Mass Marriages: ಬಾಗೇಪಲ್ಲಿಯಲ್ಲಿ ಅದ್ದೂರಿಯಾಗಿ ನೆರವೇರಿದ ಸಾಮೂಹಿಕ ವಿವಾಹ ಕಾರ್ಯಕ್ರಮಗಳು….!

Mass Marriages – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್‍ವತಿಯಿಂದ ಶ್ರೀ ಕ್ಷೇತ್ರ ಗಡದಿಂ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯದ (Mass Marriages) ಆವರಣದಲ್ಲಿ ಏರ್ಪಡಿಸಿದ್ದ 22ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 101 ಜೋಡಿ ವಿವಾಹವಾಗುವ ಮೂಲಕ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಪತ್ನಿ ಶಿಲಾ ಸುಬ್ಬಾರೆಡ್ಡಿ ರವರು ತಂದೆ ಮತ್ತು ತಾಯಿ ಸ್ಥಾನದಲ್ಲಿ ನಿಂತು 101 ಜೋಡಿಗಳಿಗೆ ಮದುವೆ ಕಾರ್ಯನಿರ್ವಹಿಸಿದರಲ್ಲದೆ, ಮದುವೆಯಾದ ನೂತನ ದಂತಪತಿಗಳಿಗೆ ತಮ್ಮ ಕುಟುಂಬದ ನಿರ್ವಾಹಣೆಗಾಗಿ ತಲಾ ಒಂದು ಸೀಮೆ ಹಸುವನ್ನು ವಿತರಿಸಿದರು.

Mass Marriages in Bagepalli 1

ಈ ವೇಳೆ ಮಾತನಾಡಿದ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಪೀಠಾಧ್ಯಕ್ಷ ಮಂಗಳಾನಂದ ಸ್ವಾಮಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ  ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಾಗೂ ಬಡವರ ಬಗ್ಗೆ ಕಾಳಜಿ ಇರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರಿಗೆ ಇನ್ನಷ್ಟು ಸೇವೆ ಮಾಡಲು ಸಚಿವ ಸ್ಥಾನ ಸಿಗಲಿ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರಾಜಕೀಯಕ್ಕೆ ಬರುವುದಕ್ಕೂ ಮೊದಲಿನಿಂದಲ್ಲೂ ಈ ಭಾಗದಲ್ಲಿ ಬಡವರ ಬಗ್ಗೆ ಅಪಾರವಾದ ಕಾಳಜಿಯಿಂದ ಉಚಿತ ಸಾಮೂಹಿಕ ವಿವಾಹಗಳನ್ನು ಮಾಡಿಕೊಂಡು ಬಂದಿದ್ದಾರೆ. ಯಾವುದೇ ಪ್ರತಿಫಲಾಕ್ಷೆ ನಿರೀಕ್ಷೆ ಮಾಡದೆ  ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.  ಶಾಸಕರು ಸತತ ಮೂರ ಬಾರಿ ಶಾಸಕರಾಗಿ ಆಯ್ಕೆ ಆಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.  ಈ ಭಾಗದಲ್ಲಿ ನಿರಂತರವಾಗಿ ಸಮಾಜ ಸೇವೆ ಹಾಗೂ ಬಡವರ ಬಗ್ಗೆ ಕಾಳಜಿ ಇರುವಂತಹ  ಶಾಸಕರಿಗೆ ಮಂತ್ರಿ ಗಿರಿ ಸಿಕ್ಕರೆ ಇನ್ನಷ್ಟು ಜನರ ಸೇವೆ ಮಾಡುತ್ತಾರೆ ಇದರಿಂದ ಇವರಿಗೆ ಸಚಿವ ಸ್ಥಾನ ಸಿಗಲಿ ಎಂದು ಆರ್ಶೀವದಿಸಿದರು.

ನಂತರ ಶಾಸಕ ಎನ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.  ಈ ಭಾಗದ ಬಡವರು ತಮ್ಮ ಮಕ್ಕಳ ಮುದುವೆ ಮಾಡಲು ಸಾಲ ಮಾಡಾರದು ಎನ್ನುವ ಉದ್ದೇಶದಿಂದ ಕಳೆದ 22 ವರ್ಷಗಳಿಂದ ಸತತವಾಗಿ ಉಚಿತ ಸಾಮೂಹಿಕ ವಿವಾಹಗಳನ್ನು ನಮ್ಮ ಟ್ರಸ್ಟ್‍ವತಿಯಿಂದ ನಡೆಸಿಕೊಂಡು ಬರುತ್ತೇನೆ ಎಂದ ಅವರು ಸುಮಾರು 8 ಸಾವಿರಕ್ಕೆ ಹೆಚ್ಚು ಜೋಡಿಗಳು ವಿವಾಹಗಳಾಗಿವೆ ಹಾಗೂ 3500 ಕ್ಕೂ ಹೆಚ್ಚು ಸೀಮೆ ಹಸುಗಳನ್ನು ನೂತನ ದಂಪತಿಗಳಿಗೆ ವಿತರಿಸಲಾಗಿದೆ ಎಂದ ಅವರು ಧಾನ ಮಾಡಿರುವುದು ಹೇಳಿಕೋಬಾರದು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ, ಭಗವಂತ ಎಲ್ಲರಿಗೂ, ಸುಖ,ನೆಮ್ಮದಿ ಪ್ರಸಾದಿಸಲಿ ಎಂದು ನೂತನ ದಂಪತಿಗಳಿಗೆ ಶುಭ ಆರೈಸಿದರು.

