Tuesday, July 15, 2025
HomeNationalಲೋಕಸಭಾ ಚುನಾವಣೆ: ಪ್ರಚಾರದ ವೇದಿಕೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಡ್ಯಾನ್ಸ್, ವೈರಲ್ ಆದ ವಿಡಿಯೋ….!

ಲೋಕಸಭಾ ಚುನಾವಣೆ: ಪ್ರಚಾರದ ವೇದಿಕೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಡ್ಯಾನ್ಸ್, ವೈರಲ್ ಆದ ವಿಡಿಯೋ….!

ದೇಶದಾದ್ಯಂತ ಲೋಕಸಭಾ ಚುನಾವಣೆ 2024 ಕಾವು ಜೋರಾಗಿದೆ ಎನ್ನಬಹುದು. ಸದ್ಯ ಲೋಕಸಭಾ ಚುನಾವಣೆಯ ನಿಮಿತ್ತ ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿರುತ್ತದೆ. ಇದೀಗ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ರವರ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೃತ್ಯ ಮಾಡಿದ್ದು, ವಿಡಿಯೋ ವೈರಲ್ ಆಗುತ್ತಿದೆ.

CM Mamata banerjee dance 0

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ (CM Mamata Banerjee) ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಪ್ರಚಾರದ ವೇದಿಕೆಯ ಮೇಲೆ ಹಲವು ಮಹಿಳೆಯರೊಂದಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ವೇದಿಕೆಯಲ್ಲಿ ತೃಣಮೂಲ ಕಾಂಗ್ರೇಸ್ ನ ಮಹಿಳಾ ಕಾರ್ಯಕರ್ತರೊಂದಿಗೆ ಸೇರಿಕೊಂಡು ಸಂಪ್ರದಾಯಿಕ ಗೀತೆಗೆ ಡ್ಯಾನ್ಸ್ ಮಾಡಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಮಹಿಳೆಯರೊಂದಿಗೆ ನಿಂತು ಕಾಲು ಕುಣಿಸಿ, ಅವರ ಕೈ ಹಿಡಿದು ಹಜ್ಜೆ ಹಾಕುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಬಳಿಕ ಅವರ ವೇದಿಕೆಯಿಂದ ಕೆಳಗಿಳಿದಿದ್ದಾರೆ.

ಈ ವಿಡಿಯೋ ನೋಡಲು ಈ ಲಿಂಕ್ ಒಪೆನ್ ಮಾಡಿ: https://x.com/ANI/status/1795747715332313283

ಇನ್ನೂ ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಚುನಾವಣೆ ಜೂನ್ 1 ರಂದು ನಡೆಯಲಿದೆ. ಇನ್ನೂ ಮತದಾನಕ್ಕೆ ಕೇವಲ 72 ಗಂಟೆಗಳಿಗಿಂತ ಕಡಿಮೆ ಇದ್ದು, ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಪಕ್ಷ ಭಾರಿ ಪ್ರಚಾರ ನಡೆಸುತ್ತಿದೆ. ಈ ಬಾರಿ ಮಮತಾ ಬ್ಯಾನರ್ಜಿ ರವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್‍ ಸೇರಿದಂತೆ 9 ಸ್ಥಾನಗಳಲ್ಲಿ 7ನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ ಬಾರಿ ಇಂಡಿ ಒಕ್ಕೂಟವನ್ನು ಅಧಿಕಾರಕ್ಕೆ ತರಲು ಮಮತಾ ಬ್ಯಾನರ್ಜಿ ಸಹ ಭಾರಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular