Yogi Adityanath – ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಸದ್ಯಕ್ಕೆ ನಿಲ್ಲುವ ಮಟ್ಟದಲ್ಲಿಲ್ಲ ಎಂದೇ ಹೇಳಬಹುದು. ಬಾಂಗ್ಲಾ ಹಿಂದೂಗಳು, ಹಿಂದೂ ದೇವಾಲಯಗಳು, ಹಿಂದೂ ನಾಯಕರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದರ ಜೊತೆಗೆ ಬಾಂಗ್ಲಾದ ಇಸ್ಕಾನ್ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಪ್ರಭು ರವರನ್ನು ಬಂಧಿಸಿದ್ದಾರೆ. ಈ ಕುರಿತು ಅನೇಕ ನಾಯಕರೂ ಸಹ ಆಕ್ರೋಷ ಹೊರಹಾಕಿದ್ದಾರೆ. ಇದೀಗ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ಆತನ ಆತ್ಮವೇ ಕಾರಣ ಎಂದು ಹೇಳಿದ್ದಾರೆ. ಅಷ್ಟಕ್ಕೂ ಆ ಆತ್ಮ ಯಾರದ್ದು ಎಂಬ ವಿಚಾರಕ್ಕೆ ಬಂದರೇ,
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರಕ್ಕೆ ಮೊಹಮ್ಮದ್ ಅಲಿ ಜಿನ್ನಾ ಆತ್ಮವೇ ಕಾರಣ. ಆತನ ಆತ್ಮ ಇನ್ನೂ ಬಾಂಗ್ಲಾದಲ್ಲಿಯೇ ಉಳಿದಿದೆ. ಅವರ ಪರಂಪರೆಯೇ ಕಾರಣ ಎಂದು ಉತ್ತರಪ್ರದೇಶದ ಸಿಎಂ ಯೋಗಿ ಹೇಳಿದ್ದಾರೆ. ಕಳೆದ ಆಗಸ್ಟ್ ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಶೇಖ್ ಹಸೀನಾ ನೇತೃಥ್ವದ ಸರ್ಕಾರವನ್ನು ಪದಚ್ಯುತಗೊಳಿಸಿದ ಬಳಿಕ ಹಿಂದೂಗಳ ಮೇಲೆ ಹಿಂಸಾತ್ಮಕ ಕೃತ್ಯಗಳನ್ನು ಪ್ರಚೋದಿಸಲಾಗಿತ್ತು. ಬಳಿಕ ಬಾಂಗ್ಲಾದ ಹಿಂದೂಗಳು, ಹಿಂದೂ ದೇವಾಲಯಗಳ, ಹಿಂದೂ ನಾಯಕರು, ಮುಖಂಡರು, ಹಿಂದೂ ವ್ಯಾಪಾರಗಳನ್ನೂ ಸಹ ಧ್ವಂಸಗೊಳಿಸಿದೆ. ಅದಕ್ಕೆಲ್ಲಾ ಮೊಹ್ಮದ್ ಅಲಿ ಜಿನ್ನಾ ಪರಂಪರೆಯೇ ಕಾರಣ ಎಂದಿದ್ದಾರೆ.
Yogi Adityanath ರವರ ಭಾಷಣದ ವಿಡಿಯೋ ಇಲ್ಲಿದೆ ನೋಡಿ: Click Here
ಲಕ್ನೋದಲ್ಲಿ ನಡೆದ ಮಹಾಪರಿನಿರ್ವಾಣ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯೋಗಿ 1947 ರಲ್ಲಿ ದೇಶ ವಿಭಜನೆಯ ರೂಪದಲ್ಲಿ ನಮ್ಮ ಮುಂದೆ ಬಂದ ಪಾಪ, ಅದರ ಕೊಳಕು ಮುಖವನ್ನು ಇಂದು ಬಾಂಗ್ಲಾದೇಶದಲ್ಲಿ ನಾವು ನೋಡುತ್ತಿದ್ದೇವೆ. ಹಿಂದೂಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿರುದ್ದ ರಾಜಧಾನಿ ಢಾಕಾ ಸೇರಿದಂತೆ ಬಾಂಗ್ಲಾದೇಶದಾದ್ಯಂತ ಪ್ರತಿಭಟನೆಗಳು ಹೆಚ್ಚಾಗುತ್ತಿದೆ. ಇಸ್ಕಾನ್ ಮಾಜಿ ನಾಯಕ ಕೃಷ್ಣ ದಾಸ್ ರವರನ್ನು ಬಿಡುಗಡೆ ಮಾಡುವಂತೆ ಹೋರಾಟ ನಡೆಯುತ್ತಿದೆ. ಬಾಂಗ್ಲಾದಲ್ಲಿ ಮತಷ್ಟು ಉದ್ವಿಗ್ನತೆ ಹೆಚ್ಚಾಗುವಂತೆ ಮಾಡಿದೆ ಎಂದರು.