Jobs Alert – ಗಡಿ ರಸ್ತೆಗಳ ಸಂಸ್ಥೆ ಇಲಾಖೆಯಲ್ಲಿ ಖಾಲಿಯಿರುವ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. SSLC, PUC, ITI, ಡಿಪ್ಲೋಮಾ ಪಾಸ್ ಆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಗಡಿ ರಸ್ತೆಗಳ ಸಂಸ್ಥೆಯಲ್ಲಿ ಖಾಲಿಯಿರುವ 466 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಚಾಲಕ, ಡ್ರಾಟ್ಸ್ ಮನ್, ಸೂಪರ್ ವೈಸರ್, ಆಪರೇಟರ್, ಟರ್ನರ್, ಮೆಷಿನಿಸ್ಟ್ ಹುದ್ದೆಗಳಿಗೆ ಅರ್ಜಿ (Jobs Alert) ಆಹ್ವಾನಿಸಿದ್ದು, ಡಿ.30 ರೊಳಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದವರನ್ನು ಭಾರತದ ಎಲ್ಲಿ ಬೇಕಾದರೂ ನೇಮಕ ಮಾಡಬಹುದಾಗಿದೆ.
Jobs Alert ಹುದ್ದೆಗಳ ವಿವರಗಳು:
- ಕರಡುಗಾರ – 16,
- ಮೇಲ್ವಿಚಾರಕ -2,
- ಟರ್ನರ್ – 10,
- ಯಂತ್ರಶಾಸ್ತ್ರಜ್ಞ -1,
- ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ -417,
- ಡ್ರೈವರ್ ರೋಡ್ ರೋಲರ್ -2,
- ನಿರ್ವಾಹಕರು ಅಗೆಯುವ ಯಂತ್ರೋಪಕರಣಗಳು -18.
Jobs Alert – ವಿದ್ಯಾರ್ಹತೆ ಹಾಗೂ ವಯೋಮಿತಿ
- ಈ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ, ಐಟಿಐ, ಪಿಯುಸಿ ಹಾಗೂ ಡಿಪ್ಲೊಮಾ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಗರಿಷ್ಠ 27 ವರ್ಷಗಳು ವಯೋಮಿತಿ ನಿಗದಿಪಡಿಸಲಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು ವಯೋಮಿತಿ ಸಡಿಲಿಕೆ ನೀಡಲಾಗಿದೆ.
- ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಶಾರೀರಿಕ ದಕ್ಷತೆಯ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ, ಡ್ರೈವಿಂಗ್ ಟೆಸ್ಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಅರ್ಜಿ ಶುಲ್ಕ : ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 50 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು. ಆದರೆ ಎಸ್ ಸಿ, ಎಸ್ ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
Jobs Alert – ಅಧಿಕೃತ ಅಧಿಸೂಚನೆ ಇಲ್ಲಿದೆ ನೋಡಿ: Click Here
Jobs Alert – How to Apply Army BRO Recruitment 2024
- Check the eligibility criteria from the BRO Notification 2024 PDF.
- Click on the Apply Online Link given below or visit the official website of the bro.gov.in BRO Online Form 2024.
- Fill out the BRO Registration Form 2024.
- Upload the Required Documents.
- Pay Application Fees.
- Finally Print the Application Form.