Jai Bhim – ಇತ್ತೀಚಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ವಿಚಾರಕ್ಕೆ ಸಂಬಂಧಿಸಿದಂತೆ ಒಂದಲ್ಲ ಒಂದು ರೀತಿಯಲ್ಲಿ ವಿವಾದಗಳು, ಚರ್ಚೆಗಳು ನಡೆಯುತ್ತಲೇ ಇದೆ. ಕೆಲವು ದಿನಗಳ ಹಿಂದೆಯಷ್ಟೆ ಸಂಸತ್ತಿನಲ್ಲೂ ಅಂಬೇಡ್ಕರ್ ವಿವಾದ ಹುಟ್ಟಿಕೊಂಡಿತ್ತು. ಮೊನ್ನೆಯಷ್ಟೆ ಕೆಲ ಕಿಡಿಗೇಡಿಗಳು ಅಂಬೇಡ್ಕರ್ ಅವರ ಭಾವಷಿತ್ರಕ್ಕೆ ಅವಮಾನ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡಲಾಗಿತ್ತು. ಇದೀಗ ಟಾಟಾ ಏಸ್ ವಾಹನದಲ್ಲಿ ಜೈ ಭೀಮ್ ಹಾಡು ಹಾಕಿದ್ದಕ್ಕಾಗಿ ಕೆಲ ಕಿಡಿಗೇಡಿಗಳು ಯುವಕನ ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆಯೊಂದು ನಡೆದಿದೆ.
ಅಂದಹಾಗೆ ಈ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗಿಡದ ಮುದ್ದೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ದೀಪು (19) ಎಂದು ಗುರ್ತಿಸಲಾಗಿದೆ. ಚಾಲಕನಾದ ದೀಪು ಮೇಲೆ ರೈಲ್ವೆ ಪೊಲೀಸ್ ರಾದ ಚಂದ್ರಶೇಖರ್ ಹಾಗೂ ನರಸಿಂಹರಾಜು ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನೂ ದೀಪು ಹೇಳುವ ಪ್ರಕಾರ ಟಾಟಾ ಏಸ್ ವಾಹನದಲ್ಲಿ ಅಂಬೇಡ್ಕರ್ ರವರ ಜೈ ಭೀಮ್ ಹಾಡು ಹಾಕಿಕೊಂಡು ಹೋಗಿದ್ದಾಗ, ಆರೋಪಿಗಳಿಬ್ಬರು ಬೈಕ್ ಮೇಲೆ ಬಂದು ವಾಹನ ಅಡ್ಡಗಟ್ಟಿ, ಅಂಬೇಡ್ಕರ್ ಹಾಡು ಏಕೆ ಹಾಕಿದ್ದೀರಾ, ನಿಮ್ಮ ಜಾತಿ ಯಾವುದು ಎಂದು ಜೋರಾಗಿ ಪ್ರಶ್ನೆ ಮಾಡಿದ್ದರಂತೆ.
ಬಳಿಕ ಯುವಕ ಹಾಡು ನಿಲ್ಲಿಸದೇ ಇದ್ದ ಕಾರಣ ಆರೋಪಿಗಳು ಯುವಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಂಬೇಡ್ಕರ್ ಹಾಡು ಯಾಕೇ ಹಾಕಿದ್ದೀರಾ, ನಿಮ್ಮ ಜಾತಿ ಯಾವುದು ಎಂದು ಪ್ರಶ್ನಿಸಿದರು. ಜಾತಿ ಕೇಳಿ, ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ. ಟಾಟಾ ಏಸ್ ವಾಹನದಿಂದ ಕೆಳಗೆ ಎಳೆದುಕೊಂಡು ಮನಸೋ ಇಚ್ಚೆ ತಳಿಸಿದ್ದಾರೆ. ಘಟನೆಯಲ್ಲಿ ದೀಪು ಎಂಬ ಯುವಕನ ಮರ್ಮಾಂಗಕ್ಕೆ ಗಾಯವಾಗಿದೆ ಎಂದು ಹಲ್ಲೆಗೊಳಗಾದ ಯುವಕ ದೀಪು ಆರೋಪಿಸಿದ್ದಾನೆ. ಇನ್ನೂ ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.