Indian Army Recruitment 2025: ಭಾರತೀಯ ಸೇನೆಯ DGEME ನಲ್ಲಿ ಖಾಲಿಯಿರುವ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ…!

Indian Army Recruitment 2025 – ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಇಲ್ಲೊಂದು ಅವಕಾಶ ಕಲ್ಪಿಸಲಾಗಿದೆ. ಭಾರತೀಯ ಸೇನೆಯ ಡೈರೆಕ್ಟರೇಟ್ ಜನರಲ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್ ನಿರ್ದೇಶನಾಲಯ (DGEME) ದಲ್ಲಿ ಖಾಲಿಯಿರುವ 625 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಫಾರ್ಮಸಿಸ್ಟ್, ಲೋವರ್ ಡಿವಿಶನ್ ಕ್ಲರ್ಕ್, ಫೈರ್ ಮ್ಯಾನ್, ವೆಹಿಕಲ್ ಮೆಕ್ಯಾನಿಕ್ ಸೇರಿದಂತೆ ವಿವಿಧ ಗ್ರೂಪ್ ಸಿ ವೃಂದದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜ.9, 2025 ಕೊನೆಯ ದಿನಾಂಕವಾಗಿದೆ.

Indian Army Recruitment 2025 – ಉದ್ಯೋಗ ವಿವರಗಳು :

  • ಇಲಾಖೆ ಹೆಸರು : ಭಾರತೀಯ ಸೇನೆಯ ಡೈರೆಕ್ಟರೇಟ್ ಜನರಲ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್(DGEME).
  • ಹುದ್ದೆಗಳ ಹೆಸರು: ಗ್ರೂಪ್ ಸಿ ವೃಂದ. ಫಾರ್ಮಾಸಿಸ್ಟ್, ಲೋವರ್ ಡಿವಿಷನ್ ಕ್ಲರ್ಕ್, ಎಲೆಕ್ಟ್ರಿಷಿಯನ್ ಹೈಲಿ ಸ್ಕಿಲ್ಡ್-II, ಅಗ್ನಿಶಾಮಕ ಸಿಬ್ಬಂದಿ, ಟ್ರೇಡ್ಸ್‌ಮ್ಯಾನ್ ಮೇಟ್, ವೆಹಿಕಲ್ ಮೆಕ್ಯಾನಿಕ್
  • ಒಟ್ಟು ಹುದ್ದೆಗಳು : 625 ಹುದ್ದೆಗಳು
  • ಅರ್ಜಿ ಸಲ್ಲಿಸುವ ವಿಧಾನ – ಆಫ್ ಲೈನ್ ಮೂಲಕ
  • ಉದ್ಯೋಗ ಸ್ಥಳ : ಭಾರತಾದ್ಯಂತ
  • ಅಧಿಕೃತ ವೆಬ್ ಸೈಟ್ : https://www.joinindianarmy.nic.in/index.htm
  • ಅಧಿಸೂಚನೆ : https://ismkannadanews.com/wp-content/uploads/2024/12/625-Group-C-Posts-Advt-Details-Application-Form-Indian-Army.pdf

Indian Army Recruitment 2025 – ಹುದ್ದೆಗಳ ವಿವರ :

  • ಫಾರ್ಮಾಸಿಸ್ಟ್ : 01
  • ಲೋವರ್ ಡಿವಿಷನ್ ಕ್ಲರ್ಕ್ (LDC) : 56
  • ಎಲೆಕ್ಟ್ರಿಷಿಯನ್ ಹೈಲಿ ಸ್ಕಿಲ್ಡ್-II : 32
  • ಅಗ್ನಿಶಾಮಕ ಸಿಬ್ಬಂದಿ : 36
  • ಟ್ರೇಡ್ಸ್‌ಮ್ಯಾನ್ ಮೇಟ್ : 230
  • ವೆಹಿಕಲ್ ಮೆಕ್ಯಾನಿಕ್ : 100
  • ಫಿಟ್ಟರ್ (ನುರಿತ) : 50
  • ಶೈಕ್ಷಣಿಕ ವಿದ್ಯಾರ್ಹತೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ನೇಮಕಾತಿ ನಿಯಮಾನುಸಾರ SSLC, PUC, B.Sc, ಡಿಪ್ಲೋಮ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ವಿದ್ಯಾರ್ಹತೆಯನ್ನು ಪಡೆದಿರಬೇಕು.
  • ವಯೋಮಿತಿ: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು.
  • ವಯೋಮಿತಿ ಸಡಿಲಿಕೆ: ಮೀಸಲಾತಿ ಅನುಸಾರವಾಗಿ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಹಾಗೂ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 15 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
  • ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Indian Army Recruitment 2025 – ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 21 ಡಿಸೆಂಬರ್ 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 9 ಜನವರಿ 2025

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top