ಸೇವಾ ಪಾವಿತ್ರತೆಯನ್ನು ಕಾಪಾಡಿ: ನ್ಯಾಯಾಧೀಶೆ ಲಾವಣ್ಯ

ಬಾಗೇಪಲ್ಲಿ:  ಕಾನೂನು ವ್ಯವಸ್ಥೆಯಲ್ಲಿ ನ್ಯಾಯಾಧೀಶರ ಸೇವೆ ಅತ್ಯಂತ ಪವಿತ್ರ ಹೊಂದಿರುವ ಸೇವೆಯಾಗಿದ್ದು ಈ ಸೇವೆಯ ಪವಿತ್ರೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕಾನೂನು ಚೌಕಟ್ಟಿನಲ್ಲಿ ನಮ್ಮ ಗುರಿಯನ್ನು ತಲುಪಬೇಕಾಗುತ್ತೆ ಎಂದು ಹಿರಿಯ ನ್ಯಾಯಾಧೀಶೆ ಲಾವಣ್ಯ ರವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘದವತಿಯಿಂದ  ಹಮ್ಮಿಕೊಳ್ಳಲಾಗಿದ್ದ  ಬಿಳ್ಕೋಡುಗೆ ಸಮಾರಂಭದಲ್ಲಿ  ಬಾಗೇಪಲ್ಲಿ ಜೆಎಂಎಫ್‍ಸಿ ನ್ಯಾಯಾಲಯದಿಂದ ವರ್ಗಾವಣೆಗೊಂಡಿರುವ  ಹಿರಿಯ ನ್ಯಾಯಾಧೀಶೆ ಲಾವಣ್ಯ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸರ್ಕಾರದ ಯಾವುದೇ ಇಲಾಖೆಯ ಅಧಿಕಾರಿಗಳಿಗೆ ವರ್ಗಾವಣೆ ಸಹಜ.  ಸೇವಾಧಿಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಕಾನೂನಿನ ಸೇವೆಗಳನ್ನು ಪ್ರತಿಯೊಬ್ಬರಿಗೂ  ನ್ಯಾಯ ಒದಗಿಸುವುದಲ್ಲದೆ ಸಮಾಜದ ಏಳಿಗೆಯನ್ನು ನ್ಯಾಯಾಧೀಶರು ಬಯಸುವಂತಿರುಬೇಕೆಂದರು.

judge send off program

ಕೋಟ್ ಕಲಾಪ ನಡೆಯುವ ಸಂದರ್ಭದಲ್ಲಿ ಹಾಗೂ ಹಿರಿಯ ವಕೀಲರು ವಾದಗಳನ್ನು ಮಂಡಿಸುವ ವೇಳೆ ಕಿರಿಯ ವಕೀಲರು ಹಾಜರಿದ್ದು ವೃತ್ತಿಯ ಬಗ್ಗೆ ಅನುಭವ ವಿದ್ವತ್ತನ್ನು ಪಡೆದುಕೊಳ್ಳುವಂತೆ ಕಿರಿಯ ವಕೀಲರಿಗೆ  ಕಿವಿ ಮಾತು ಹೇಳಿದ ಅವರು  ಇಲ್ಲಿನ ನ್ಯಾಯಾಲಯದಲ್ಲಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ, ಭಾಷೆ ಅನುವಾದ  ಹಾಗೂ ಸಮಯದ ಅಭಾವದಿಂದಾಗಿ ನಿರೀಕ್ಷೆಯಷ್ಟು  ವೇಗವಾಗಿ ಪ್ರಕರಣಗಳನ್ನು ಇತ್ಯಾಥಗೊಳಿಸಲು ಸಾಧ್ಯವಾಗಲಿಲ್ಲ ಎಂದ ಅವರು ಇಲ್ಲಿನ ಅನೇಕ ವಕೀಲರಿಂದ ನಾನು ಕಲಿತಿದ್ದೇನೆ ಎಂದ ಅವರು ನಾನು ಇಲ್ಲಿಂದ ವರ್ಗಾವಣೆಯಾಗಿ ಹೋಗುತ್ತಿರುವ ನನಗೆ ಇಲ್ಲಿನ ವಕೀಲರು ತಮ್ಮ ಮನೆ ಮಗಳಿಗೆ ತೋರಿಸುವ ಪ್ರೀತಿ ತೋರಿಸಿ ಆತ್ಮೀಯವಾಗಿ ಬಿಳ್ಕೋಡುತ್ತಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

