Reels – ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಾದ ರೈಲ್ವೆ, ದೇವಸ್ಥಾನ, ಐತಿಹಾಸಿಕ ತಾಣಗಳು ಸೇರಿದಂತೆ ವಿವಿಧ ಕಡೆ ರೀಲ್ಸ್ ಮಾಡೋವವರ ಹಾವಳಿ ಹೆಚ್ಚಾಗಿದೆ. ಆಗಾಗ ಅಪಾಯಕಾರಿ ಸ್ಥಳಗಳಲ್ಲಿ ಕ್ಯಾಮೆರಾ ಹಿಡಿದು ರೀಲ್ಸ್ ಮಾಡುವವರೂ ಸಹ ಜಾಸ್ತಿಯಾಗುತ್ತಿದ್ದಾರೆ. ಇದೀಗ ರೈಲ್ವೆ ಹಳಿಗಳ ಮೇಲೆ (Reels) ರೀಲ್ಸ್ ಮಾಡೋವವರಿಗೆ ರೈಲ್ವೆ ಇಲಾಖೆ ಎಚ್ಚರಿಕೆಯನ್ನು ನೀಡಿದ್ದು, ಅಂತಹವರಿಗಾಗಿ ಹೊಸ ನಿಯಮ ಜಾರಿಗೆ ತಂದಿದೆ ಎಂದು ತಿಳಿದುಬಂದಿದೆ.
ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಕಂಟೆಂಟ್ ಕ್ರಿಯೇಟರ್ ಗಳು ಇನ್ನಿಲ್ಲದ ಸಾಹಸಕ್ಕೆ ಕೈ ಹಾಕುತ್ತಾರೆ. ಇತ್ತೀಚಿಗೆ ರೈಲುಗಳಲ್ಲಿ, ರೈಲು ಹಳಿಗಳ ಮೇಲೆ ರೀಲ್ಸ್ ಮಾಡೋವರ ಸಂಖ್ಯೆ ಸಹ ಹೆಚ್ಚಾಗಿದೆ. (Reels) ಅನೇಕರಿಗೆ ರೈಲು ಹಳಿಗಳು ಫೇವರಿಟ್ ಸ್ಟಾಟ್ ಗಳಾಗಿವೆ ಎನ್ನಬಹುದಾಗಿದೆ. ಇನ್ಣೇನು ರೈಲು ಬರ್ತಿದೆ ಎನ್ನುವ ಸಮಯದಲ್ಲಿ ರೀಲ್ಸ್ ಮಾಡಿ ಅನೇಕರು ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿದೆ. ಮತ್ತೆ ಕೆಲವರು ರೈಲಿನ ಬಾಗಿನಲ್ಲಿ ನಿಂತು ಪೊಟೊ, (Reels) ವಿಡಿಯೋ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಘಟನೆಗಳೂ ಸಹ ನಡೆದಿದೆ. ಈ ರೀತಿಯ ಘಟನೆಗಳಿಂದ ಬೇಸತ್ತ ಜನರು ಈ ಕುರಿತು ಸಂಬಂಧಪಟ್ಟವರು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹ ಸಹ ಮಾಡಿದ್ದರು. (Reels) ಇದೀಗ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಇಲಾಖೆ ಹೊಸ ನಿಯಮವನ್ನು ಜಾರಿ ಮಾಡಿದೆ.
ಭಾರತದ ರೈಲ್ಬೆ ಹಳಿಗಳ ಮೇಲೆ, ರೈಲುಗಳಲ್ಲಿ, ರೈಲ್ವೆ ಆವರಣಗಳಲ್ಲಿ ರೀಲ್ಸ್ ಮಾಡುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ. ಈ ಸಂಬಂಧ ರೈಲ್ವೆ ಮಂಡಳಿ (Reels) ಎಲ್ಲಾ ವಲಯ ಕಚೇರಿಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನೆ ಮಾಡಿದೆ. ಸುರಕ್ಷಿತ ರೈಲು ಕಾರ್ಯಾಚರಣೆ ಹಾಗೂ ಪ್ರಯಾಣಿಕರ ಅನುಕೂಲಕಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ರೈಲ್ವೆ ಆವರಣ ಅಥವಾ ಹಳಿಗಳಲ್ಲಿ ಪ್ರಯಾಣಿಕರ ಸುರಕ್ಷತೆ ಹಾಗೂ (Reels) ರೈಲ್ವೆ ಕಾರ್ಯಾಚರಣೆಗೆ ಅಡ್ಡಿಪಡಿಸುವ ಈ ರೀತಿಯ ಕೆಲಸಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ. ಈಗಾಗಲೇ ಹಲವು ಕಡೆ ಎಚ್ಚರಿಕೆ ಬೋರ್ಡ್‌ಗಳನ್ನು ಸಹ ಅಳವಡಿಸಲಾಗಿದೆ. ಆದರೆ ಸೂಕ್ತ ಕಾನೂನು ಜಾರಿಯಲ್ಲಿಲ್ಲ, ಈ ಸಂಬಂಧ ಶಿಕ್ಷೆ ಸಹ ಆಗುತ್ತಿರಲಿಲ್ಲ. (Reels) ಆದ್ದರಿಂದ ಜನರೂ ಸಹ ನಿರ್ಲಕ್ಷ್ಯ ಮಾಡುತ್ತಿದ್ದರು.
ಆದರೆ ರೈಲ್ವೆ ಇಲಾಖೆ ಇದನ್ನು (Reels) ಗಂಭೀರವಾಗಿ ಪರಿಗಣಿಸಿ ಯಾವುದೇ ವ್ಯಕ್ತಿ ರೈಲ್ವೆ ಹಳಿಗಳು ಅಥವಾ ರೈಲ್ವೆ ನಿಲ್ದಾಣಗಳಲ್ಲಿ ರೀಲ್ಸ್ ಮಾಡಿದರೇ ಅಂತಹವರ ವಿರುದ್ದ ಎಫ್.ಐ.ಆರ್ ದಾಖಲು ಮಾಡಲಾಗುತ್ತದೆ. ಜತೆಗೆ ರೈಲ್ವೆ ಹಳಿಗಳಲ್ಲಿ ಈ ರೀತಿಯ ಚಟುವಟಿಕೆಗಳು ಅಪಾಯಕಾರಿ ಹಾಗೂ ಕಾನೂನು ಬಾಹಿರ ಎಂದು ಜನರಿಗೆ ಅರಿವು ಮೂಡಿಸಲು ರೈಲ್ವೆ (Reels) ಅಧಿಕಾರಿಗಳಿಗೆ ಸೂಚನೆ ಸಹ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದೇ ರೀತಿ ಪ್ರವಾಸಿ ತಾಣಗಳಲ್ಲಿ ಸಹ ರೀಲ್ಸ್ ಮಾಡಿ ಅನಾಹುತಗಳಿಗೆ ಕಾರಣವಾಗುವವರ ವಿರುದದ್ದ ಸರ್ಕಾರಗಳೂ ಸಹ ಕಾನೂನಿನಂತೆ ಕ್ರಮ ತೆಗೆದುಕೊಳ್ಳಬೇಕೆಂದು ಅನೇಕರ ಅಭಿಪ್ರಾಯವಾಗಿದೆ.