Crime News ಭೂಮಿಯ ಮೇಲೆ ದೇವರ ಸ್ಥಾನವನ್ನು ತಾಯಿಗೆ ಕೊಡಲಾಗುತ್ತದೆ. ಆದರೆ ಕೆಲವೊಂದು ಘಟನೆಗಳಲ್ಲಿ ತಾಯಿ ಎಂಬ ಪದಕ್ಕೆ ಕೆಲವರು ಕಳಂಕ ತರುತ್ತಿರುತ್ತಾರೆ. ಅಂತಹುದೇ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಪಾಪಿ ತಾಯಿಯೊಬ್ಬಳು ತಾನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಲು ಅಡ್ಡಿಯಾಗಿದ್ದ ತನ್ನ 5 (Crime News) ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಅಷ್ಟಕ್ಕೂ ತಾಯಿಯೇ ಮಗಳನ್ನು ಕೊಲೆ ಮಾಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ,
ದೆಹಲಿಯ ಅಶೋಕ್ ವಿಹಾರ್ ಎಂಬಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ತಾಯಿಯೊಬ್ಬಳು ತನ್ನ ಐದು ವರ್ಷ ಮಗಳನ್ನು ಕೊಲೆ ಮಾಡಿದ್ದಾಳೆ. ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಆಕೆ ಬಯಸಿದ್ದಳು. ಆದರೆ ಈ ಮದುವೆಗೆ ಆಕೆಯ ಮಗಳು ಅಡ್ಡಿಯಾಗಿದ್ದಳು. ಈ ಕಾರಣದಿಂದ ಆಕೆ ತನ್ನ ಮಗಳನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಆರೋಪಿ ತಾಯಿ ಮಗುವನ್ನು ದೀಪ್ ಚಂದ್ ಬಂಧು ಎಂಬ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಆದರೆ ಮಗು ಅದಾಗಲೇ ಮೃತಪಟ್ಟಿದೆ ಎಂದು ಆಸ್ಪತ್ರೆಯವರು ಹೇಳಿದ್ದರು. ಈ ಸಂಬಂಧ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು. ಈ ಕುರಿತು ವಿಚಾರಣೆ ನಡೆಸಿದಾಗ ಮಗುವಿನ ಕುತ್ತಿಗೆಯಲ್ಲಿ ಕತ್ತು ಹಿಸುಕಿದ ಗುರುತುಗಳು ಪತ್ತೆಯಾಗಿತ್ತು.
ಬಳಿಕ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಮಗುವಿನ ತಾಯಿ ಹಾಗೂ ಕೆಲ ಸಂಬಂಧಿಕರನ್ನು ವಿಚಾರಣೆ ನಡೆಸಲಾಗಿತ್ತು. ತಾಯಿಯನ್ನು ವಿಚಾರಣೆ ನಡೆಸುವಾಗ ತನ್ನ ಮಗಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಹಿಳೆಯ ಪತಿ ಆಕೆಯನ್ನು ತೊರೆದಿದ್ದನಂತೆ. ಬಳಿಕ ಮಹಿಳೆಗೆ ಇನ್ಸ್ಟಾಗ್ರಾಂನಲ್ಲಿ ರಾಹುಲ್ ಎಂಬಾತನ ಪರಿಚಯವಾಗಿದೆ. ಬಳಿಕ ಆತನ ಮೇಲೆ ಪ್ರೀತಿ ಉಂಟಾಗಿ ಆತನನ್ನು ಮದುವೆಯಾಗಲು ದೆಹಲಿಗೆ ಹೋಗಲು ನಿರ್ಧಾರ ಮಾಡಿದ್ದಳು. ಆದರೆ ರಾಹುಲ್ ಹಾಗೂ ಆತನ ಕುಟುಂಬದವರು ಆಕೆಯ ಮಗು ಇರುವುದರಿಂದ ಹತಾಶೆಗೊಂಡ ಮಹಿಳೆ ತನ್ನ ಮಗುವನ್ನು ಕತ್ತುಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.