ಜೆಎಂಎಫ್‍ಸಿ ನ್ಯಾಯಾಧೀಶ ಜೆ.ರಂಗಸ್ವಾಮಿ ಮಾತನಾಡಿ,  ಕೋಟ್  ಕಲಾಪಗಳ ಸಮಯದಲ್ಲಿ ಎಲ್ಲರನ್ನು ಕುಟುಂಬದ ಸದಸ್ಯರಂತೆ  ಭಾವಿಸಿ ಚರ್ಚೆಯನ್ನು ಪ್ರಾರಂಬಿಸಿ ಕಾನೂನು ಸುವ್ಯವಸ್ಥೆಯನ್ನು ಪಾಲಿಸುತ್ತಿದ್ದರು. ಬದಲಾವಣೆ ಜಗದ ನಿಯಮ  ಸರ್ಕಾರದ ಸೇವೆ ಸಲ್ಲಿಸುವ ಯಾವುದೇ ಅಧಿಕಾರಿಗಳಿಗೆ ವರ್ಗಾವಣೆ ಮತ್ತು ನಿವೃತ್ತಿ ಸಹಜ ಆದರೆ ನಾವು ಯಾವುದೇ ಸ್ಥಳದಲ್ಲಿ ಸಲ್ಲಿಸಿದ ಸೇವೆ  ಸದಾ ಸ್ಮರಣೀಯವಾಗಿರಬೇಕಾಗುತ್ತೆ. ಹಿರಿಯ ನ್ಯಾಯಾಧೀಶೆ ಲಾವಣ್ಯ ರವರ ಕಾರ್ಯಧಕ್ಷತೆ, ಸಹನೆ ಮಾದರಿಯಾಗಿತ್ತು ಎಂದರು.

ಈ ಸಂದರ್ಭದಲ್ಲಿ  ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಉಪಾಧ್ಯಕ್ಷ ರಮಾಂಜಿ, ಕಾರ್ಯದರ್ಶಿ ಪ್ರಸನ್ನ,  ಹಿರಿಯ ವಕೀಲರಾದ ಕರುಣಾಸಾಗರರೆಡ್ಡಿ, ಜೆ.ಎನ್.ನಂಜಪ್ಪ,  ಎ.ಜಿ.ಸುಧಾಕರ್, ಅಲ್ಲಾಭಕಾಷ್, ಫಯಾಜ್ ಭಾಷಾ, ಬಿ.ಆರ್.ನರಸಿಂಹ ನಾಯ್ಡು, ವಿ.ನಾರಾಯಣ, ಅಪ್ಪಸ್ವಾಮಿ ರೆಡ್ಡಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

Next Post

ಕುತೂಹಲ ಮೂಡಿಸಿದ ಬಾಹುಬಲಿ ಪ್ರಭಾಸ್ ಪೋಸ್ಟ್, ಜೀವನಕ್ಕೆ ಹೊಸಬರು ಬರಲಿದ್ದಾರೆ ಎಂದ ಡಾರ್ಲಿಂಗ್….!

Fri May 17 , 2024
ತೆಲುಗು ಸಿನಿರಂಗದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಿಲರ್‍ ಎಂದರೇ ಅದು ಪ್ಯಾನ್ ಇಂಡಿಯಾ ಸ್ಟಾರ್‍ ಡಾರ್ಲಿಂಗ್ ಪ್ರಭಾಸ್ ಎಂದೇ ಕರೆಯಲಾಗುತ್ತದೆ. ನಟ ಪ್ರಭಾಸ್ ರವರಿಗೆ 44 ವರ್ಷ ವಯಸ್ಸಾದರೂ ಸಹ ಇನ್ನೂ ಅವರು ಮದುವೆಯಾಗಿಲ್ಲ. ಅವರ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಪ್ರಭಾಸ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ನೋಡಿದರೇ ಅವರು ಮದುವೆಗೆ ಸಿದ್ದವಾಗಿದ್ದಾರಾ ಎಂಬ ಅನುಮಾನ ಮೂಡುವಂತೆ ಮಾಡಿದ್ದಾರೆ. […]
Prabhas insta post creates his marriage rumor 2
error: Content is protected !!