Friday, February 13, 2026
HomeInternationalViral Video: ಅಯ್ಯೋ ದೇವ್ರೇ.. ಪ್ರಿಯಕರನ ಪತ್ನಿ ಬಂದ್ಲು ಅಂತ 10ನೇ ಮಹಡಿಯಿಂದ ನೇತಾಡಿದ ಯುವತಿ!...

Viral Video: ಅಯ್ಯೋ ದೇವ್ರೇ.. ಪ್ರಿಯಕರನ ಪತ್ನಿ ಬಂದ್ಲು ಅಂತ 10ನೇ ಮಹಡಿಯಿಂದ ನೇತಾಡಿದ ಯುವತಿ! ಮುಂದೇನಾಯ್ತು ಗೊತ್ತಾ?

ಸೋಷಿಯಲ್ ಮೀಡಿಯಾ ಅನ್ನೋದು ವಿಚಿತ್ರಗಳ ಲೋಕ. ಇಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಕೆಲವು ನಗಿಸಿದರೆ, ಇನ್ನೂ ಕೆಲವು ಅಯ್ಯೋ ಪಾಪ ಎನಿಸುತ್ತವೆ. ಆದರೆ ಸದ್ಯ ನೆಟ್ಟಿಗರ ಎದೆ ಝಲ್ಲೆನಿಸುವಂಥಾ ವಿಡಿಯೋವೊಂದು ವೈರಲ್ (Viral Video) ಆಗುತ್ತಿದೆ. ಹೌದು, ಅನೈತಿಕ ಸಂಬಂಧಗಳು ಎಂಥಾ ಅಪಾಯಕ್ಕೆ ದೂಡಬಲ್ಲದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

Woman Hanging From 10th Floor Balcony in China – Viral Escape After Lover’s Wife Arrives

Viral Video – ಏನಿದು ಘಟನೆ?

ಚೀನಾದ ಗುವಾಂಗ್‌ಡಾಂಗ್‌ನಲ್ಲಿ (Guangdong) ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಬರೋಬ್ಬರಿ 10ನೇ ಮಹಡಿಯ ಬಾಲ್ಕನಿಯಿಂದ (10th Floor Balcony) ಕೆಳಗೆ ನೇತಾಡುತ್ತಿರುವ ದೃಶ್ಯವಿದೆ. ನೋಡುಗರಿಗೆ ಎಲ್ಲಿ ಆಕೆ ಕೈಜಾರಿ ಕೆಳಗೆ ಬೀಳುತ್ತಾರೋ ಎಂಬ ಆತಂಕ ಉಂಟಾಗುವಂತಿದೆ. ಈ ಘಟನೆ ಕಳೆದ ನವೆಂಬರ್ 30 ರಂದು ನಡೆದಿದೆ ಎನ್ನಲಾಗಿದೆ.

ಪ್ರಿಯಕರನ ಪತ್ನಿ ಬಂದಿದ್ದೇ ‘ಟ್ವಿಸ್ಟ್’!

ಅಷ್ಟಕ್ಕೂ ಆಕೆ ಹಾಗೆ ಜೀವದ ಹಂಗು ತೊರೆದು ನೇತಾಡಿದ್ದೇಕೆ ಗೊತ್ತಾ? ವರದಿಗಳ ಪ್ರಕಾರ, ಆ ಮನೆಯಲ್ಲಿದ್ದ ವ್ಯಕ್ತಿ ತನ್ನ ಪ್ರಿಯತಮೆಯೊಂದಿಗೆ ಏಕಾಂತದಲ್ಲಿದ್ದನಂತೆ. ಆದರೆ ಅನಿರೀಕ್ಷಿತವಾಗಿ ಆತನ ಪತ್ನಿ ಮನೆಗೆ ಬಂದಿದ್ದಾಳೆ. ಹೆಂಡತಿ ಕೈಗೆ ಸಿಕ್ಕಿಬಿದ್ದರೆ ಎಲ್ಲಿ ರಾದ್ಧಾಂತವಾಗುತ್ತದೋ ಎಂದು ಭಯಬಿದ್ದ ಆ ಪತಿ ಮಹಾಶಯ, ತನ್ನ ಪ್ರಿಯತಮೆಗೆ ಬಾಲ್ಕನಿಯಲ್ಲಿ ಅವಿತುಕೊಳ್ಳುವಂತೆ ಹೇಳಿದ್ದಾನೆ. ವಿಡಿಯೋದಲ್ಲಿ ಶರ್ಟ್ ಇಲ್ಲದ ವ್ಯಕ್ತಿಯೊಬ್ಬ ಕಿಟಕಿಯ ಮೂಲಕ ಆಕೆಯೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಬಹುಶಃ ಆತ ಆಕೆಗೆ ಸೂಚನೆ ನೀಡುತ್ತಿದ್ದಿರಬಹುದು. Read this also : ನಿಂತಿದ್ದ ಗೂಡ್ಸ್‌ ರೈಲಿನ ಕೆಳಗೆ ಪ್ರೇಮಿಗಳ ಸರಸ.. ಸಡನ್ ಆಗಿ ರೈಲು ಸ್ಟಾರ್ಟ್ ಆದಾಗ ಆಗಿದ್ದೇ ಬೇರೆ! ವಿಡಿಯೋ ನೋಡಿ…!

