Viral News: ಬಸ್ಸಿನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಲೇಡಿ ಕಂಡಕ್ಟರ್, ವೈರಲ್ ಆದ ಸುದ್ದಿ….!

Viral News – ಕೆಲವೊಮ್ಮೆ ಗರ್ಭಿಣಿಯರು ಚಲಿಸುತ್ತಿರುವ ವಾಹನಗಳಲ್ಲಿಯೇ ಹೆರಿಗೆಯಾಗಿರುವಂತಹ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಚಲಿಸುತ್ತಿರುವ ಬಸ್, ಆಂಬ್ಯುಲೆನ್ಸ್ ಗಳಲ್ಲಿ ಹೆರಿಗೆ (Viral News) ನಡೆದ ಘಟನೆಗಳೂ ನಡೆದಿರುತ್ತದೆ. ಇದೀಗ ಟಿ.ಜಿ.ಎಸ್.ಆರ್‍.ಟಿ.ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ  ಗರ್ಭಿಣಿಗೆ ಮಾರ್ಗಮಧ್ಯೆಯೇ ಬಸ್ ನಿರ್ವಾಹಕಿ ಹಾಗೂ (Viral News) ನರ್ಸ್ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಈ ಘಟನೆ ತೆಲಂಗಾಣದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

Pregnant Woman Delivery in RTC Bus 1

ಇತ್ತೀಚಿಗಷ್ಟೆ ಕೇರಳದ ತ್ರಿಶೂರ್‍ ಜಿಲ್ಲೆಯಲ್ಲಿ ಬಸ್ ನಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಸುದ್ದಿಯೊಂದು (Viral News) ವೈರಲ್ ಆಗಿತ್ತು. ಇದೀಗ ಅಂತಹುದೇ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ಮಹಿಳಾ ಕಂಡಕ್ಟರ್ ಮತ್ತು ನರ್ಸ್ ಒಬ್ಬರು ಮಹಿಳೆಗೆ ಅದೇ ಬಸ್ಸಿನಲ್ಲಿ ಸುಸೂತ್ರವಾಗಿ (Viral News)  ಹೆರಿಗೆ ಮಾಡಿಸಿದ್ದಾರೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ. ತೆಲಂಗಾಣದಲ್ಲಿ ಈ ಘಟನೆ ನಡೆದಿದ್ದು, ಗರ್ಭಿಣಿಯನ್ನು ಸಂಧ್ಯಾ (Viral News) ಎಂದು ಗುರ್ತಿಸಲಾಗಿದೆ. ಸಂಧ್ಯಾ ತನ್ನ ಕುಟುಂಬದೊಂದಿಗೆ ರಕ್ಷಾ ಬಂಧನವನ್ನು ಆಚರಿಸಲು (Viral News) ಮಹಬೂಬ್ ನಗರ ಜಿಲ್ಲೆಯ ವನಪರ್ತಿಗೆ ಹೋಗುತ್ತಿದ್ದರು.

https://x.com/tgsrtcmdoffice/status/1825379714258645155

ಈ ಬಸ್ (Viral News) ನಾಚಹಳ್ಳಿ ಎಂಬಲ್ಲಿಗೆ ಹೋಗುತ್ತಿದ್ದಂತೆ ಸಂಧ್ಯಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೆರಿಗೆ ನೋವಿನಿಂದ ನರಳುತ್ತಿರುವುದನ್ನು ಗಮನಿಸಿದ ಮಹಿಳಾ ಕಂಡಕ್ಟರ್‍ ಜಿ.ಭಾರತಿ ಅಲ್ಲಿಯೇ ಬಸ್ ನಿಲ್ಲಸಿದ್ದಾಳೆ. ಇದೇ ಸಮಯದಲ್ಲಿ ಆಕೆ ಬಸ್ ನಲ್ಲಿದ್ದ ನರ್ಸ್ (Viral News)  ಸಹಾಯದಿಂದ ಗರ್ಭಿಣಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾಳೆ. ಇನ್ನೂ ಮಹಿಳೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ತಾಯಿ ಹಾಗೂ ಮಗುವನ್ನು ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ (Viral News) ಕರೆದೊಯ್ಯಲಾಗಿದೆ. ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನೂ (Viral News) ಟಿ.ಜಿ.ಎಸ್.ಆರ್‍.ಟಿ.ಸಿ ಸಾರಿಗೆ ಅಧಿಕಾರಿಗಳು ಬಸ್ ಕಂಡಕ್ಟರ್‍ ಭಾರತಿ ರವರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top