Bank Holidays: ಫೆಬ್ರವರಿ 2025 ಮಾಹೆಯಲ್ಲಿ ದೇಶದ ವಿವಿಧೆಡೆ ಒಟ್ಟು 14 ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. 28 ದಿನಗಳಿರುವ ಫೆಬ್ರುವರಿ ತಿಂಗಳಲ್ಲಿ ವಸಂತ ಪಂಚಮಿ, ತೈಪುಶಮ್, ರವಿದಾಸ್ ಜಯಂತಿ, ಲುಯ್ ನಗಾರ್ ನೀ, ಶಿವಾಜಿ ಜಯಂತಿ, ಮಹಾಶಿವರಾತ್ರಿ ಇತ್ಯಾದಿ ಹಬ್ಬಗಳಿವೆ. ಜೊತೆಗೆ ಆರು ಭಾನುವಾರ ಮತ್ತು ಶನಿವಾರದ ರಜೆಗಳೂ ಒಳಗೊಂಡಿವೆ. ಕೆಲವೊಂದು ರಜೆಗಳು ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ. ಕರ್ನಾಟಕದಲ್ಲಿ 7 ದಿನ ರಜೆಯಿರಲಿದೆ.
Bank Holidays – ಫೆಬ್ರವರಿ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ :
- ಫೆಬ್ರವರಿ 2 – ಭಾನುವಾರ
- ಫೆಬ್ರವರಿ 3 – ಸೋಮವಾರ ವಸಂತ ಪಂಚಮಿ, ಸರಸ್ವತಿ ಪೂಜೆ ಹಿನ್ನೆಲೆ ಹರಿಯಾಣ, ಒಡಿಶಾ, ಪಂಜಾಬ್, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ನೀಡಲಾಗುತ್ತದೆ.
- ಫೆಬ್ರವರಿ 8 – ಎರಡನೇ ಶನಿವಾರ
- ಫೆಬ್ರವರಿ 9 – ಭಾನುವಾರ
- ಫೆಬ್ರವರಿ 11 – ಮಂಗಳವಾರ ತೈಪುಶಮ್ ಹಬ್ಬ ಹಿನ್ನೆಲೆ ತಮಿಳುನಾಡಿನಲ್ಲಿ ರಜೆ
- ಫೆಬ್ರವರಿ 12 – ಬುಧವಾರ ಸಂತ ರವಿದಾಸ್ ಜಯಂತಿ ಹಿನ್ನೆಲೆ ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ ರಾಜ್ಯಗಳಲ್ಲಿ ರಜೆ
- ಫೆಬ್ರವರಿ 15 – ಶನಿವಾರ ಲುಯ್ ನಾಗಾಯ್ ನೀ ಹಬ್ಬ ಹಿನ್ನೆಲೆ ಮಣಿಪುರ ರಾಜ್ಯದಲ್ಲಿ ರಜೆ.
- ಫೆಬ್ರವರಿ 16 – ಭಾನುವಾರ
- ಫೆಬ್ರವರಿ 19 – ಬುಧವಾರ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಬ್ಯಾಂಕ್‌ಗಳಿಗೆ ರಜೆ
- ಫೆಬ್ರವರಿ 20 – ಗುರುವಾರ ರಾಜ್ಯೋತ್ಸವ ಹಿನ್ನೆಲೆ ಮಿಝೋರಾಮ್, ಅರುಣಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ
- ಫೆಬ್ರವರಿ 22 – 4ನೇ ಶನಿವಾರ
- ಫೆಬ್ರವರಿ 23 – ಭಾನುವಾರ
- ಫೆಬ್ರವರಿ 26 – ಬುಧವಾರ ಮಹಾಶಿವರಾತ್ರಿ ಹಬ್ಬಕ್ಕೆ ಕರ್ನಾಟಕ ಸೇರಿ ಹಲವೆಡೆ ಬ್ಯಾಂಕ್‌ಗಳಿಗೆ ರಜೆ
- ಫೆಬ್ರವರಿ 28 – ಶುಕ್ರವಾರ ಲೋಸರ್ ಹಬ್ಬ ಹಿನ್ನೆಲೆ ಸಿಕ್ಕಿಂ ರಾಜ್ಯದಲ್ಲಿ ರಜೆ
Bank Holidays – ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ :
- ಫೆಬ್ರವರಿ 2 – ಭಾನುವಾರ
- ಫೆಬ್ರವರಿ 8 – ಎರಡನೇ ಶನಿವಾರ
- ಫೆಬ್ರವರಿ 9 – ಭಾನುವಾರ
- ಫೆಬ್ರವರಿ 16 – ಭಾನುವಾರ
- ಫೆಬ್ರವರಿ 22 – ನಾಲ್ಕನೇ ಶನಿವಾರ
- ಫೆಬ್ರವರಿ 23 – ಭಾನುವಾರ
- ಫೆಬ್ರವರಿ 26 – ಬುಧವಾರ ಮಹಾಶಿವರಾತ್ರಿ ಹಬ್ಬ