Sad News – ಇಂದಿನ ಕಾಲದಲ್ಲಿ ಯುವಜನತೆ ಹೆಚ್ಚಾಗಿ ಮೊಬೈಲ್ ಗಳನ್ನು ಬಳಸುತ್ತಿದ್ದಾರೆ. ಈ ಮೊಬೈಲ್ ಬಳಕೆಯೆ ಒಂದು ಜೀವವನ್ನು ಬಲಿ ಪಡೆದಿದೆ ಎನ್ನಬಹುದಾಗಿದೆ. ಮೊಬೈಲ್ ಹೆಚ್ಚು ನೋಡಬೇಡ ಎಂದು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ತಾಲೂಕಿನ (Sad News) ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಧನುಶ್ರೀ (20) ಎಂದು ಗುರ್ತಿಸಲಾಗಿದೆ.
ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದ ಧನುಶ್ರೀ (20) ಮೊಬೈಲ್ ನೋಡಬೇಡ ಎಂದು ಪೋಷಕರು ಬುದ್ದಿ ಹೇಳಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷ ಸೇವಿಸಿದ ಮೃತ ದುರ್ದೈವಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಆಸ್ಪತ್ರೆಯಲ್ಲೇ ಕೊನೆಯುಸಿರು ಎಳೆದಿದ್ದಾಳೆ. ಶಿವಮೊಗ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದ ಧನುಶ್ರೀ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಳಂತೆ. ಅದನ್ನು ಗಮನಿಸಿದ ಪೋಷಕರು ಹೆಚ್ಚಾಗಿ ಮೊಬೈಲ್ ಬಳಸಬೇಡ. ಓದಿನ ಕಡೆ ಗಮನ ಹರಿಸುವಂತೆ ಬುದ್ದಿವಾದ ಹೇಳಿದ್ದಾರೆ. ಈ ವಿಚಾರಕ್ಕೆ ಮನನೊಂದ ಯುವತಿ ಕಳೆದ 3 ದಿನಗಳ ಹಿಂದೆ ಮನೆಯಲ್ಲಿಯೇ ವಿಷ ಸೇವಿಸಿದ್ದಳು. ವಿಷ ಸೇವಿಸಿ ಅಸ್ವಸ್ಥಳಾಗಿದ್ದ ಧನುಶ್ರೀ ಯನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಗುರುವಾರ) ಯುವತಿ ಆಸ್ಪತ್ರೆಯಲ್ಲಿ ಇಹಲೋಕ ತ್ಯೆಜಿಸಿದ್ದಾಳೆ.
ಇನ್ನೂ ಕಳೆದೆರಡು ದಿನಗಳ ಹಿಂದೆಯಷ್ಟೆ ಶಿವಮೊಗ್ಗ ನಗರದ ಸೊಳೆಬೈಲಿನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಟಿವಿ ರಿಮೋಟ್ ಕೊಡಲಿಲ್ಲ ಅಂತಾ ಅಜ್ಜಿ ಬೈದಿದ್ದಕ್ಕೆ ಬೇಸರಗೊಂಡ 16 ವರ್ಷದ ಸಹನಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಭದ್ರವಾತಿ ತಾಲೂಕಿನ ಕಲ್ಲಿಹಾಳ್ ನಿವಾಸಿಯಾಗಿದ್ದ ಸಹನಾ ಅಜ್ಜಿ ಮನೆಯಲ್ಲಿದ್ದುಕೊಂಡು ಓದುತ್ತಿದ್ದಳು. ಟಿ.ವಿ ರಿಮೋಟ್ ಕಾರಣದಿಂದ ಅಜ್ಜಿ ಬೈದಿದ್ದಕ್ಕೆ ಇಲಿ ಪಾಷಾಣ ಸೇವಿಸಿ ಪ್ರಾಣ ಬಿಟ್ಟಿದ್ದಳು. ಇದೀಗ ಮೊಬೈಲ್ ಹೆಚ್ಚು ಬಳಸಬೇಡ ಅಂದಿದ್ದಕ್ಕೆ ಶಿವಮೊಗ್ಗದ ಹಾರನಹಳ್ಳಿ ನಿವಾಸಿ ಧನುಶ್ರೀ ವಿಷ ಸೇವಿಸಿ ಮೃತಪಟ್ಟಿದ್ದಾಳೆ.