Congress Celebration: 3 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಗೆಲುವು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಕೈ ಕಾರ್ಯಕರ್ತರು

Congress Celebration – ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಗೆಲುವು ಸಾಧಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, (Congress Celebration) ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಈ ಸಮಯದಲ್ಲಿ ಕೆಡಿಪಿ ಸದಸ್ಯ ಹೆಚ್.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಮೈತ್ರಿ ಪಕ್ಷ ರಾಜ್ಯದಲ್ಲಿ ತಪ್ಪು ಸಂದೇಶಗಳನ್ನು ನೀಡುವ ಮೂಲಕ ಜನರ ಹಾದಿ ತಪ್ಪಿಸುವ ಕೆಲಸ ಮಾಡಿತ್ತು. ವಕ್ಫ್, ಪಡಿತರ ಚೀಟಿ ಸೇರಿದಂತೆ ಮೊದಲಾದ ಆರೋಪಗಳನ್ನು ಮಾಡುತ್ತಾ ಕಾಂಗ್ರೇಸ್ ವಿರುದ್ದ ಅಪಪ್ರಚಾರ ಮಾಡುತ್ತಿತ್ತು. ಆದರೆ ಮತದಾರರು ಬುದ್ದಿವಂತರಾಗಿದ್ದು, ಅವರ ಸುಳ್ಳು ಆರೋಪಗಳನ್ನು ನಂಬಿಲ್ಲ. ಕಾಂಗ್ರೇಸ್ ಪಕ್ಷದ ಅಭಿವೃದ್ದಿ ಕೆಲಸಗಳು, (Congress Celebration) ಗ್ಯಾರಂಟಿಗಳನ್ನು ಮೆಚ್ಚಿ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

Congress celebration after byelections results 2

ನಂತರ ಕಾಂಗ್ರೇಸ್ ಹಿರಿಯ ಮುಖಂಡ ಕೃಷ್ಣೇಗೌಡ, ರಾಜ್ಯದಲ್ಲಿ ನುಡಿದಂತೆ ನಡೆಯುವುದು ಕಾಂಗ್ರೇಸ್ ಸರ್ಕಾರ ಮಾತ್ರ. ಚುನಾವಣೆಯ ಸಮಯದಲ್ಲಿ ನೀಡಿದಂತಹ ಎಲ್ಲಾ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಆದರೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವನ್ನು ಆಡಳಿತದಿಂದ ಕೆಳಗಿಳಿಸಲು ಬಿಜೆಪಿ ಮೈತ್ರಿ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. (Congress Celebration) ಆದರೆ ಜನರು ಬಿಜೆಪಿಯವರಿಗೆ ಈ ಚುನಾವಣೆಯ ಮೂಲಕ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಇದೇ ಸಮಯದಲ್ಲಿ ಕೆಡಿಪಿ ಸದಸ್ಯ ರಿಯಾಜ್ ಪಾಷ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಲಿಷ್ಟವಾಗಿದೆ. ಮೈತ್ರಿ ಪಕ್ಷಗಳಿಂದ ಕಾಂಗ್ರೇಸ್ ಸರ್ಕಾರವನ್ನು ಏನೂ ಮಾಡೋಕೆ ಆಗೊಲ್ಲ. (Congress Celebration) ರಾಜ್ಯದಲ್ಲಿ ಸಮಾನತೆ, ಜಾತಿಗಳ ಮಧ್ಯೆ ಗಲಬೆ ಸೃಷ್ಟಿಸುವ ಕೆಲಸ ಬಿಜೆಪಿ ಪಕ್ಷ ಮಾಡುತ್ತಿದೆ. ಆದರೆ ಜನರು ಬಿಜೆಪಿಯ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಕರ್ನಾಟಕ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

Congress celebration after byelections results 1

ಈ ವೇಳೆ (Congress Celebration) ಪಟ್ಟಣ ಪಂಚಾಯಿತಿ ಅಧ್ಯಕ್ಷ ಎ.ವಿಕಾಸ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಬಾಲೇನಲ್ಲಿ ರಮೇಶ್, ಮುಖಂಡರಾದ ರಾಜೇಶ್, ಅಂಬರೀಶ್, ನಂಜುಂಡಪ್ಪ, ಬುಲೆಟ್ ಶ್ರೀನಿವಾಸ, ದಪ್ಪರ್ತಿ ನಂಜುಂಡ, ಚನ್ನರಾಯಪ್ಪ, ರಾಜಾರೆಡ್ಡಿ, ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

Next Post

Crime News: ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಲು, ಹೆತ್ತ ಮಗುವನ್ನೆ ಕೊಂದ ಪಾಪಿ ತಾಯಿ….!

Sun Nov 24 , 2024
Crime News ಭೂಮಿಯ ಮೇಲೆ ದೇವರ ಸ್ಥಾನವನ್ನು ತಾಯಿಗೆ ಕೊಡಲಾಗುತ್ತದೆ. ಆದರೆ ಕೆಲವೊಂದು ಘಟನೆಗಳಲ್ಲಿ ತಾಯಿ ಎಂಬ ಪದಕ್ಕೆ ಕೆಲವರು ಕಳಂಕ ತರುತ್ತಿರುತ್ತಾರೆ. ಅಂತಹುದೇ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಪಾಪಿ ತಾಯಿಯೊಬ್ಬಳು ತಾನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಲು ಅಡ್ಡಿಯಾಗಿದ್ದ ತನ್ನ 5 (Crime News) ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಅಷ್ಟಕ್ಕೂ ತಾಯಿಯೇ ಮಗಳನ್ನು ಕೊಲೆ ಮಾಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ, ದೆಹಲಿಯ ಅಶೋಕ್ ವಿಹಾರ್‍ […]
Mother killed her daughter
error: Content is protected !!