Congress – ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಚುನಾವಣೆ ಸಮಯದಲ್ಲಿ ತಿಳಿಸಿದಂತಹ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡಿದ್ದು, (Congress) ಆ ಗ್ಯಾರಂಟಿಗಳು ನಮಗೆ ಶ್ರೀ ರಕ್ಷೆಯಾಗಿದೆ. ಜೊತೆಗೆ ರಾಜ್ಯದಲ್ಲಿ ಅಭಿವೃದ್ದಿ ಎಂಬುದು ಕಾಂಗ್ರೇಸ್ ಪಕ್ಷದಿಂದ ಮಾತ್ರ ಸಾಧ್ಯವಿದೆ ಎಂದು ರಾಜ್ಯ ಯುವ (Congress) ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ತಿಳಿಸಿದರು.
ರಾಜ್ಯದಲ್ಲಿ ಸಂಡೂರು, (Congress) ಚನ್ನಪಟ್ಟಣ ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಗೆಲುವು ಸಾಧಿಸಿದ್ದು, ಈ ಕುರಿತು ಮಾತನಾಡಿದ ಬಾಲೇನಹಳ್ಳಿ ರಮೇಶ್, ನನ್ನನ್ನು ಚನ್ನಪಟ್ಟಣ ಉಪಚುನಾವಣೆಗೆ ಉಸ್ತುವಾರಿಯನ್ನಾಗಿ ನೇಮಿಸಿದ್ದರು. (Congress) ಈ ಚುನಾವಣೆಯ ಪ್ರಚಾರಕ್ಕೆ ಹೋದಾಗ ಅಲ್ಲಿನ ಮತದಾರರು ಕಾಂಗ್ರೇಸ್ ಪಕ್ಷದ ಮೇಲೆ ಎಷ್ಟೊಂದು ಒಲವು ಹೊಂದಿದ್ದಾರೆ ಎಂಬುದು ತಿಳಿಯಿತು. ಕಾಂಗ್ರೇಸ್ ಗ್ಯಾರಂಟಿಗಳಿಂದ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ನಮ್ಮ (Congress) ಕಾಂಗ್ರೇಸ್ ಪಕ್ಷಕ್ಕೆ ಕಾಂಗ್ರೇಸ್ ಪಂಚ ಗ್ಯಾರಂಟಿಗಳು ಶ್ರೀ ರಕ್ಷೆಯಾಗಿದೆ ಎಂದರೇ ತಪ್ಪಾಗಲಾರದು ಎಂದರು.
ಇನ್ನೂ ರಾಜ್ಯದಲ್ಲಿ (Congress) ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಾಂಗ್ರೇಸ್ ಪಕ್ಷದ ವಿರುದ್ದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ವಕ್ಫ್ ಬೋರ್ಡ್, ಪಡಿತರ ಚೀಟಿ ಸೇರಿದಂತೆ ಹಲವು ಆರೋಪಗಳನ್ನು ಕಾಂಗ್ರೇಸ್ (Congress) ಪಕ್ಷದ ಮೇಲೆ ಹೊರಿಸುತ್ತಿದ್ದಾರೆ. ಇದೇ ಆರೋಪಗಳನ್ನು ಇಡೀ ಉಪಚುನಾವಣೆ ಯುದ್ದಕ್ಕೂ ಮಾಡುತ್ತಾ ಬಂದರೂ ಸಹ ಮತದಾರರು ಮಾತ್ರ ಎಲ್ಲಾ ಆರೋಪಗಳಿಗೆ ಸೆಡ್ಡು ಹೊಡೆದಂತೆ ಕಾಂಗ್ರೇಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ. ಆ ಮೂಲಕ ಬಿಜೆಪಿ (Congress) ಆರೋಪಗಳು ಸುಳ್ಳು ಎಂದು ತಿಳಿಯುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ಸಹ ಕಾಂಗ್ರೇಸ್ ಸರ್ಕಾರವೇ ಇರುತ್ತದೆ. ಬಿಜೆಪಿ ಪಕ್ಷಕ್ಕೆ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಮತದಾರರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಇದೇ ಸಮಯದಲ್ಲಿ ಕ್ಷೇತ್ರದಲ್ಲಿ (Congress) ಕಾಂಗ್ರೇಸ್ ಪಕ್ಷ ಕಳೆದ 15 ವರ್ಷಗಳಿಂದ ಬಲಿಷ್ಟವಾಗಿದೆ. ಸತತ ಮೂರು ಬಾರಿ ಕಾಂಗ್ರೇಸ್ ಪಕ್ಷದ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಎನ್.ಸುಬ್ಬಾರೆಡ್ಡಿ ರವರು ಜನರ ಸೇವೆ ಮಾಡುತ್ತಾ, ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಬಲಪಡಿಸುತ್ತಾ ಬರುತ್ತಿದ್ದಾರೆ. ಮೂರು (Congress) ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದಂತಹ ಶಾಸಕ ಸುಬ್ಬಾರೆಡ್ಡಿಯವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕು. ಇದು ಈ ಭಾಗದ ಎಲ್ಲರ ಆಶಯವಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರವರು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು (Congress) ಮನವಿ ಮಾಡುತ್ತಿದ್ದೇವೆ ಎಂದರು.