BSNL ಇತ್ತೀಚಿಗೆ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ ಸರ್ಕಾರಿ ಸ್ವಾಮ್ಯದ BSNL ಕಂಪನಿ ಇದೀಗ ಇತರೆ ಟೆಲಿಕಾಂ ಕಂಪನಿಗಳಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಮುಂದಾಗಿದೆ. ಮೂಲಗಳ ಪ್ರಕಾರ ಕಳೆದ ಸೆಪ್ಟೆಂಬರ್ ಒಂದೇ ತಿಂಗಳಲ್ಲಿ 8 ಲಕ್ಷ ಹೊಸ ಗ್ರಾಹಕರು ಬಿ.ಎಸ್.ಎನ್.ಎಲ್ ಮನೆಗೆ ಸೇರಿದ್ದಾರೆ. ದಿನೇ ದಿನೇ ಬಿ.ಎಸ್.ಎನ್.ಎಲ್ ಕಡೆಗೆ ವಾಲುವ ಗ್ರಾಹಕರೂ ಸಹ ಹೆಚ್ಚಾಗುತ್ತಿದ್ದಾರೆ. ಇದೀಗ ಟೆಲಿಕಾಂ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧಿಗಳಾದ JIO, Airtel ಕಂಪನಿಗಳಿಗೆ ಟಕ್ಕರ್ ಕೊಡಲಿದೆ ಎಂದು ತಿಳಿದುಬಂದಿದೆ.
ಕೆಲವು ತಿಂಗಳುಗಳ ಹಿಂದೆಯಷ್ಟೆ Airtel, Jio ಸೇರಿದಂತೆ ಇತರೆ ಕಂಪನಿಗಳು ತಮ್ಮ ಪ್ಲಾನ್ ಗಳ ದರವನ್ನು ಏರಿಕೆ ಮಾಡಿತ್ತು. ಇದರಿಂದ ಬೇಸತ್ತ ಗ್ರಾಹಕರು ಸರ್ಕಾರಿ ಸ್ವಾಮ್ಯದ BSNL ನತ್ತ ಮುಖ ಮಾಡಿದರು. ಲಕ್ಷಾಂತರ ಮಂದಿ BSNL ಗೆ ಪೋರ್ಟ್ ಆದರು. ಮೂಲಗಳ ಪ್ರಕಾರ ಸೆಪ್ಟೆಂಬರ್ ಬಂದೇ ತಿಂಗಳಲ್ಲಿ 8 ಲಕ್ಷ ಹೊಸ ಗ್ರಾಹಕರು ಬಿ.ಎಸ್.ಎನ್.ಎಲ್ ಗೆ ಸೇರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಿ.ಎಸ್.ಎನ್.ಎಲ್. ನತ್ತ ಆಕರ್ಷಣೆಯಾಗುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಅದಕ್ಕೆ ಮುಖ್ಯ ಕಾರಣ BSNL ನೀಡುತ್ತಿರುವ ಪ್ಲಾನ್ ಗಳು ಎಂದೇ ಹೇಳಬಹುದಾಗಿದೆ.
ಸದ್ಯ BSNL ಒಟ್ಟು 91.89 ಲಕ್ಷ ಗ್ರಾಹಕರನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಶೇ.7.98 ಪಾಲನ್ನು ಏರಿಕೆ ಮಾಡಿಕೊಂಡಿದೆ ಎನ್ನಲಾಗಿದೆ. ಖಾಸಗಿ ಸಂಸ್ಥೆಗಳಾದ JIO, Airtel ಹಾಗೂ Vodafone ಕಂಪನಿಗಳು ದರ ಹೆಚ್ಚಳ ಮಾಡಿರುವುದರಿಂದ ಈ ಕಂಪನಿಗಳ ಗ್ರಾಹಕರು BSNL ಕಡೆ ವಾಲುತ್ತಿದ್ದಾರೆ. ಸದ್ಯ BSNL 4G ಸೇವೆಯಿಂದ 5G ಸೇವೆಗೆ ಅಪ್ ಗ್ರೇಡ್ ಆಗುತ್ತಿದೆ. 2025 ರಿಂದ ಜನವರಿಯಿಂದ ದೇಶದ ಹಲವು ನಗರಗಳಲ್ಲಿ BSNL 5G ನೆಟ್ ವರ್ಕ್ ಆರಂಭಿಸಲಿದೆ. ಒಂದು ವೇಳೆ BSNL ಆದಷ್ಟು ಶೀಘ್ರವಾಗಿ 5G ಸೇವೆಯನ್ನು ಆರಂಭಿಸಿದರೇ ಮತಷ್ಟು ಗ್ರಾಹಕರು ಬಿ.ಎಸ್.ಎನ್.ಎಲ್ ಗೆ ಪೋರ್ಟ್ ಆಗಬಹುದು ಎಂದು ಹೇಳಲಾಗುತ್ತಿದೆ.