ಹೊಟ್ಟೆನೋವು ಎಂದು ದಾಖಲಾದ ಯುವಕ, ಎಕ್ಸ್ ರೇ ನೋಡಿ ಶಾಕ್ ಆದ ವೈದ್ಯರು, ಆತನ ಹೊಟ್ಟೆಯಲ್ಲಿ ಏನಿತ್ತು ಗೊತ್ತಾ?

ವೈದ್ಯಕೀಯ ರಂಗದಲ್ಲಿ ಆಗಾಗ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಹೊಟ್ಟೆಯಲ್ಲಿ ಭಾರಿ ಗಾತ್ರದ ಗಡ್ಡೆಗಳಿರುವ ಬಗ್ಗೆ ಕೇಳಿರುತ್ತೇವೆ, ಅಂತಹ ಅನೇಕ ಸುದ್ದಿಗಳ ಬಗ್ಗೆ ಕೇಳಿರುತ್ತೇವೆ. ಅಂತಹುದೇ ವಿಚಿತ್ರ ಘಟನೆಯೊಂದು ರಾಜಸ್ತಾನದಲ್ಲಿ ನಡೆದಿದೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಹೊಟ್ಟೆನೋವು ಎಂದು ಯುವಕನೋರ್ವ ಆಸ್ಪತ್ರೆಗೆ ದಾಖಲಾಗಿದ್ದ, ಈ ವೇಳೆ ಆತನ ಎಕ್ಸ್ ರೇ ನೋಡಿ ವೈದ್ಯರೇ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆ ಯುವಕ ಹೊಟ್ಟೆಯಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,

ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಹೊಟ್ಟೆನೋವು ಎಂದು ಯುವಕನೋರ್ವ ಸವಾಯಿ ಮಾನ್ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದ, ಬಳಿಕ ಆತನನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಎಕ್ಸ್ ರೇ ತೆಗೆಸಿದ್ದು, ಈ ವೇಳೆ ಎಕ್ಸ್ ರೇ ನೋಡಿದ ವೈದ್ಯರು ಶಾಕ್ ಆಗಿದ್ದಾರೆ. ಆ ಯುವಕನ ಹೊಟ್ಟೆಯಲ್ಲಿ ಕಬ್ಬಿಣದ ಮೊಳೆಗಳು, ಸೂಚಿಗಳು, ಕೀಗಳು ಹೀಗೆ ಕಬ್ಬಿಣದ ಅದಿರೇ ಇತ್ತು ಎನ್ನಲಾಗಿದೆ. ಅವುಗಳನ್ನು ನೋಡುತ್ತಿದ್ದಂತೆ ವೈದ್ಯರು ಶಾಕ್ ಆಗಿದ್ದಾರೆ. ಬಳಿಕ ಆತನಿಗೆ ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಆತನ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಹೊರತೆಗೆದಿದ್ದಾರೆ ಎಂದು ಹೇಳಲಾಗಿದೆ.

youngboy stomach 1

ಇನ್ನೂ ಸವಾಯಿ ಮಾನ್ಸಿಂಗ್ ಆಸ್ಪತ್ರೆಯ ಹಿರಿ ವೈದ್ಯ ರಾಜೇಂದ್ರ ಮಂಡಿಯಾರವರ ಪ್ರಕಾರ, ಆಸ್ಪತ್ರೆಗೆ 21 ವರ್ಷದ ಯುವಕ ಬಂದು ತಾನು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿರುವುದಾಗಿ ಹೇಳಿದ. ಕೂಡಲೇ ಆತನಿಗೆ ಎಕ್ಸ್ ರೇ, ಸಿಟಿ ಸ್ಕ್ಯಾನ್ ಪರೀಕ್ಷೆಗಳನ್ನು ನಡೆಸಲಾಯ್ತು. ಈ ಪರೀಕ್ಷೆಯಲ್ಲಿ ಆತನ ಹೊಟ್ಟೆಯಲ್ಲಿ ಕಬ್ಬಿಣದ ವಸ್ತುಗಳು ಇರುವುದು ಕಂಡುಬಂದಿದೆ. ಕಬ್ಬಿಣದ ಮೊಳೆಗಳು, ಸೂಜಿಗಳು,  ಕೀಗಳು, ಮೊಳೆಗಳು ಮತ್ತು ಸೂಜಿಗಳು ಆತನ ಹೊಟ್ಟೆಯಲ್ಲಿದೆ. ಬಳಿಕ ಲ್ಯಾಪರೊಸ್ಕೋಪಿ ಮತ್ತು ಕೊಲೊನೋಸ್ಕೋಪಿ ನಡೆಸಿ ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಆತನ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಹೊರತೆಗೆಯಲಾಯಿತು. ಇನ್ನೂ ಆತನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಯುವಕನ ಕುಟುಂಬಸ್ಥರು ಹೇಳಿದ್ದಾರೆ ಎನ್ನಲಾಗಿದೆ. ಮಾನಸಿಕವಾಗಿ ಆರೋಗ್ಯವಾಗಿಲ್ಲದ ಕಾರಣ ಆತ ಈ ವಸ್ತುಗಳನ್ನು ನುಂಗಿರುಬಹುದು ಎಂದು ಊಹಿಸಲಾಗಿದೆ.

Leave a Reply

Your email address will not be published. Required fields are marked *

Next Post

ಎರಡು ಟ್ರಾಲಿ ಬ್ಯಾಗ್ ಹಿಡಿದು ಭಾರತದತ್ತ ಹೊರಟ ಪ್ರಜ್ವಲ್ ರೇವಣ್ಣ, ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಆದ ಪ್ರಜ್ವಲ್…..!

Thu May 30 , 2024
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಇಷ್ಟೂ ದಿನಗಳ ಕಾಲ ಬಂಧನದ ಭೀತಿಯಿಂದ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಕಳೆದೆರಡು ದಿನಗಳ ಹಿಂದೆಯಷ್ಟೆ ಪ್ರಜ್ವಲ್ ತಾನು ಮೇ.31 ರಂದು ಬಂದು ಎಸ್.ಐ.ಟಿ. ಅಧಿಕಾರಿಗಳ ವಿಚಾರಣೆಗೆ ಒಳಗಾಗುವುದಾಗಿ ವಿಡಿಯೋ ಮೂಲಕ ತಿಳಿಸಿದ್ದರು. ಅದರಂತೆ ಇದೀಗ ಪ್ರಜ್ವಲ್ ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಎರಡು ಟ್ರಾಲಿ ಬ್ಯಾಗ್ ಗಳ ಜೊತೆಗೆ ಚೆಕ್ ಇನ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಸಂಸದ ಪ್ರಜ್ವಲ್ […]
Prajwal Revanna take off
error: Content is protected !!