EPFO ಖಾತೆ ಹೊಂದಿರುವವರಿಗೆ ಇಲ್ಲೊಂದು ಅಲರ್ಟ್. ಉದ್ಯೋಗಾಧಾರಿತ ಭತ್ಯೆ (ELI) ಯೋಜನೆಯಡಿ ಸರ್ಕಾರದಿಂದ ಸಿಗುವಂತಹ ಲಾಭಗಳನ್ನು ಪಡೆಯಲು ಉದ್ಯೋಗಿಗಳ ಇ.ಪಿ.ಎಸ್ ಖಾತೆಗೆ UAN ಸಕ್ರೀಯಗೊಳಿಸಬೇಕು ಜೊತೆಗೆ ಅವರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಈ ಕೆಲಸ ಮಾಡಲು ಕಾಲಾವಕಾಶವನ್ನು ನೀಡಲಾಗಿತ್ತು. ಈ ಹಿಂದೆ ನವೆಂಬರ್ 30 ಕೊನೆಯ ದಿನಾಂಕವಾಗಿತ್ತು, ಬಳಿಕ ಅದನ್ನು ಡಿ.15 ರವರೆಗೂ ವಿಸ್ತರಿಸಲಾಗಿತ್ತು, ಇದೀಗ ಮತ್ತೊಮ್ಮೆ ಕಾಲಾವಕಾಶ ನೀಡಲಾಗಿದೆ. ಜ.15 ರವರೆಗೂ UAN ಸಕ್ರೀಯ ಗೊಳಿಸುವುದು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು ಅವಕಾಶ ನೀಡಲಾಗಿದೆ.

UAN ನಂಬರ್ ಸಕ್ರೀಯಗೊಳಿಸುವುದು PF ಖಾತೆದಾರರಿಗೆ ಕಡ್ಡಾಯವಾಗಿದೆ. ಯೂನಿರ್ವಸಲ್ ಅಕೌಂಟ್ ನಂಬರ್ ಎಂಬುದು EPFO ಸೇವೆಗಳನ್ನು ಪಡೆಯಲು ಉದ್ಯೋಗಿಗಳಿಗೆ ನೀಡುವಂತಹ 12 ಅಂಕಿಗಳ ಸಂಖ್ಯೆಯಾಗಿದೆ. ಆಧಾರ್ ನಂಬರ್ ಮಾದರಿಯಲ್ಲೇ ಓರ್ವ ಉದ್ಯೋಗಿಗೆ ನೀಡುವಂತಹ ವಿಶೇಷ ಸಂಖ್ಯೆಯಾಗಿದೆ. ಒಂದು ವೇಳೆ ಓರ್ವ ಉದ್ಯೋಗಿ ಕೆಲಸ ಬದಲಿಸಿದರೂ ಹೊಸ EPF ಖಾತೆ ಸೃಷ್ಟಿಯಾದರೂ ಸಹ ಅದೇ ಯುಎಎನ್ ನಂಬರ್ ಬಳಸಬಹುದು. ಒಂದು UAN ನಂಬರ್ ನಡಿ ಓರ್ವ ಉದ್ಯೋಗಿಯ ಎಲ್ಲಾ EPF ಅಕೌಂಟ್ ಗಳನ್ನು ಸೇರಿಸಿಕೊಳ್ಳಬಹುದಾಗಿದೆ. ಇನ್ನೂ EPF ಅಕೌಂಟ್ ನಿಂದ ಹಣವನ್ನು ಹಿಂಪಡೆದಾಗ ಅದು ಉದ್ಯೋಗಿಯ ಬ್ಯಾಂಕ್ ಖಾತೆಗೆ ರವಾನೆಯಾಗಬೇಕಾದರೇ ಆ ಖಾತೆಗೆ ಉದ್ಯೋಗಿಯ ಆಧಾರ್ ಲಿಂಕ್ ಆಗಿರಬೇಕು.

ಸಂಬಂಧಿಸಿದ ಪೋಸ್ಟ್ ಇಲ್ಲಿದೆ ನೋಡಿ: Click Here
ಇನ್ನೂ ಕಳೆದ ಜುಲೈ 2024 ರ ಬಜೆಟ್ ನಲ್ಲಿ ಎಂಪ್ಲಾಯ್ಮೆಂಟ್ ಲಿಂಕ್ಡ್ ಇನ್ಸೆಂಟೀವ್ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಈ ಯೋಜನೆಯಡಿ ಮೂರು ಸ್ಕೀಮ್ ಗಳನ್ನು ಸಹ ಘೋಷಣೆ ಮಾಡಲಾಗಿತ್ತು. ಹೊಸದಾಗಿ ಉದ್ಯೋಗಿಗಗಳಾಗಿರುವವರಿಗೆ ಒಂದು ತಿಂಗಳ ವೇತನ ಸರ್ಕಾರ ನೀಡುತ್ತದೆ. ಇನ್ನೆರಡು ಸ್ಕೀಮ್ ಗಳಲ್ಲಿ ಹೆಚ್ಚುವರಿ ಉದ್ಯೋಗಾವಕಾಶವನ್ನು ನೀಡುವ ಕಂಪನಿಗಳಿಗೆ ಸರ್ಕಾರ ಪ್ರೋತ್ಸಾಹ ಧನ ಒದಗಿಸುತ್ತದೆ. ಈ ಎಲ್ಲಾ ಲಾಭಗಳನ್ನು ಪಡೆಯಬೇಕಾದರೇ ಉದ್ಯೋಗಿಗಳು UAN ಸಕ್ರೀಯಗೊಳಿಸಬೇಕು ಹಾಗೂ ಉದ್ಯೋಗಿಯ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿರಬೇಕು. ಈ ಕಾರ್ಯ ಪೂರ್ಣಗೊಳಿಸಲು ಜ.15 ರವರೆಗೂ ಕಾಲಾವಾಕಾಶ ನೀಡಲಾಗಿದೆ.