HomeNationalNarendra Modi: ಮೋದಿ ಸರ್ಕಾರದ ಭವಿಷ್ಯ ನುಡಿದ ಲಾಲು ಪ್ರಸಾದ್ ಯಾದವ್, ಆಗಸ್ಟ್ ತಿಂಗಳಲ್ಲಿ ಮೋದಿ...

Narendra Modi: ಮೋದಿ ಸರ್ಕಾರದ ಭವಿಷ್ಯ ನುಡಿದ ಲಾಲು ಪ್ರಸಾದ್ ಯಾದವ್, ಆಗಸ್ಟ್ ತಿಂಗಳಲ್ಲಿ ಮೋದಿ ಸರ್ಕಾರ ಪತನ ಎಂದ ಮಾಜಿ ಸಿಎಂ…..!

ಕೆಲವು ದಿನಗಳ ಹಿಂದೆಯಷ್ಟೆ ಕೇಂದ್ರದಲ್ಲಿ ಅಧಿಕಾರ ಹಿಡಿದ ನರೇಂದ್ರ ಮೋದಿಯವರ ಸರ್ಕಾರ ಇನ್ನೇನು ಕೆಲವೇ ದಿನಗಳಲ್ಲಿ ಪತನವಾಗಲಿದೆ. ಮುಂದಿನ ಆಗಸ್ಟ್ ತಿಂಗಳೊಳಗೆ  ಮೋದಿ ಸರ್ಕಾರ ಪತನವಾಗೋದು ಫಿಕ್ಸ್ ಎಂದು ರಾಷ್ಟ್ರೀಯ ಜನತಾ ದಳ (RJD) ಪಕ್ಷದ ವರಿಷ್ಟ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಭವಿಷ್ಯ ನುಡಿದಿದ್ದಾರೆ.

ರಾಷ್ಟ್ರೀಯ ಜನತಾ ದಳ (RJD) ಪಕ್ಷದ 28ನೇ ಸಂಸ್ಥಾಪನಾ ದಿನದ ಆಚರಣೆಯ ವೇಳೆ ಪಾಟ್ನಾದ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಲಾಲುಪ್ರಸಾದ ಯಾದವ್ ಪಕ್ಷದ ಕಾರ್ಯವೈಖರಿಯ ಬಗ್ಗೆ ಸಂತಸ ವ್ಯಕ್ತಪಡಿಸಿ, RJD ಪಕ್ಷ ಮತಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಕೇಂದ್ರ ಮೋದಿ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ಮೋದಿ ಸರ್ಕಾರ ತುಂಬಾ ದುರ್ಬಲವಾಗಿದೆ. ಆದ್ದರಿಂದ ಮೋದಿ ಸರ್ಕಾರ ಆಗಸ್ಟ್ ಮಾಹೆಯಲ್ಲಿ ಪತನವಾಗಲಿದೆ ಎಂದು ಸ್ಪೋಟಕ ಹೇಳಿಕೆ ನೀಡಿದರು.

Lalu Prasad yadav comments on modi govt 1

ದೇಶದಲ್ಲಿ ಅವಧಿಗೂ ಮುನ್ನ ಚುನಾವಣೆಗೆ ಸಿದ್ಧರಾಗುವಂತೆ ತನ್ನ ಪಕ್ಷದ ಸದಸ್ಯರಿಗೆ ಸೂಚನೆ ನೀಡಿರುವ ಲಾಲೂ ಯಾದವ್ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಎಲ್ಲಾ ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಿರಲು ನಾನು ಮನವಿ ಮಾಡುತ್ತೇನೆ. ಏಕೆಂದರೆ ಯಾವುದೇ ಸಮಯದಲ್ಲಿ ಚುನಾವಣೆಗಳು ನಡೆಯಬಹುದು. ದೆಹಲಿಯಲ್ಲಿ ಮೋದಿ ಸರ್ಕಾರವು ತುಂಬಾ ದುರ್ಬಲವಾಗಿದೆ. ಆಗಸ್ಟ್ ವೇಳೆಗೆ ಈಗಿನ ಸರ್ಕಾರ ಪತನವಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನೂ RJD ನಾಯಕ ಹಾಗೂ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಮಾತನಾಡಿ, ನಮ್ಮ ಪಕ್ಷಕ್ಕೆ ಒಳ್ಳೆಯ ಹಾಗೂ ಕೆಟ್ಟ ಸಮಯ ಇತ್ತು. ನಮ್ಮ ಪಕ್ಷದ ಸಿದ್ದಾಂತಗಳಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ನಮ್ಮ ಹೋರಾಟ ಮುಂದುವರೆಸಿದ್ದೆವು. ಕೆಲವೊಮ್ಮೆ ಸೋತಿದ್ದೇವೆ, ಕೆಲವೊಮ್ಮೆ ಗೆದಿದ್ದೇವೆ. ಆದರೆ ನಮ್ಮ ಕಾರ್ಯಕರ್ತರು ಧೃಡವಾಗಿ ಪಕ್ಷದ ಪರ ನಿಂತರು. ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ನಮ್ಮ ಪಕ್ಷದ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಪಕ್ಷದ ಸಾಧನೆಗಳ ಬಗ್ಗೆ ಮಾತನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular