Crime News: ಚಾಕೋಲೇಟ್ ಆಸೆ ತೋರಿಸಿ ಮೂರು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ ಪಾಪಿ….!

Crime News – ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳಿಗೆ ಕಾನೂನಿನಡಿ ಕಠಿಣ ಶಿಕ್ಷೆಯಿದ್ದರೂ ಸಹ ಅತ್ಯಾಚಾರಗಳು, ಲೈಂಗಿಕ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ. ಮತ್ತಷ್ಟು ಕಠಿಣ ಕಾನೂನು ಜಾರಿಯಾಗಬೇಕೆಂಬ ಕೂಗು ಸಹ ಇದೆ. ಮೂರು ವರ್ಷದ ಬಾಲಕಿಯ ಮೇಲೆ ಕಾಮಾಂದನೋರ್ವ ಅತ್ಯಾಚಾರವೆಸಗಿದ್ದಾನೆ. ಚಾಕೋಲೇಟ್ ಕೊಡಿಸುವ ಆಸೆ ತೋರಿಸಿದ ಕಾಮುಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Father Assault on Minor Daughter

ಉತ್ತರಪ್ರದೇಶದ ಗಾಜಿಪುರದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿ ಮನೆಯ ಹೊರಗಡೆ ಆಟವಾಡುತ್ತಿದ್ದಾಗ, ಕಾಮುಕ ಬಂದು ಚಾಕೋಲೇಟ್ ಕೊಡಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ಬಾಲಕಿ ಅವನ ಜೊತೆ ಹೋಗಿದೆ. ಈ ಸಮಯದಲ್ಲಿ ಪುಟ್ಟ ಬಾಲಕಿ ಎಂದೂ ನೋಡದೇ ಅತ್ಯಾಚಾರವೆಸಗಿದ್ದಾನೆ. ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಳಿಕ ಆರೋಪಿ ಓಡಿ ಹೋಗಲು ಯತ್ನಿಸಿದ್ದಾನೆ. ಈ ಸಮಯದಲ್ಲಿ ಕಾಮುಕನ ಕಾಲಿಗೆ ಗುಂಡು ಹಾರಿಸಿ, ಕಾಮುಕನನ್ನು ಬಂಧನ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Friends raped girlfriend 1

ಇನ್ನೂ ಮುಜಾಫರ್‍ ನಗರದಲ್ಲೂ ಸಹ ಅಂತಹುದೇ ಘಟನೆಯೊಂದು ನಡೆದಿದೆ. ಮುಜಾಫರ್‍ ನಗರದ ಕೆಫೆಯೊಂದರಲ್ಲಿ 15 ವರ್ಷದ ಬಾಲಕಿಯ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರವೆಸಗಿದ್ದಾರೆ. ಈ ಕುರಿತು ಬಾಲಕಿ ಪೋಷಕರಿಗೆ ತಿಳಿಸಿದ್ದು, ಆರೋಪಿಗಳಾದ ವಿಶಾಲ್ ಹಾಗೂ ಆತನ ಸ್ನೇಹಿತ ಅಂಕಿತ್ ಹಾಗೂ ಕೆಫೆ ಮಾಲೀಕ ಅಕ್ಷಯ್ ಶರ್ಮಾ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. 10ನೇ ತರಗತಿಯಲ್ಲಿ ಓದುತ್ತಿರುವ ಸಂತ್ರಸ್ತ ಬಾಲಕಿಯನ್ನು ಕೆಫೆಗೆ ಕರೆಸಿಕೊಂಡ ವಿಶಾಲ್ ಹಾಗೂ ಅಂಕಿತ್ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

Scroll to Top