ಸದ್ಯ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಂದು ಡಿಜಿಟಲ್ ಆಗಿಯೇ ನಡೆಯುತ್ತಿದೆ ಎನ್ನಬಹುದು. ಹಣ ಸಂಪಾದನೆಯಿಂದ ಹಿಡಿದು, ಊಟ ಆರ್ಡರ್ ಮಾಡುವುದು, ಬ್ಯಾಂಕಿಂಗ್ ಹೀಗೆ ಒಂದಲ್ಲ ಅನೇಕ ಕೆಲಸಗಳನ್ನು ಆನ್ ಲೈನ್ ನಲ್ಲಿಯೇ ನಡೆಸಲಾಗುತ್ತದೆ. ಇತ್ತೀಚಿಗೆ ಮದುವೆಗೆ ಹುಡುಗಿ ನೋಡುವುದು, (watch) ಎಂಗೇಜ್ ಮೆಂಟ್, ಮದುವೆ ಇವುಗಳನ್ನೂ ಸಹ ಆನ್ ಲೈನ್ ನಲ್ಲಿಯೇ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.
ಈ ವಿಡಿಯೋದಲ್ಲಿ ಜೋಡಿಯೊಂದು ಆನ್ ಲೈನ್ ಮೂಲಕ ಎಂಗೇಜ್ ಮೆಂಟ್ ಮಾಡಿಕೊಳ್ಳುತ್ತಾರೆ. ವಿಡಿಯೊದಲ್ಲಿ ಕಾಣುವಂತೆ ಯುವತಿ ಮಾತ್ರ ಇರುತ್ತಾಳೆ. ಆದರೆ ಹುಡುಗ ಆನ್ ಲೈನ್ ನಲ್ಲಿ ಮೊಬೈಲ್ ಮೂಲಕ ಎಂಟ್ರಿ ಕೊಡುತ್ತಾನೆ. ಮೊಬೈಲ್ ಯುವತಿಯ ಪಕ್ಕದಲ್ಲಿಟ್ಟು ಇಬ್ಬರಿಗೂ ಎಂಗೇಜ್ ಮೆಂಟ್ ಮಾಡುತ್ತಾರೆ. ಜೋಡಿಯ ಪೋಷಕರು, ಬಂದು ಮಿತ್ರರು ಎಲ್ಲರೂ ಇರುತ್ತಾರೆ. ಈ ಆನ್ ಲೈನ್ ಎಂಗೇಜ್ ಮೆಂಟ್ ವಿಡಿಯೋ ಕಂಡು ಅನೇಕರು ಶಾಕ್ ಆಗಿದ್ದಾರೆ. ಈ ವಿಡಿಯೋವನ್ನು navvarababu_Instagram ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಓರ್ವ ಯುವತಿ ಚೇರ್ ಮೇಲೆ ಕುಳಿತಿರುತ್ತಾಳೆ. ಹಣೆಗೆ ತಿಲಕ ಇಟ್ಟುಕೊಂಡಿರುತ್ತಾಳೆ. ಪಕ್ಕದಲ್ಲೇ ಮತ್ತೊಂದು ಚೇರ್ ನಲ್ಲಿ ಮೊಬೈಲ್ ಇರುತ್ತದೆ. ಮೊಬೈಲ್ ಪೋನ್ ಕ್ಯಾಮೆರಾದಲ್ಲಿ ಯುವಕ ಚಿಕ್ಕ ಫ್ರೇಮ್ ನಲ್ಲಿ ಕಾಣಿಸುತ್ತಾನೆ. ಆ ಪೊಟೋ ಸುತ್ತಲೂ ಕರೆನ್ಸಿ ನೋಟುಗಳನ್ನು ಇಟ್ಟಿರುತ್ತಾರೆ. ವಿಡಿಯೋ ಶೇರ್ ಮಾಡಿದ ವ್ಯಕ್ತಿ ವಿಡಿಯೋಗೆ ಕ್ಯಾಪ್ಷನ್ ಸಹ ಕೊಟ್ಟಿದ್ದಾರೆ. ಡಿಜಿಟಲ್ ಇಂಡಿಯಾ ಅಂದರೇ ಇದೇ ಅಲ್ಲವೇ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಕಳೆದ 15 ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.