Siddaramaiah : ಅಂತಿಮ ಜಯ ಸತ್ಯಕ್ಕೆ ಎಂದ ಸಿದ್ದರಾಮಯ್ಯ, ಹೈಕೋರ್ಟ್ ಆದೇಶದ ಬಳಿಕ ಸಿದ್ದು ಮೊದಲ ರಿಯಾಕ್ಷನ್….!

Siddaramaiah – ಮುಡಾ ಸೈಟು ಹಂಚಿಕೆ ಸಂಬಂಧ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯನವರ ವಿರುದ್ದ ಪ್ರಾಸಿಕ್ಯೂಷನ್ ನೀಡಿದ್ದು, ಇದಕ್ಕೆ ತಡೆಯಾಜ್ಞೆ ಕೋರಿ ಸಿದ್ದರಾಮಯ್ಯ (Siddaramaiah) ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಸೋಮವಾರ ಈ ಅರ್ಜಿಯ ವಿಚಾರಣೆ ನಡೆದಿದ್ದು, ಒಂದೂವರೆ ಗಂಟೆಯ ಕಾಲ ನ್ಯಾಯಮೂರ್ತಿ ವಾದ ಪ್ರತಿವಾದ ಆಲಿಸಿದ ಬಳಿಕ ಆ.29 ರವರೆಗೆ ಮುಂದೂಡಿದ್ದಾರೆ. ಈ ಆದೇಶದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, (Siddaramaiah) ಸತ್ಯಕ್ಕೆ ಗೆಲುವು ಎಂದಿದ್ದಾರೆ.

Karnataka politics MUDA Scam

ಈ ಸಂಬಂಧ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿರುವ (Siddaramaiah)  ಸಿದ್ದರಾಮಯ್ಯ, ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆಯಿಟ್ಟಿರುವ, ಈ ನೆಲದ ಕಾನೂನನ್ನು ಗೌರವಿಸುವ ಓರ್ವ ಪ್ರಜೆಯಾಗಿ ಸುಳ್ಳು ಪ್ರಕರಣದಲ್ಲಿ ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ರಾಜಕೀಯ ಪ್ರೇರಿತ ನಿರ್ಣಯದ ವಿರುದ್ಧ ಘನ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಉಚ್ಚ ನ್ಯಾಯಾಲಯವು ಈ ವಿಚಾರವನ್ನು ಆಲಿಸಿ, ಮುಂದಿನ ವಿಚಾರಣೆಯ ವರೆಗೆ ವಿಶೇಷ ನ್ಯಾಯಾಲಯಗಳು ವಿಚಾರಣೆ ಮುಂದೂಡಬೇಕು, (Siddaramaiah) ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ನೀಡಿದೆ. ನ್ಯಾಯಾಲಯದ ಈ ಆದೇಶವನ್ನು (Siddaramaiah) ವಿನಮ್ರವಾಗಿ ಸ್ವೀಕರಿಸುತ್ತ ನನ್ನ ಧನ್ಯವಾದ ಸಲ್ಲಿಸುತ್ತೇನೆ. ಅಂತಿಮ ಗೆಲುವು ಸತ್ಯದ್ದೇ ಆಗಿರಲಿದೆ ಎಂಬುದು ನನ್ನ ದೃಢ ನಂಬಿಕೆಯಾಗಿದೆ, ಸತ್ಯಮೇವ ಜಯತೆ ಎಂದು (Siddaramaiah)  ಪೋಸ್ಟ್ ಮಾಡಿದ್ದಾರೆ.

KPCC Protest on monday

ಇನ್ನೂ ಸಿಎಂ (Siddaramaiah) ವಿರುದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಎರಡು ಅರ್ಜಿ ಸಲ್ಲಿಕೆಯಾಗಿತ್ತು. ಇಂದು ಈ ಅರ್ಜಿಯ ವಿಚಾರಣೆ ನಡೆಯಬೇಕಿತ್ತು. ಈ ಅರ್ಜಿಯ ವಿಚಾರಣೆ ನಡೆದಿದ್ದರೇ ಸಿಎಂ ಸಿದ್ದರಾಮಯ್ಯನವರಿಗೆ (Siddaramaiah) ಸಿಎಂ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಇದೀಗ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದಿಂದ (Siddaramaiah) ಸಿದ್ದರಾಮಯ್ಯನವರಿಗೆ ತಾತ್ಕಲಿಕ ರಿಲೀಫ್ ಸಿಕ್ಕಿದೆ. ಆ.29 ರವರೆಗೂ ಮುಡಾ ಹಗರಣದ ಸಂಬಂಧ ಯಾವುದೇ ವಿಚಾರಣೆ ನಡೆಸಬಾರದು ಹಾಗೂ ಎಫ್.ಐ.ಆರ್‍ ದಾಖಲಾದರೂ ಮುಂದಿನ ಹತ್ತು ದಿನಗಳ ವರೆಗೆ ಅಂದರೇ ಆ.29 ರವರೆಗೆ (Siddaramaiah) ಸಿಎಂ ರವರನ್ನು ಟಚ್ ಮಾಡುವಂಗಿಲ್ಲ. ಬಿಸೋ ದೊಣ್ಣೆಯಿಂದ (Siddaramaiah) ಸಿಎಂ ಸಿದ್ದರಾಮಯ್ಯ ಇದೀಗ ಸದ್ಯ ಪರಾಗಿದ್ದಾರೆ .

Leave a Comment

Your email address will not be published. Required fields are marked *

Scroll to Top