Mass Marriages in Bagepalli 2

ಬಡವರು ತಮ್ಮ ಮಕ್ಕಳ ಮದುವೆ ಮಾಡಲು ಸಾಲ ಮಾಡಬಾರದು ಎನ್ನುವ ಉದ್ದೇಶದಿಂದ  ನಾನು ಈ ಮದುವೆ ಮಾಡುತ್ತಿದ್ದೇನೆ ಆದರೆ ಇಲ್ಲಿ ಮದುವೆ ಮಾಡಿಕೊಂಡ ಹಲವರು ಮತ್ತೇ ವಿಜೃಂಭಣೆಯಿಂದ ಆರತೆಕ್ಷೆ ಮಾಡಿಕೊಳ್ಳಲು ಮತ್ತೇ ಸಾಲ ಮಾಡುವಂತಹ ಉದಾಹರಣೆಗಳಿಗೆ ದಯವಿಟ್ಟು ಇಂತಹ ಕೆಲಸಕ್ಕೆ ಕೈಹಾಕಬೇಡಿ ಎಂದು ಸಲಹೆ ನೀಡಿದ ಅವರು ಮದುವೆಯಾದ ಜೋಡಿಗಳಿಗೆ ನೀಡುವ ಸೀಮೆ ಹಸುವನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗಿಸಿ ಎಂದ ಅವರು ನನ್ನ ಜೀವ ಇರುವವರೆವಿಗೂ ಈ ಕ್ಷೇತ್ರದ ಜನತ ಸೇವೆ ಹಾಗೂ ಉಚಿತ ಸಾಮೂಹಿಕ ವಿವಾಹಗಳನ್ನು ಮುಂದುವರಸುವುದಾಗಿ ಭರವಸೆ ನೀಡಿದರು.

ಈ ಸಾಮೂಹಿಕ ವಿವಾಹಗಳಲ್ಲಿ  ವಧು-ವರರಿಗೆ ಬಟ್ಟೆ, ಕಾಲುಂಗರ, ಚಿನ್ನದ ತಾಳಿ ನೀಡಿದ್ದಾರೆ. ವಧು ವರರ ತಂದೆ ತಾಯಿಗೂ ಸಹ ಬಟ್ಟೆಗಳನ್ನು ನೀಡಿದ್ದಾರೆ ಅಲ್ಲದೆ ಒಂದೊಂದು ಜೋಡಿಗೂ ಸಹ ಒಬ್ಬೊಬ್ಬ ಪುರೋಹಿತರಿಂದ ವಿಹಾಗಳನ್ನು ಅಚ್ಚಕಟ್ಟಾಗಿ, ಸಾಂಪ್ರದಾಯಕವಾಗಿ, ಅದ್ದೂರಿಯಾಗಿ ವಿವಾಹ ನಡೆಸಿಕೊಟ್ಟಿದಲ್ಲದೆ  ವಿವಾಹ  ಕಾರ್ಯಕ್ರಮ ಬಂದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು.  ಈ ಸಾಮೂಹಿಕ ವಿವಾಹಗಳಲ್ಲಿ ವಿವಾಹವಾದ ಎಸ್.ಸಿ ಮತ್ತು ಎಸ್.ಟಿ ಜೋಡಿಗಳಿಗೆ ಸರ್ಕಾರದಿಂದ 50 ಸಾವಿರ ರೂ.ಗಳ ಪ್ರೋತ್ಸಾಹ ಧನ ಹಾಗೂ ರೈತ ಕುಟುಂಬದವಿರಿಗೆ ಕೊಳವೆ ಬಾವಿ ಕೊಡಿಸುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು.

Leave a Reply

Your email address will not be published. Required fields are marked *

Next Post

Yogi Adityanath: ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ಆತನ ಆತ್ಮವೇ ಕಾರಣ ಎಂದ ಯೋಗಿ, ಯಾರದ್ದು ಆ ಆತ್ಮ?

Sat Dec 7 , 2024
Yogi Adityanath – ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಸದ್ಯಕ್ಕೆ ನಿಲ್ಲುವ ಮಟ್ಟದಲ್ಲಿಲ್ಲ ಎಂದೇ ಹೇಳಬಹುದು. ಬಾಂಗ್ಲಾ ಹಿಂದೂಗಳು, ಹಿಂದೂ ದೇವಾಲಯಗಳು, ಹಿಂದೂ ನಾಯಕರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದರ ಜೊತೆಗೆ ಬಾಂಗ್ಲಾದ ಇಸ್ಕಾನ್ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಪ್ರಭು ರವರನ್ನು ಬಂಧಿಸಿದ್ದಾರೆ. ಈ ಕುರಿತು ಅನೇಕ ನಾಯಕರೂ ಸಹ ಆಕ್ರೋಷ ಹೊರಹಾಕಿದ್ದಾರೆ. ಇದೀಗ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಬಾಂಗ್ಲಾದೇಶದಲ್ಲಿನ […]
Yogi Comments on bangladesh
error: Content is protected !!