Saturday, July 5, 2025
HomeStateCrime: ಮನೆಯ ಗಾಂಜಾ ಬೆಳೆದಿದ್ದ ರೀಲ್ಸ್ ರಾಣಿ ಪೊಲೀಸರ ಕೈಗೆ ಸಿಕ್ಕಿಬಿದ್ಳು, ಆಕೆ ಸಿಕ್ಕಿಬಿದಿದ್ದು ಹೇಗೆ...

Crime: ಮನೆಯ ಗಾಂಜಾ ಬೆಳೆದಿದ್ದ ರೀಲ್ಸ್ ರಾಣಿ ಪೊಲೀಸರ ಕೈಗೆ ಸಿಕ್ಕಿಬಿದ್ಳು, ಆಕೆ ಸಿಕ್ಕಿಬಿದಿದ್ದು ಹೇಗೆ ಗೊತ್ತಾ?

ಸಿಲಿಕಾನ್ ಸಿಟಿ ಬೆಂಗಳೂರಿನ ಸದಾಶಿವನಗರ ಪೊಲೀಸರು ಮನೆಯಲ್ಲಿ ಹೂವಿನ ಕುಂಡದಲ್ಲಿ (Crime) ಗಾಂಜಾ ಗಿಡ ಬೆಳೆದಿದ್ದ ದಂಪತಿಯನ್ನು ಬಂಧಿಸಿ, ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಬಂಧಿತರನ್ನು ನೇಪಾಳ (Nepal) ಮೂಲದ ಊರ್ಮಿಳಾ ಹಾಗೂ ಗುರುಂಗ್ ಗಾಂಜಾ ಎಂದು ಗುರ್ತಿಸಲಾಗಿದ್ದು, ಅವರ ವಿರುದ್ದ (Bangalore) ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bangalore reels lady arrested on ganja case 0

ನೇಪಾಳ ಮೂಲದ ಊರ್ಮಿಳಾ ಹಾಗೂ ಗುರುಂಗ್ ದಂಪತಿ ಸದಾಶಿವನಗರದ MSR ನಗರದಲ್ಲಿ ನೆಲೆಸಿದ್ದರು. ಗಾಂಜಾ ಗಿಡದ ಬಗ್ಗೆ ಚೆನ್ನಾಗಿ ತಿಳಿದಿದ್ದ ಇವರು ಮನೆಯ ಹೂ ತೋಟದಲ್ಲಿ ಗಾಂಜಾ ಗಿಡವನ್ನು ಬೆಳೆಸಿ ಸಿಕ್ಕಿಬಿದ್ದಿದ್ದಾರೆ. ಇತ್ತೀಚಿಗೆ ಊರ್ಮಿಳಾ ಮನೆಯ ಬಾಲ್ಕನಿಯಲ್ಲಿ ರೀಲ್ಸ್​ ಮಾಡಿ ಪೋಸ್ಟ್ ಮಾಡಿದ್ದಳು. ಊರ್ಮಿಳಾ ಮಾಡಿದ್ದ ರೀಲ್ಸ್​ನಲ್ಲಿ ಗಾಂಜಾ ಗಿಡ ಕಾಣಿಸಿಕೊಂಡಿದೆ. ಗಾಂಜಾ ಗಿಡ ಕುರಿತು ವ್ಯಕ್ತಿಯೋರ್ವ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಮಾಹಿತಿಯನ್ನು ಆಧರಿಸಿ ಪರಿಶೀಲನೆ ನಡೆಸಿದಾಗ ಗಾಂಜಾ ಗಿಡ ಇರುವುದು ಖಚಿತವಾಗಿದೆ.

15 ವಿವಿಧ ಮಾದರಿಯ ಹೂವಿನ ಗಿಡಗಳ ಮಧ್ಯೆ ದಂಪತಿ ಗಾಂಜಾ ಗಿಡ ಬೆಳೆಸಿದ್ದರು. ರೀಲ್ಸ್ ಲೇಡಿಯ ಮನೆಯಲ್ಲಿ ಗಾಂಜಾ ಗಿಡ ನೋಡಿದ ಪೊಲೀಸರು ನಂತರ ವಿಳಾಸ ಪತ್ತೆ ಹಚ್ಚಿ ಮನೆಗೆ ಹೋಗಿದ್ದಾರೆ. ಈ ವೇಳೆ 15 ವಿವಿಧ ಮಾದರಿಯ ಹೂವಿನ ಗಿಡಗಳ ಮಧ್ಯೆ ಇದ್ದ ಗಾಂಜಾ ಗಿಡ ಪತ್ತೆಯಾಗಿದೆ. ಊರ್ಮಿಳಾ ಮನೆಗೆ ಭೇಟಿ ಕೊಟ್ಟ ಪೊಲೀಸರು, 54 ಗ್ರಾಂ ತೂಕದ ಸೊಪ್ಪು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ಗಾಂಜಾ ಬೆಳೆಸಿದ್ದು ಸಾಲದೇ, ಆ ಗಿಡ ಕಾಣಿಸುವಂತೆ ರೀಲ್ಸ್ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾಳೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular