ಕುತೂಹಲ ಮೂಡಿಸಿದ ಬಾಹುಬಲಿ ಪ್ರಭಾಸ್ ಪೋಸ್ಟ್, ಜೀವನಕ್ಕೆ ಹೊಸಬರು ಬರಲಿದ್ದಾರೆ ಎಂದ ಡಾರ್ಲಿಂಗ್….!

ತೆಲುಗು ಸಿನಿರಂಗದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಿಲರ್‍ ಎಂದರೇ ಅದು ಪ್ಯಾನ್ ಇಂಡಿಯಾ ಸ್ಟಾರ್‍ ಡಾರ್ಲಿಂಗ್ ಪ್ರಭಾಸ್ ಎಂದೇ ಕರೆಯಲಾಗುತ್ತದೆ. ನಟ ಪ್ರಭಾಸ್ ರವರಿಗೆ 44 ವರ್ಷ ವಯಸ್ಸಾದರೂ ಸಹ ಇನ್ನೂ ಅವರು ಮದುವೆಯಾಗಿಲ್ಲ. ಅವರ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಪ್ರಭಾಸ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ನೋಡಿದರೇ ಅವರು ಮದುವೆಗೆ ಸಿದ್ದವಾಗಿದ್ದಾರಾ ಎಂಬ ಅನುಮಾನ ಮೂಡುವಂತೆ ಮಾಡಿದ್ದಾರೆ.

Prabhas insta post creates his marriage rumor

ಸ್ಟಾರ್‍ ನಟ ಪ್ರಭಾಸ್ ಮದುವೆಗೆ ಸಂಬಂಧಿಸಿದಂತೆ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ. ಅನೇಕ ಬಾರಿ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಲವ್ ನಲ್ಲಿದ್ದು, ಶೀಘ್ರದಲ್ಲೇ ಈ ಜೋಡಿ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಜೋರಾಗಿಯೇ ಹರಿದಾಡಿತ್ತು. ಆದರೆ ಎಲ್ಲಾ ಸುದ್ದಿಗಳು ಸುಳ್ಳು ಸುದ್ದಿಯಾಗಿಯೇ ಉಳಿದಿತ್ತು. ಆದರೆ ಇದೀಗ ನಟ ಪ್ರಭಾಸ್ ರವರೇ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ನೋಡಿದರೇ ಅವರು ಮದುವೆಯಾಗಲಿದ್ದಾರೆಯೇ ಎಂಬ ಅನುಮಾನ ಮೂಡುವಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಪ್ರಭಾಸ್ ಸೋಷಿಯಲ್ ಮಿಡಿಯಾದಲ್ಲಿ ಅಷ್ಟೊಂದು ಆಕ್ಟೀವ್ ಆಗಿರುವುದಿಲ್ಲ. ಆಗಾಗ ಕೆಲವೊಂದು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದು ಸಖತ್ ವೈರಲ್ ಆಗುತ್ತಿದೆ. ಪ್ರಭಾಸ್ ತನ್ನ ಇನ್ಸ್ಟಾಗ್ರಾಂನಲ್ಲಿ “ಡಾರ್ಲಿಂಗ್ಸ್, ಕೊನೆಗೂ ಒಬ್ಬ ವಿಶೇಷ ವ್ಯಕ್ತಿ ನಮ್ಮ ಜೀವನದಲ್ಲಿ ಬರಲಿದ್ದಾರೆ, ಸ್ವಲ್ಪ ಕಾಯಿರಿ” ಎಂದು ಪೋಸ್ಟ್ ಮಾಡಿದ್ದಾರೆ. ಈ ಫೊಸ್ಟ್ ನಲ್ಲಿ ಪ್ರಭಾಸ್ ವಿಶೇಷ ವ್ಯಕ್ತಿ ಎಂದು ಬರೆದಿದ್ದು, ಆ ವಿಶೇಷ ವ್ಯಕ್ತಿ ಯಾರು ಎಂಬ ಚರ್ಚೆ ತುಂಬಾನೆ ನಡೆಯುತ್ತಿದೆ. ಅನೇಕರು ಪ್ರಭಾಸ್ ರವರು ಮದುವೆಯಾಗಿದ್ದಾರೆ. ಆದ್ದರಿಂದಲೇ ಈ ಪೋಸ್ಟ್ ಮಾಡಿದ್ದಾರೆ ಎಂಬ ಕಾಮೆಂಟ್ ಗಳು ಹರಿದು ಬರುತ್ತಿವೆ.

Prabhas insta post creates his marriage rumor 1

ಇನ್ನೂ ಪ್ರಭಾಸ್ ಹಾಗೂ ಅನುಷ್ಕಾ ರವರ ಮದುವೆಯ ಬಗ್ಗೆ ಅನೇಕ ಬಾರಿ ರೂಮರ್‍ ಗಳು ಕೇಳಿಬರುತ್ತಿತ್ತು. ಆದರೆ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ನಾವು ಒಳ್ಳೆಯ ಸ್ನೇಹಿತರು ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು. ಆದರೂ ಸಹ ಈ ರೂಮರ್‍ ಗಳು ಹರಿದಾಡುತ್ತಲೇ ಇತ್ತು. ಸದ್ಯ ಪ್ರಭಾಸ್ ಹಂಚಿಕೊಂಡಿರುವ ಪೋಸ್ಟ್ ತುಂಬಾನೆ ಕುತೂಹಲ ಮೂಡಿಸಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ. ಸದ್ಯ ಪ್ರಭಾಸ್ ಕಲ್ಕಿ ಸಿನೆಮಾದ ಮೂಲಕ ಶೀಘ್ರದಲ್ಲೇ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾ ಜೂ.27 ರಂದು ತೆರೆಗೆ ಬರಲಿದೆ.

Leave a Comment

Your email address will not be published. Required fields are marked *

Scroll to Top