Camel – ಸಾಮಾನ್ಯವಾಗಿ ದ್ವಿಚಕ್ರವಾಹನದಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬೇಕು. ಆದರೆ ಕೆಲವೊಮ್ಮೆ ತ್ರಿಬಲ್ ರೈಡಿಂಗ್ ಮಾಡುತ್ತಿರುತ್ತಾರೆ. ಕೆಲವೊಮ್ಮೆ ನಾಲ್ಕೈದು ಮಂದಿ ಬೈಕ್ ನಲ್ಲಿ ಪ್ರಯಾಣಿಸುತ್ತಾರೆ. ಕೆಲವರು ಕುರಿಗಳು, ನಾಯಿಗಳನ್ನು ಸಾಗಿಸಿರುವುದನ್ನೂ ಸಹ ನೋಡಿರಬಹುದು. ಆದರೆ ಇಲ್ಲೊಂದು ಸನ್ನಿವೇಶ ಕಂಡರೇ, ನೀವೂ ಶಾಕ್ ಆಗಬಹುದು. ಸುಮಾರು 8-9 ಅಡಿ ಎತ್ತರದ ಒಂಟೆಯನ್ನೇ (Camel) ಬೈಕ್ ಮೇಲೆ ಸಾಗಿಸುತ್ತಿರುವ ವಿಡಿಯೋ ಒಂದು ಸೊಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿ ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ಸ್ ಮಾಡುತ್ತಿದ್ದಾರೆ.
ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಅಥವಾ ಇಬ್ಬರು ಪ್ರಯಾಣಿಸಬಹುದಾಗಿದೆ. ಕೆಲವೊಮ್ಮೆ ನಾಲ್ಕೈದು ಮಂದಿ ಸಹ ಪ್ರಯಾಣಿಸುವಂತಹ ಪೊಟೋಗಳು ಹಾಗೂ ವಿಡಿಯೋಗಳು ವೈರಲ್ ಆಗಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆದರೆ ಇಲ್ಲಿ ಇಬ್ಬರು ಸುಮಾರು 8ರಿಂದ 9 ಅಡಿ ಎತ್ತರದ ಬೃಹತ್ ಗಾತ್ರದ ಒಂಟೆಯನ್ನು ಬೈಕ್ ನಲ್ಲಿ ಹೊತ್ತುಕೊಂಡು ಹೋಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಜಿಸ್ಟ್ ನ್ಯೂಸ್ ಎಂಬ ಇನ್ಸ್ಟಾ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಬೈಕ್ ಮೇಲೆ ಒಂಟೆಯನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಬೈಕ್ ನಲ್ಲಿ ಪ್ರಯಾಣಿಸುತ್ತಿರುವ ಇಬ್ಬರು ವ್ಯಕ್ತಿಗಳು ಒಂಟೆಯನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ಎಲ್ಲಿಯದ್ದು, ಯಾವಾಗ ರೆಕಾರ್ಡ್ ಮಾಡಿದ್ದು ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ ಎಂದು ವಿಡಿಯೋ ಹಂಚಿಕೊಂಡಿರುವಂತಹವರೇ ಬರೆದುಕೊಂಡಿದ್ದಾರೆ. ಓರ್ವ ಬೈಕ್ ಚಲಾಯಿಸುತ್ತಿದ್ದರೇ, ಮತ್ತೋರ್ವ ಹಿಂದೆ ಕುಳಿತಿದ್ದಾನೆ. ಇಬ್ಬರ ಮಧ್ಯೆ ಒಂಟೆಯನ್ನು ಹಿಡಿದಿಟ್ಟುಕೊಂಡಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಅಲ್ಲಿದ್ದವರು. ಅಷ್ಟೊಂದು ದೊಡ್ಡ ಪ್ರಾಣಿಯನ್ನು ಬೈಕ್ ಮೇಲೆ ಹೇಗೆ ಸಾಗಿಸುತ್ತಿದ್ದಾರೆ ಎಂದು ಆಶ್ಚರ್ಯಚಕಿತರಾಗಿದ್ದಾರೆ. ಪ್ರಾಣಿ ಹಿಂಸೆ ಮಾಡಿದ ಈ ಬೈಕ್ ಸವಾರರನ್ನು ಕಾನೂನಿನಂತೆ ಬಂಧನ ಮಾಡಬೇಕೆಂದು ಅನೇಕರು ಆಗ್ರಹಿಸಿದ್ದಾರೆ.