Sad News: ಇತ್ತೀಚಿಗೆ ಸಣ್ಣ ವಯಸ್ಸಿನವರಲ್ಲೂ ಹೃದಯಾಘಾತ ಸಂಭವಿಸಿ ಮೃತಪಡುತ್ತಿರುವ ಘಟನೆಗಳು (Sad News) ಹೆಚ್ಚಾಗಿ ನಡೆಯುತ್ತಿವೆ. ಅಂತಹುದೇ ಮನಕಲಕುವಂತಹ ಘಟನೆಯೊಂದು ನಡೆದಿದ್ದು, ಶಾಲೆಯಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸುವಾಗ ಕುಸಿದು ಬಿದ್ದ ಮೂರನೇ ತರಗತಿಯ ವಿದ್ಯಾರ್ಥಿನಿ ಮೃತಪಟ್ಟಿರುವ (Sad News) ಆಘಾತಕಾರಿ ಘಟನೆ ನಡೆದಿದೆ. ಚಾಮರಾಜನಗರದ ಸೇಂಟ್ ಫ್ಯಾನ್ಸಿಸ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ತೇಜಸ್ವಿನಿ ಎಂದು ಗುರ್ತಿಸಲಾಗಿದೆ.
ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ನಿವಾಸಿ ಲಿಂಗರಾಜು ಹಾಗೂ ಶ್ರುತಿ ದಂಪತಿಯ ಏಕೈಕ ಪುತ್ರಿ ತೇಜಸ್ವಿನಿ ಹೃದಯಘಾತದಿಂದ (Sad News) ಮೃತಪಟ್ಟಿದ್ದಾಳೆ. ಚಾಮರಾಜನಗರದ ಸೆಂಟ್ ಫ್ರಾನ್ಸಿಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ಶಿಕ್ಷಕರಿಗೆ ನೋಟ್ಸ್ ತೋರಿಸಲೆಂದು ತೆರಳುತ್ತಿದ್ದಳು. ಈ ವೇಳೆ ತೇಜಸ್ವಿನಿ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಕೂಡಲೇ ತೇಜಸ್ವಿನಿಯನ್ನು ಶಾಲಾ ಸಿಬ್ಬಂದಿ ಜೆಎಸ್ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ, (Sad News) ದುರದೃಷ್ಟವಶಾತ್ ಅಷ್ಟರಾಗಲೇ ತೇಜಸ್ವಿನಿ ಉಸಿರು ನಿಂತಿದೆ. ತೇಜಸ್ವಿನಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಮಗಳ ಸಾವಿನ ಸುದ್ದಿ ಕೇಳಿ ಪೋಷಕರು ಕಂಗಾಲಾಗಿದ್ದು, ಕುಟುಂಬಸ್ಥರ ಆಕ್ರಂದನ (Sad News) ಮುಗಿಲು ಮುಟ್ಟಿದೆ. ಒಂದು ದಿನವೂ ಅನಾರೋಗ್ಯ ಸಮಸ್ಯೆ ಕಾಡಿರಲಿಲ್ಲ. ಇದ್ದಕ್ಕಿದ್ದಂತೆಯೇ ಮಗಳಿಗೆ ಹೃದಯಾಘಾತವಾಗಿದೆ ಎನ್ನುವುದು ಪಾಲಕರನ್ನು ದಿಗ್ಭ್ರಮಗೊಳಿಸಿದೆ. ಇನ್ನೂ ಇತ್ತಿಚಿಗೆ ವಯಸ್ಸಿಗೆ (Sad News) ಸಂಬಂಧವಿಲ್ಲವೆಂಬಂತೆ ಎಲ್ಲಾ ವಯಸ್ಕರಲ್ಲೂ ಹೃದಯಾಘಾತ ಸಂಭವಿಸುತ್ತಿದೆ. ನೂರು ವರ್ಷ ಬಾಳಿ ಬದುಕಬೇಕಾದಂತಹ ಪುಟ್ಟ ಮಗು ಇದೀಗ ಹೃದಯಾಘಾತದಿಂದ ಮೃತಪಟ್ಟಿರುವುದು (Sad News) ಮೃತಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಈ ಸುದ್ದಿ ತಿಳಿದವರಿಗೂ ಸಹ ದುಃಖ ಮಡುಗಟ್ಟಿದೆ.