ಪ್ರಪಂಚದಲ್ಲಿ ಆಗಾಗ ಕೆಲವೊಂದು ವಿಚಿತ್ರವಾದ ಘಟನೆಗಳು ನಡೆಯುತ್ತಿರುತ್ತವೆ. ಅಂತಹುದೇ ಘಟನೆಯೊಂದು ಇದೀಗ ಅಮೇರಿಕಾದ ಟೆಕ್ಸಾಸ್ ನಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ (Viral Video). ನವಜಾತ ಶಿಶು 32 ಹಲ್ಲುಗಳೊಂದಿಗೆ ಹುಟ್ಟಿದೆ. ಸಾಮಾನ್ಯವಾಗಿ ಮಗು ಹುಟ್ಟುವಾಗ ಹಲ್ಲು ಇರುವುದಿಲ್ಲ. 6 ರಿಂದ 12 ತಿಂಗಳಲ್ಲಿ ಮಕ್ಕಳಿಗೆ ಹಲ್ಲು ಬರಲು ಶುರುವಾಗುತ್ತದೆ. ಬುದ್ಧಿವಂತಿಕೆಯ ಹಲ್ಲು ಸೇರಿದಂತೆ 32 ಹಲ್ಲು ಬರಲು ಸರಿಸುಮಾರು 21 ವರ್ಷವಾಗಬೇಕು. ಒಂದೆರಡು ವರ್ಷ ಹೆಚ್ಚು ಕಡಿಮೆ ಆದರೂ ಅಚ್ಚರಿ ಇಲ್ಲ. ಆದರೆ ಟೆಕ್ಸಾಸ್ ನಲ್ಲಿ ಮಗು ಹುಟ್ಟುವಾಗಲೇ 32 ಹಲ್ಲುಗಳೊಂದಿಗೆ ಜನಿಸಿದ ಅಚ್ಚರಿಯ ಘಟನೆ ನಡೆದಿದೆ.
ಅಮೇರಿಕಾ ಟೆಕ್ಸಾಸ್ ನಲ್ಲಿ 32 ಹಲ್ಲುಗಳೊಂದಿಗೆ ಹೆಣ್ಣು ಮಗುವೊಂದು ಜನಿಸಿದೆ. ಪುಟಾಣಿ ಮಗುವಿನ ಮುಖದಲ್ಲಿ ಹಲ್ಲುಗಳನ್ನು ನೋಡುವುದು ತುಂಬಾ ಸುಂದರವಾಗಿ ಕಾಣಿಸಿದೆ. ಜೊತೆಗೆ 32 ಹಲ್ಲು ಗಳೊಂದಿಗೆ ಜನಿಸಿದ್ದು ಆತಂಕಕ್ಕೆ ಸಹ ಕಾರಣವಾಗಿದೆ (Viral Video). ಆದರೆ ಇದೊಂದು ಅಚ್ಚರಿಯ ಘಟನೆಯಲ್ಲ, ಬದಲಿಗೆ ಅದೊಂದು ಅಪರೂಪದ ಕಾಯಿಲೆಯಂತೆ. ಈ ಸಂಬಂಧ ಜಾಗೃತಿ ಮೂಡಿಸಲು ಈ ಮಗುವಿನ ತಾಯಿ ವಿಡಿಯೋ ಹಂಚಿಕೊಂಡಿದ್ದಾರೆ. ನಿಕಾ ದಿವಾ ಅನ್ನೋ ಇನ್‌ಸ್ಟಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಷ್ಟೇ ಅಲ್ಲ ಈ ಕಾಯಿಲೆ ಕುರಿತು ಮಾಹಿತಿ ನೀಡಲಾಗಿದೆ. ಆಕೆಯ ಮಗು ಹುಟ್ಟುವಾಗಲೇ 32 ಹಲ್ಲುಗಳೊಂದಿಗೆ ಜನಿಸಿದೆ. ಈ ಕಾಯಿಲೆಯಿಂದ ಮಗುವಿಗೆ ಗಂಭೀರ ಸಮಸ್ಯೆಗಳಿಲ್ಲ (Viral Video). ಆದರೆ ಚಿಕ್ಕವಯಸಿನಲ್ಲೇ ಎರಡನೇ ಬಾರಿಗೆ ಹುಟ್ಟುವ ಹಲ್ಲುಗಳು ಉದುರಿ ಹೋಗುವ ಸಾಧ್ಯತೆ ಇದೆ. ಜೊತೆಗೆ ಪುಟ್ಟ ಮಗುವಿಗೆ ಹಾಲುಣಿಸುವಾಗ ತಾಯಿಗೆ ಸಮಸ್ಯೆಗಾವು ಸಾಧ್ಯತೆ ಇದೆ ಎಂದು ಹೇಳಲಾಗಿದೆ.
https://www.instagram.com/reel/C3N6PCeulxS
ಇನ್ನೂ ಈ ರೀತಿಯಲ್ಲಿ ಹುಟ್ಟುವ ಮಕ್ಕಳ ಸಮಸ್ಯೆಗೆ ನ್ಯಾಟಲ್ ಟೀಥ್ ಡಿಸೀಸ್ ಎಂದು ಹೇಳಲಾಗುತ್ತದೆ (Viral Video). ಇಷ್ಟು ದಿನ ಈ ಡಿಸೀಸ್ ನಿಂದ ಹುಟ್ಟುವ ಮಗುವಿನ ಮುಂಭಾಗದ ನಾಲ್ಕು ಹಲ್ಲು, ದವಡೆ ಭಾಗದಲ್ಲಿ 4-6 ಹಲ್ಲುಗಳು, ಅಲ್ಲೊಂದು ಇಲ್ಲೊಂದು ಹಲ್ಲುಗಳು ಹುಟ್ಟಿದ ಉದಾಹರಣೆಗಳಿವೆಯಂತೆ. ಆದರೆ ವಯಸ್ಕರಂತೆ 32 ಹಲ್ಲುಗಳಿಂದ ಹುಟ್ಟಿದ ಮಗು ಇದೆ ಎಂದು ಕೆಲ ವೈದ್ಯರು ಹೇಳಿದ್ದಾರೆ. ಸದ್ಯ ಮಗುವಿನ ಆರೋಗ್ಯ ಉತ್ತಮವಾಗಿದೆ ಎಂದು ಹೇಳಲಾಗಿದೆ. ಆದರೆ ಪೋಷಕರಿಗೆ ಮಾತ್ರ ಆತಂಕವಿದೆ ಎನ್ನಲಾಗಿದೆ. ಗರ್ಭಾವಸ್ಥೆಯಲ್ಲಿರುವಾಗ ಕೆಲ ಹಾರ್ಮೋನ್ ಸಮಸ್ಯೆಗಳ ಕಾರಣಳಿಂದ ಈ ರೀತಿ ಆಗುವ ಸಾಧ್ಯತೆಯಿದೆ. ಆದ್ದರಿಂದ ವೈದ್ಯರ ಸೂಚನೆ ಹಾಗೂ ಮಾರ್ಗದರ್ಶನವನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.