Monday, June 2, 2025
HomeInternationalFootball Love: ಪುಟ್ಬಾಲ್ ಪ್ರೇಮ ಎಂತಹದು ಅಂದರೇ ಸಾವಿನ ಮನೆಯಲ್ಲೂ ಸಹ ಶವವನ್ನು ಮುಂದಿಟ್ಟುಕೊಂಡು ಮ್ಯಾಚ್...

Football Love: ಪುಟ್ಬಾಲ್ ಪ್ರೇಮ ಎಂತಹದು ಅಂದರೇ ಸಾವಿನ ಮನೆಯಲ್ಲೂ ಸಹ ಶವವನ್ನು ಮುಂದಿಟ್ಟುಕೊಂಡು ಮ್ಯಾಚ್ ನೋಡಿದ ಫ್ಯಾಮಿಲಿ…!

Football Love – ಕೆಲವರಿಗೆ ಕ್ರೀಡೆಗಳ ಮೇಲೆ ಸಾಯುವಷ್ಟು ಪ್ರೀತಿಯಿರುತ್ತದೆ. ಅದನ್ನು ಅನೇಕ ಬಾರಿ ತೋರಿಸುತ್ತಿರುತ್ತಾರೆ. ಕೆಲವರಂತೂ ಆಸ್ತಿಯನ್ನು ಮಾರಿ, ಸಾಲ ಮಾಡಿ ಕ್ರಿಕೆಟ್ ಗಳಂತಹ ಪಂದ್ಯಗಳನ್ನು ನೋಡಲು ಹೋಗುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸಾವಿನ ಮನೆಯಲ್ಲೂ ಸಹ ತಮ್ಮ ಪುಟ್ಬಾಲ್ ಪ್ರೇಮ ತೋರಿಸಿದ್ದಾರೆ. ಶವವನ್ನು ಮುಂದಿಟ್ಟುಕೊಂಡು ದೊಡ್ಡ ಪ್ರೊಜೆಕ್ಟರ್‍ ಅಳವಡಿಸಿ ಪುಟ್ ಬಾಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

football watching death home 0

ಸಾಮಾನ್ಯವಾಗಿ ಮನೆಯಲ್ಲಿ ಯಾರಾದರೂ ಸತ್ತರೇ ಮನೆಯಲ್ಲಿ ಶೋಕ ಸಾಗರ ತುಂಬಿ ತುಳುಕುತ್ತಿರುತ್ತದೆ. ಬಂದು ಬಳಗದವರು ತಮ್ಮ ಆಪ್ತರನ್ನು ಕಳೆದುಕೊಂಡು ನೋವನ್ನು ತಾಳಲಾರದೇ ಶವದ ಮುಂದೆ ಕಣ್ಣೀರು ಹಾಕುತ್ತಾರೆ. ಸೂತಕದ ಮನೆಯಲ್ಲಿ ನೋವು ತುಂಬಿರುತ್ತದೆ. ಆದರೆ ಇಲ್ಲೊಂದು ಕುಟುಂಬ ಮಾತ್ರ ಸತ್ತಿರುವ ವ್ಯಕ್ತಿಯ ಬಗ್ಗೆ ಅಳದೇ ಪುಟ್ ಬಾಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಸತ್ತ ಶವವನ್ನು ಮುಂದಿಟ್ಟುಕೊಂಡು ದೊಡ್ಡ ಪರದೆಯನ್ನು ಅಳವಡಿಸಿ ಪ್ರೊಜೆಕ್ಟರ್‍ ಮೂಲಕ ಪುಟ್ ಬಾಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಈ ಘಟನೆ ಚಿಲಿ ಎಂಬ ದೇಶದಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ವಿಡಿಯೋ ನೋಡಲು ಈ ಲಿಂಕ್ ಒಪೆನ್ ಮಾಡಿ: https://x.com/VisionPais2050/status/1804589028248854883

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಸತ್ತಿರುತ್ತಾರೆ. ಸಾವಿನ ಮನೆಯಲ್ಲಿ ಶವದ ಮುಂದೆಯೇ ಕುಟುಂಬಸ್ಥರು ತಮ್ಮ ದುಃಖವನ್ನೆಲ್ಲಾ ಮರೆದು ಚಿಲಿ ಹಾಗೂ ಪೆರು ನಡುವಣ ಕೋಪಾ ಅಮೇರಿಕನ್ ಪುಟ್ಬಾಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. VisionPais2050 ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇಂದು ನಾವು ನೋಡುತ್ತಿರುವ ವಿಡಿಯೋ ಅತ್ಯಂತ ವಿಚಿತ್ರ ಸಂಗತಿಯಾಗಿದೆ ಎಂಬ ಶೀರ್ಷಿಕೆಯನ್ನು ಬರೆದು ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಶವದ ಮುಂದೆ ಕುಟುಂಬಸ್ಥರು ರೋಚಕ ಪುಟ್ಬಾಲ್ ಪಂದ್ಯವನ್ನು ವೀಕ್ಷಣೆ ಮಾಡುತ್ತಿದ್ದಾರೆ. ದುಃಖವನ್ನೇಲ್ಲಾ ಪಕ್ಕಕ್ಕಿಟ್ಟು ಶವದ ಮುಂದೆ ಪುಟ್ಬಾಲ್ ಪಂದ್ಯ ವೀಕ್ಷಣೆ ಮಾಡಿದ್ದಾರೆ. ಕಳೆದ ಜೂ 23 ರಂದು ಹಂಚಿಕೊಂಡ ಈ ವಿಡಿಯೋ ಲಕ್ಷ ಲಕ್ಷ ವೀಕ್ಷಣೆ ಕಂಡಿದೆ. ಇನ್ನೂ ಈ ವಿಡಿಯೋ ನೋಡಿದ ಅನೇಕರು ಜನ ಹೀಗೂ ಇರ್ತಾರಾ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular