ಜಗಳ, ಗಲಾಟೆ ಸೇರಿದಂತೆ ಹಲವು ಕಾರಣಗಳಿಂದ ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದನ್ನು ನೋಡಿರುತ್ತೇವೆ. ಆದರೆ ಇಲ್ಲೋಬ್ಬ ವ್ಯಕ್ತಿ ಹೆಗ್ಗಣಗಳ ಕಾಟದಿಂದ ಮುಕ್ತಿ ಕೊಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾನೆ. ಹೆಗ್ಗಣಗಳ ಕಾಟದಿಂದ ಬೇಸತ್ತ ಹುಬ್ಬಳಿಯ ವ್ಯಕ್ತಿ ಪೊಲೀಸ್ ಮೊರೆ ಹೋಗಿ ಹೆಗ್ಗಣಗಳ ಕಾಟದಿಂದ ಮುಕ್ತಿಕೊಡಿಸುವಂತೆ ಮನವಿ ಮಾಡಿದ್ದಾನೆ.
ವಾಣಿಜ್ಯ ನಗರಿ ಹುಬ್ಬಳಿಯಲ್ಲಿ ಇದೀಗ ಹೆಗ್ಗಣದ ವಿಚಾರ ತುಂಬಾನೆ ಚರ್ಚೆಯಾಗುತ್ತಿದೆ. ಹಳೇ ಹುಬ್ಬಳಿಯ ಆನಂದ ನಗರದ ನಿವಾಸಿ ಅನಿಲ್ ಮುಂಡರಗಿ ಹೆಗ್ಗಣಗಳ ಕಾಟದಿಂದ ಮುಕ್ತಿಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ದೂರುದಾರ ಅನೀಲ್ ತಮ್ಮ ಪಕ್ಕದ ಮನೆಯ ಹೆಗ್ಗಣಗಳಿಂದ ನೆಮ್ಮದಿ ಹಾಳಾಗಿದೆ ಎಂದು ದೂರು ನೀಡಿದ್ದಾನೆ. ಪಕ್ಕದ ಮನೆಯ ಹೆಗ್ಗಣಗಳು ನಮ್ಮ ಮನೆಗೆ ಪ್ರತಿನಿತ್ಯ ಬಂದು, ಗ್ಯಾಸ್ ಪೈಪ್ ಲೈನ್ ಕಟ್ ಮಾಡುತ್ತಿವೆ, ಜೊತೆಗೆ ಸಿಂಕ್ ಪೈಪ್ ಲೈನ್ ಕತ್ತರಿಸುತ್ತವೆ, ಎಲ್ಲಂದರಲ್ಲಿ ನೆಲ ಅಗೆದು ಮಣ್ಣು ಹೊರ ಹಾಕುತ್ತಿವೆ. ಮನೆಯಲ್ಲಿ ರಂದ್ರಗು ಬಿದ್ದಿವೆ, ಸುಮಾರು 15-20 ಹೆಗ್ಗಣಗಳಿಂದ ಈ ಕೃತ್ಯ ನಡೆಯುತ್ತಿದೆ. ಈ ಕುರಿತು ಪಕ್ಕದ ಮನೆಯ ಮಾಲೀಕರಿಗೆ ಸುಮಾರು ಬಾರಿ ಹೇಳಲಾಗಿದೆ. ಆದರೂ ಸಹ ಏನು ಪ್ರಯೋಜನವಾಗಿಲ್ಲ. ಒಂದು ವೇಳೆ ಸಿಲಿಂಡರ್ ಸೋರಿಕೆಯಾಗಿ ದೊಡ್ಡ ಅನಾಹುತ ಆದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾನೆ. ಜೊತೆಗೆ ಈ ಸಮಸ್ಯೆಯಿಂದ ನನಗೆ ಮುಕ್ತಿ ಕೊಡಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾನೆ.
ಇನ್ನೂ ಅನೀಲ್ ದೂರನ್ನು ಸ್ವೀಕರಿಸಿದ ಹಳೇ ಹುಬ್ಬಳಿ ಪೊಲೀಸರು ದೂರಿನ ಮೇರೆಗೆ ಪಕ್ಕದ ಮನೆಯವರನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ. ದೂರುದಾರ ಅನೀಲ್ ರವರ ಮನೆ ಪಕ್ಕದ ಮನೆಯ ಮಾಲೀಕ ಸಿದ್ದು ಅಂಗಡಿಯವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ನಾಲ್ಕೈದು ದಿನಗಳಲ್ಲಿ ಹೆಗ್ಗಣಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಸಹ ನೀಡಿದ್ದಾರೆ. ಈ ವೇಳೆ ಸಿದ್ದು ಅಂಗಡಿ ಪ್ರತಿಕ್ರಿಯೆ ನೀಡಿದ್ದು, ನಾವು ಹೊಸ ಮನೆ ಕಟ್ಟಿಸಬೇಕಾಗಿದೆ. ಆದ್ದರಿಂದ ಆ ಮನೆಯನ್ನು ಹಾಗೆಯೇ ಬಿಡಲಾಗಿದೆ. ಹೆಗ್ಗಣಗಳ ಕಾಟ ತುಂಬಾನೆ ಇದೆ ಎಂದು ದೂರು ನೀಡಿದ್ದು ಕ್ರಮ ತೆಗೆದುಕೊಳ್ಳುತ್ತೇವೆ. ಆದಷ್ಟು ಬೇಗ ಸೀ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಪಕ್ಕದ ಮನೆಯ ಮಾಲೀಕ ಸಿದ್ದು ಅಂಗಡಿ ತಿಳಿಸಿದ್ದಾರೆ ಎನ್ನಲಾಗಿದೆ. ಇದೀಗ ಈ ಘಟನೆ ಹುಬ್ಬಳಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.