ್ನು ಸಹ ಕಡಿಮೆ ಮಾಡಬಹುದು ಎನ್ನಲಾಗಿದೆ.

ಇನ್ನೂ (Health Tips) ಯಾರಿಗಾದರೂ ಜೀರ್ಣದ ಸಮಸ್ಯೆಗಳಿಂದ ಬಳಲುತ್ತಿದ್ದರೇ, ಅಂತಹವರು ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದು ತುಂಬಾ ಉಪಯುಕ್ತವಾಗಿದೆ. ಜೊತೆಗೆ (Health Tips) ಬೆಳ್ಳುಳ್ಳಿಯಲ್ಲಿ ಆ್ಯಂಟಿ ಮೈಕ್ರೋಬಿಯಲ್ ಗುಣಗಳು ಇರುವುದರಿಂದ ಗ್ಯಾಸ್, ಅಸಿಡಿಟಿ, ಹೊಟ್ಟೆನೋವಿನ ಸಮಸ್ಯೆಗಳೂ ಸಹ ದೂರವಾಗುತ್ತದೆ. ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುತ್ತದೆ, (Health Tips) ಇದರಿಂದಾಗಿ ಮಲ-ಮೂತ್ರ ಸರಾಗವಾಗಿ ಹೊರಬರುತ್ತದೆ. ಜೊತೆಗೆ ಬೆಳ್ಳುಳ್ಳಿಯಲ್ಲಿ ಸಲ್ಫರ್ ಸಂಯುಕ್ತಗಳಿರುವುದರಿಂದ (Health Tips) ನೈಸರ್ಗಿಕವಾಗಿಯೇ ದೇಹವನ್ನು ವಿಷದಿಂದ ರಕ್ಷಣೆ ಮಾಡುತ್ತಿದೆ. ಪ್ರತಿದಿನ 2-3 ಬೆಳ್ಳುಳ್ಳಿಯ ಎಸಳು ತಿನ್ನುವುದರಿಂದ ಮಳೆಗಾಲದಲ್ಲಿ ಬರುವಂತಹ ಕೆಲವೊಂದು ರೋಗಗಳಿಂದಲೂ ರಕ್ಷಿಸಿಕೊಳ್ಳಬಹುದು ಎನ್ನಲಾಗಿದೆ. (ಸಂಗ್ರಹ ಮಾಹಿತಿ)