Football Love: ಪುಟ್ಬಾಲ್ ಪ್ರೇಮ ಎಂತಹದು ಅಂದರೇ ಸಾವಿನ ಮನೆಯಲ್ಲೂ ಸಹ ಶವವನ್ನು ಮುಂದಿಟ್ಟುಕೊಂಡು ಮ್ಯಾಚ್ ನೋಡಿದ ಫ್ಯಾಮಿಲಿ…!

ಕೆಲವರಿಗೆ ಕ್ರೀಡೆಗಳ ಮೇಲೆ ಸಾಯುವಷ್ಟು ಪ್ರೀತಿಯಿರುತ್ತದೆ. ಅದನ್ನು ಅನೇಕ ಬಾರಿ ತೋರಿಸುತ್ತಿರುತ್ತಾರೆ. ಕೆಲವರಂತೂ ಆಸ್ತಿಯನ್ನು ಮಾರಿ, ಸಾಲ ಮಾಡಿ ಕ್ರಿಕೆಟ್ ಗಳಂತಹ ಪಂದ್ಯಗಳನ್ನು ನೋಡಲು ಹೋಗುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸಾವಿನ ಮನೆಯಲ್ಲೂ ಸಹ ತಮ್ಮ ಪುಟ್ಬಾಲ್ ಪ್ರೇಮ ತೋರಿಸಿದ್ದಾರೆ. ಶವವನ್ನು ಮುಂದಿಟ್ಟುಕೊಂಡು ದೊಡ್ಡ ಪ್ರೊಜೆಕ್ಟರ್‍ ಅಳವಡಿಸಿ ಪುಟ್ ಬಾಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

football watching death home 0

ಸಾಮಾನ್ಯವಾಗಿ ಮನೆಯಲ್ಲಿ ಯಾರಾದರೂ ಸತ್ತರೇ ಮನೆಯಲ್ಲಿ ಶೋಕ ಸಾಗರ ತುಂಬಿ ತುಳುಕುತ್ತಿರುತ್ತದೆ. ಬಂದು ಬಳಗದವರು ತಮ್ಮ ಆಪ್ತರನ್ನು ಕಳೆದುಕೊಂಡು ನೋವನ್ನು ತಾಳಲಾರದೇ ಶವದ ಮುಂದೆ ಕಣ್ಣೀರು ಹಾಕುತ್ತಾರೆ. ಸೂತಕದ ಮನೆಯಲ್ಲಿ ನೋವು ತುಂಬಿರುತ್ತದೆ. ಆದರೆ ಇಲ್ಲೊಂದು ಕುಟುಂಬ ಮಾತ್ರ ಸತ್ತಿರುವ ವ್ಯಕ್ತಿಯ ಬಗ್ಗೆ ಅಳದೇ ಪುಟ್ ಬಾಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಸತ್ತ ಶವವನ್ನು ಮುಂದಿಟ್ಟುಕೊಂಡು ದೊಡ್ಡ ಪರದೆಯನ್ನು ಅಳವಡಿಸಿ ಪ್ರೊಜೆಕ್ಟರ್‍ ಮೂಲಕ ಪುಟ್ ಬಾಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಈ ಘಟನೆ ಚಿಲಿ ಎಂಬ ದೇಶದಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ವಿಡಿಯೋ ನೋಡಲು ಈ ಲಿಂಕ್ ಒಪೆನ್ ಮಾಡಿ: https://x.com/VisionPais2050/status/1804589028248854883

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಸತ್ತಿರುತ್ತಾರೆ. ಸಾವಿನ ಮನೆಯಲ್ಲಿ ಶವದ ಮುಂದೆಯೇ ಕುಟುಂಬಸ್ಥರು ತಮ್ಮ ದುಃಖವನ್ನೆಲ್ಲಾ ಮರೆದು ಚಿಲಿ ಹಾಗೂ ಪೆರು ನಡುವಣ ಕೋಪಾ ಅಮೇರಿಕನ್ ಪುಟ್ಬಾಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. VisionPais2050 ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇಂದು ನಾವು ನೋಡುತ್ತಿರುವ ವಿಡಿಯೋ ಅತ್ಯಂತ ವಿಚಿತ್ರ ಸಂಗತಿಯಾಗಿದೆ ಎಂಬ ಶೀರ್ಷಿಕೆಯನ್ನು ಬರೆದು ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಶವದ ಮುಂದೆ ಕುಟುಂಬಸ್ಥರು ರೋಚಕ ಪುಟ್ಬಾಲ್ ಪಂದ್ಯವನ್ನು ವೀಕ್ಷಣೆ ಮಾಡುತ್ತಿದ್ದಾರೆ. ದುಃಖವನ್ನೇಲ್ಲಾ ಪಕ್ಕಕ್ಕಿಟ್ಟು ಶವದ ಮುಂದೆ ಪುಟ್ಬಾಲ್ ಪಂದ್ಯ ವೀಕ್ಷಣೆ ಮಾಡಿದ್ದಾರೆ. ಕಳೆದ ಜೂ 23 ರಂದು ಹಂಚಿಕೊಂಡ ಈ ವಿಡಿಯೋ ಲಕ್ಷ ಲಕ್ಷ ವೀಕ್ಷಣೆ ಕಂಡಿದೆ. ಇನ್ನೂ ಈ ವಿಡಿಯೋ ನೋಡಿದ ಅನೇಕರು ಜನ ಹೀಗೂ ಇರ್ತಾರಾ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

Narendra Modi: ಮೋದಿ ಸರ್ಕಾರದ ಭವಿಷ್ಯ ನುಡಿದ ಲಾಲು ಪ್ರಸಾದ್ ಯಾದವ್, ಆಗಸ್ಟ್ ತಿಂಗಳಲ್ಲಿ ಮೋದಿ ಸರ್ಕಾರ ಪತನ ಎಂದ ಮಾಜಿ ಸಿಎಂ…..!

Fri Jul 5 , 2024
ಕೆಲವು ದಿನಗಳ ಹಿಂದೆಯಷ್ಟೆ ಕೇಂದ್ರದಲ್ಲಿ ಅಧಿಕಾರ ಹಿಡಿದ ನರೇಂದ್ರ ಮೋದಿಯವರ ಸರ್ಕಾರ ಇನ್ನೇನು ಕೆಲವೇ ದಿನಗಳಲ್ಲಿ ಪತನವಾಗಲಿದೆ. ಮುಂದಿನ ಆಗಸ್ಟ್ ತಿಂಗಳೊಳಗೆ  ಮೋದಿ ಸರ್ಕಾರ ಪತನವಾಗೋದು ಫಿಕ್ಸ್ ಎಂದು ರಾಷ್ಟ್ರೀಯ ಜನತಾ ದಳ (RJD) ಪಕ್ಷದ ವರಿಷ್ಟ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಭವಿಷ್ಯ ನುಡಿದಿದ್ದಾರೆ. ರಾಷ್ಟ್ರೀಯ ಜನತಾ ದಳ (RJD) ಪಕ್ಷದ 28ನೇ ಸಂಸ್ಥಾಪನಾ ದಿನದ ಆಚರಣೆಯ ವೇಳೆ ಪಾಟ್ನಾದ ಪಕ್ಷದ ಕಚೇರಿಯಲ್ಲಿ ನಡೆದ […]
Lalu Prasad yadav comments on modi govt
error: Content is protected !!