HomeNationalPhysical Abuse: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟ 19 ವರ್ಷದ ಯುವತಿ, ಪೋಕ್ಸೋ ಕಾಯ್ದೆಯಡಿ...

Physical Abuse: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟ 19 ವರ್ಷದ ಯುವತಿ, ಪೋಕ್ಸೋ ಕಾಯ್ದೆಯಡಿ ದೂರು ದಾಖಲು…!

Physical Abuse – ಹೆಚ್ಚಾಗಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುತ್ತವೆ. ಆಗಾಗ ಪುರುಷರ ಮೇಲೂ ಸಹ ಲೈಂಗಿಕ ದೌರ್ಜನ್ಯ ನೆಡಯುತ್ತಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. 19 ವರ್ಷದ ಮಹಿಳೆಯೊಬ್ಬಳು 16 ವರ್ಷ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ (Physical Abuse) ಎನ್ನಲಾಗಿದ್ದು, ಆರೋಪಿ ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆಯ ವಿರುದ್ದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ)ಯಡಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

young woman assaulted minor boy

ಈ ಆಘಾತಕಾರಿ ಘಟನೆ ಕೇರಳ ರಾಜ್ಯದಲ್ಲಿ ನಡೆದಿದೆ. ಬಂಧಿತ ಮಹಿಳೆಯನ್ನು ಕೊಲ್ಲಂ ಜಿಲ್ಲೆಯ ಛಾವರದ ಶ್ರೀಕುಟ್ಟಿ ಎಂದು ಗುರ್ತಿಸಲಾಗಿದೆ. ಆಲಪ್ಪುಳದ ವಲ್ಲಿಕುನ್ನಂ ಪೊಲೀಸರು ಆರೋಪಿ ಶ್ರೀಕುಟ್ಟಿಯನ್ನು ಬಂಧಿಸಿ, ಆಕೆಯ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತ ಬಾಲಕ ಆರೋಪಿ ಮಹಿಳೆಯ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದು, ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ. ಡಿ.1 ರಂದು ಬಾಲಕನನ್ನು ಕರೆದುಕೊಂಡು ಹೋದ ಶ್ರೀಕುಟ್ಟಿ ಅಂದಿನಿಂದ ಅಪ್ರಾಪ್ತ ಬಾಲಕನ ಮೇಲೆ ನಿರಂತರವಾಗಿ ದೌರ್ಜನ್ಯವೆಸುಗುತ್ತಿದ್ದಳು ಎಂದು ಮೂಲಗಳಿಂದ ತಿಳಿದುಬಂದಿದೆ.

young woman assaulted minor boy 1

ಆರೋಪಿ ಶ್ರೀಕುಟ್ಟಿ ಛಾವರ ಎಂಬ ಪ್ರದೇಶದ ಸ್ಥಳೀಯ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳಂತೆ. ಇದನ್ನು ತಿಳಿದ ಶ್ರೀಕುಟ್ಟಿಯ ಮನೆಯವರು ಆಕೆಯ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರಂತೆ. ಆದರೆ ಶ್ರೀಕುಟ್ಟಿ ಮಾತ್ರ ಯುವಕನೊಂದಿಗೆ ಸಂಬಂಧವನ್ನು ಮುಂದುವರೆಸಿದ್ದಳು. ಇದರಿಂದ ಬೇಸತ್ತ ಆಕೆಯ ಪೋಷಕರು ಶ್ರೀಕುಟ್ಟಿಯನ್ನು ಆಳಪ್ಪುಳ ಜಿಲ್ಲೆಯ ಭರಣಿಕ್ಕಾವಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿರಿಸಿದ್ದರು. ಇದೇ ಮನೆಯಲ್ಲಿ ಸಂತ್ರಸ್ತ ಬಾಲಕನೂ ಇದ್ದ. ಸಂತ್ರಸ್ತ ಬಾಲಕನ ಸ್ನೇಹ ಸಂಪಾದಿಸಿದ ಶ್ರೀಕುಟ್ಟಿ ಡಿ.1 ರಂದು ಆತನನ್ನು ಹೊರಗಡೆ ಕರೆದುಕೊಂಡು ಹೋಗಿದ್ದಳು. ನಂತರ ವಿವಿಧ ಸ್ಥಳಗಳಿಗೆ ಬಾಲಕನನ್ನು ಕರೆದುಕೊಂಡು ಹೋಗಿ ಆತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ ಎಂದು ಬಾಲಕ ತಿಳಿಸಿದ್ದಾನೆ ಎನ್ನಲಾಗಿದೆ. ಇನ್ನೂ ಡಿ.26 ರಂದು ಇವರಿಬ್ಬರನ್ನು ಪತ್ತನಂತ್ತಿಟ್ಟ ಬಸ್ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular