Snake Video – ಸಾಮಾನ್ಯವಾಗಿ ಹಾವುಗಳ ಸಿನೆಮಾಗಳಲ್ಲಿ ಗಂಡು-ಹೆಣ್ಣು ಹಾವುಗಳ ಕೆಲವೊಂದು ದೃಶ್ಯಗಳನ್ನು ನೋಡಿರುತ್ತೇವೆ. ಗಂಡು ಹಾವು ಸತ್ತರೇ, ಆ ಹಾವಿನ ಮುಂದೆ ಕುಳಿತು ನೋವನ್ನು ಅನುಭವಿಸಿ ತನ್ನ ಸಂಗಾತಿಯನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುವುದನ್ನು ನೋಡಿರುತ್ತೇವೆ. (Snake Video) ಆದರೆ ಇಲ್ಲೊಂದು ಅಂತಹುದೇ ಘಟನೆ ನಡೆದಿದೆ. ಎರಡು ಹಾವುಗಳು ಕಥೆಯಿದು. ಒಂದು ಗಂಡು ಹಾವು ಜೆಸಿಬಿ ವಾಹನಕ್ಕೆ ಸಿಲುಕಿ ಮೃತಪಟ್ಟಿರುತ್ತದೆ. ಸತ್ತ ತನ್ನ ಸಂಗಾತಿಯ ಮಂದೆ ಗಂಟೆ ಗಟ್ಟಲೇ ಹೆಣ್ಣು ಹಾವು ಕುಳಿತು ನೋವು ಅನುಭವಿಸಿರುವ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ (Snake Video) ವೈರಲ್ ಆಗಿದೆ. ಅಂದಹಾಗೆ ಈ ಘಟನೆ ನಡೆದಿರೋದು ಮಧ್ಯಪ್ರದೇಶದಲ್ಲಿ.
ಮಧ್ಯಪ್ರದೇಶದ ಛತ್ರಿ ಗ್ರಾಮದ ರೈತರೊಬ್ಬರು ತಮ್ಮ ಜಮೀನು ಸ್ವಚ್ಚಗೊಳಿಸಲು ಜೆಸಿಬಿ (Snake Video) ವಾಹನವನ್ನು ಕರೆತಂದಿರುತ್ತಾರೆ. ಜೆಸಿಬಿ ವಾಹನ ಕೆಲಸ ಮಾಡುತ್ತಿದ್ದಾಗ ಕೃಷಿ ಭೂಮಿಯಲ್ಲಿ ಅಡಗಿ ಕುಳಿತಿದ್ದ ಜೋಡಿ ಹಾವುಗಳು ಅನಿರೀಕ್ಷಿತವಾಗಿ ಜೆಸಿಬಿಗೆ ಸಿಲುಕಿದೆ. ಈ ಸಮಯದಲ್ಲಿ ಗಂಡು ಹಾವು ಸ್ಥಳದಲ್ಲೇ ಮೃತಪಟ್ಟಿದೆ. ಜೊತೆಗೆ ಹೆಣ್ಣು ಹಾವು ಸಹ ಗಂಭೀರವಾಗಿ ಗಾಯಗೊಂಡಿದೆ. ಇದನ್ನು ನೋಡಿದ ಜೆಸಿಬಿ ಚಾಲಕ ಕೆಲಸ ವನ್ನು ನಿಲ್ಲಿಸಿದ್ದಾರೆ. ಜಮೀನಿನ ಮಾಲೀಕರು ಸೇರಿದಂತೆ ಅಲ್ಲಿದ್ದವರು ಈ ಜೋಡಿ ಹಾವುಗಳನ್ನು ನೋಡಿ ಶಾಕ್ ಆಗಿದ್ದಾರೆ. ಗಾಯಗೊಂಡ ಹೆಣ್ಣು ಹಾವಿಗೆ ನೀರು ಕೊಟ್ಟು ಆರೈಕೆ (Snake Video) ಮಾಡಿದ್ದಾರೆ. ನಂತರ ಹೆಣ್ಣು ಹಾವು ತನ್ನ ಸಂಗಾತಿಯನ್ನು ನೋಡುತ್ತಾ ಕುಳಿತಿದೆ. ತನ್ನ ಸಂಗಾತಿ ಎದ್ದೇಳೆತ್ತೇ ಅಂತಾ ಸಾಕಷ್ಟು ಸಮಯ ಕಾದು ಕುಳಿತಿದೆ. ಆದರೆ ತನ್ನ ಸಂಗಾತಿ ಅದಾಗಲೇ ಮೃತಪಟ್ಟಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Snake Video) ಆಗಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಹಾವುಗಳನ್ನು ಕಂಡ ಕೂಡಲೇ ಜಮೀನಿನ ಮಾಲೀಕ ಸ್ನೇಕ್ ಕ್ಯಾಚರ್ ಸಲ್ಮಾನ್ ಗೆ (Snake Video) ಮಾಹಿತಿ ನೀಡಿದ್ದಾರೆ. ತಕ್ಷಣ ಅಲ್ಲಿಗೆ ತಲುಪಿದ ಸಲ್ಮಾನ್ ಹಾವಿಗೆ ಚಿಕಿತ್ಸೆ ನೀಡಿ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. ಸ್ಥಳದಲ್ಲಿನ ಕೆಲವೊಂದು ಗುರುತುಗಳನ್ನು ನೋಡಿದರೇ ಈ ಹಾವುಗಳು ಹಲವು ವರ್ಷಗಳಿಂದ ಒಟ್ಟಿಗೆ ವಾಸ ಮಾಡುತ್ತಿವೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ (Snake Video) ಹಾವುಗಳು ರಂಧ್ರಗಳಲ್ಲಿ ಅಥವಾ ಬೆಚ್ಚಗಿನ ಪ್ರದೇಶದಲ್ಲಿ ಆಶ್ರಯ ಪಡೆಯುತ್ತವೆ. ಈ ಕಾರಣದಿಂದ ಈ ಎರಡು ಹಾವುಗಳು ಅಲ್ಲಿ ವಾಸ ಮಾಡುತ್ತಿದೆ ಎಂದು ಉರಗ ತಜ್ಞ ಮಾಹಿತಿ ನೀಡಿದ್ದಾರೆ.