Viral Video – ಈ ಪ್ರಕೃತಿಯಲ್ಲಿ ಅನೇಕ ವಿಸ್ಮಯಗಳು ಅವಿತಿವೆ. ಅವುಗಳನ್ನು ದೊಡ್ಡ ದೊಡ್ಡ ವಿಜ್ಞಾನಿಗಳಿಂದಲೂ ಸಹ ಕಂಡು ಹಿಡಿಯಲು ಆಗಲ್ಲ ಎಂದೇ ಹೇಳಬಹುದು. ಇದೀಗ ಅಂತಹುದೇ ವಿಸ್ಮಯಕಾರಿ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮೀನುಗಳನ್ನು ಹಾವುಗಳು ಭೇಟೆಯಾಡುವುದನ್ನು ನೋಡಿರುತ್ತೀರಾ ಆದರೆ ಇಲ್ಲಿ ಹಾವನ್ನೇ ಮೀನು ಭೇಟಿಯಾಡಿದೆ. (Viral Video) ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಸಾಮಾನ್ಯವಾಗಿ ಒಂದು ಜೀವಿ ಇನ್ನೊಂದು ಜೀವಿಯನ್ನು ಭೇಟೆಯಾಡುವ ಶಕ್ತಿಯನ್ನು ಹೊಂದಿರುತ್ತದೆ. ಆದರೆ ತಾವೆ ಇತರ ಜೀವಿಗಳಿಗೆ ಆಹಾರವಾಗುತ್ತಿರುತ್ತದೆ ಇದು ಪ್ರಕೃತಿಯ ನಿಯಮ ಎಂದೇ ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಒಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಮರದ ಕೊಂಬೆಯೊಂದರ ಮೇಲೆ ಭೇಟೆಯಾಡಲು ಹೊಂಚು ಹಾಕುತ್ತಿದ್ದ ಹಾವನ್ನೇ ಮೀನೊಂದು ಭೇಟೆಯಾಡಿದೆ. ಹಾವುಗಳು ಕಪ್ಪೆ, ಮೀನು ಸೇರಿದಂತೆ ಕೆಲವೊಂದು ಜೀವಿಗಳನ್ನು ಭೇಟಿಯಾಡುತ್ತಿರುತ್ತದೆ. ಆದರೆ ಇಲ್ಲಿ ಅದು ವಿರುದ್ದವಾಗಿ ನಡೆದಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಈ ಕುರಿತು ವಿಡಿಯೋ ಒಂದು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿರುವಂತೆ ಕೆರೆಯೊಂದರಲ್ಲಿದ್ದ ಮೀನು ಅಲ್ಲೇ ಪಕ್ಕದಲ್ಲಿರುವ ಮರದ ಸಣ್ಣ ರೆಂಬೆಯ ಮೇಲೆ ಹಾವೊಂದು ಭೇಟೆಯಾಡಲು ಹೊಂಚು ಹಾಕುತ್ತಿರುತ್ತದೆ. ಈ ವೇಳೆ ನೀರಿನಲ್ಲಿದ್ದ ಮೀನು ಜಿಗಿದು ಹಾವಿನ ತಲೆಯನ್ನು ಕಚ್ಚಿ ಹಿಡಿಯುತ್ತದೆ. ಕೆಲ ಸಮಯ ಹಾವನ್ನು ತಿನ್ನಲು ಹೋರಾಟ ನಡೆಸುತ್ತಿದ್ದೆ. ಆದರೆ ಮರದ ರೆಂಬೆಗೆ ಸುತ್ತು ಹಾಕಿಕೊಂಡಿದ್ದ ಹಾವು ಮರವನ್ನು ಗಟ್ಟಿಯಾಗಿ ಇಟ್ಟುಕೊಂಡಿದ್ದರಿಂದ ಮೀನು ಹಾವನ್ನು ತಿನ್ನಲು ಆಗಲಿಲ್ಲ. ಅಷ್ಟೊತ್ತಿಗೆ ನೀರಿನಲ್ಲಿದ್ದ ಮತ್ತೊಂದು ಮೀನು ಹಾವನ್ನು ಹಿಡಿಯಲು ಯತ್ನಿಸುತ್ತಿದ್ದ ಮೀನಿನ ಬಾಲ ಕಚ್ಚಿ ಎಳೆಯುತ್ತದೆ. ಈ ವೇಳೆ ಆ ಮೀನು ನೀರಿನಲ್ಲಿ ಬೀಳುತ್ತದೆ. ಈ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಭಾರಿ ವೀಕ್ಷಣೆ ಕಂಡಿದೆ.