ಸಿನಿಮಾ ಸ್ಟೈಲ್‌ನಲ್ಲಿ ಎಸ್ಕೇಪ್!

ಪತ್ನಿಯ ಕಣ್ಣಿಗೆ ಬೀಳಬಾರದು ಎಂದು ಆ ಯುವತಿ ಮಾಡಿದ್ದ ಸಾಹಸ ಅಷ್ಟಿಷ್ಟಲ್ಲ. 10ನೇ ಮಹಡಿಯಿಂದ ಕೆಳಕ್ಕೆ ಇಳಿಯಲು ಆಕೆ ಡ್ರೈನೇಜ್ ಪೈಪ್‌ಗಳು ಮತ್ತು ಕಿಟಕಿಗಳ ಆಸರೆ ಪಡೆದಿದ್ದಾಳೆ. ಪೈಪ್ ಮೂಲಕ ಜಾರುತ್ತಾ ಕೆಳಗಿನ ಮಹಡಿಯ ಫ್ಲಾಟ್‌ ಒಂದರ ಕಿಟಕಿಯ ಬಳಿ ಬಂದು ನಿಂತಿದ್ದಾಳೆ. ಅಲ್ಲಿ ಆಕೆ ಸಹಾಯಕ್ಕಾಗಿ ಕಿಟಕಿಯನ್ನು ಬಡಿದಿದ್ದಾಳೆ. ಅದೃಷ್ಟವಶಾತ್, ಆ ಮನೆಯಲ್ಲಿದ್ದವರು ಕಿಟಕಿ ತೆರೆದು ಆಕೆಯನ್ನು ಒಳಗೆ ಎಳೆದುಕೊಂಡು ರಕ್ಷಿಸಿದ್ದಾರೆ. ಈ ಮೂಲಕ ದೊಡ್ಡದೊಂದು ಅಪಾಯದಿಂದ ಆಕೆ ಪಾರಾಗಿದ್ದಾಳೆ.

Woman Hanging From 10th Floor Balcony in China – Viral Escape After Lover’s Wife Arrives

Viral Video – ನೆಟ್ಟಿಗರು ಏನಂತಾರೆ?

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
  • ಒಬ್ಬ ಬಳಕೆದಾರ, ಈಕೆ ನಿಜವಾದ ಸ್ಪೈಡರ್ ವುಮನ್ (Spider-woman) ಇರಬೇಕು,” ಎಂದು ತಮಾಷೆ ಮಾಡಿದ್ದಾರೆ.
  • ಮತ್ತೊಬ್ಬರು, ಈಕೆಯನ್ನು ನೋಡಿದರೆ ಇದರಲ್ಲಿ ಸಾಕಷ್ಟು ಅನುಭವ ಇರುವಂತೆ ಕಾಣುತ್ತಿದೆ,” ಎಂದು ಕಾಲೆಳೆದಿದ್ದಾರೆ.
  • ಇನ್ನೂ ಕೆಲವರು ಗಂಭೀರವಾಗಿ ಪ್ರತಿಕ್ರಿಯಿಸಿದ್ದು, ನಿಮ್ಮ ಜೀವವನ್ನು ಇಂಥಾ ಅಪಾಯಕ್ಕೆ ತಳ್ಳುವ ಯಾವ ಪುರುಷನೂ ಪ್ರೀತಿಗೆ ಅರ್ಹನಲ್ಲ. ದಯವಿಟ್ಟು ನಿಮ್ಮ ಗೌರವ ಉಳಿಸಿಕೊಳ್ಳಿ,” ಎಂದು ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ ಅನೈತಿಕ ಸಂಬಂಧ ಮುಚ್ಚಿಹಾಕಲು ಹೋದ ಈ ಸಾಹಸ ಈಗ ಜಗತ್ತಿನಾದ್ಯಂತ ಸುದ್ದಿಯಾಗಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular