Viral Video – ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ-2 ಸಿನೆಮಾದ ಹಾಡುಗಳು ತುಂಬಾನೆ ಟ್ರೆಂಡಿಂಗ್ ನಲ್ಲಿದೆ. ಅನೇಕ ಸೋಷಿಯಲ್ ಮಿಡಿಯಾ ಸ್ಟಾರ್ ಗಳು ಸೇರಿದಂತೆ ಕೆಲ ಸಿನೆಮಾ ತಾರೆಯರೂ ಸಹ ಈ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿದ್ದಾರೆ. ಇದೀಗ ಕಾಲೇಜೊಂದರ ಹೆಚ್.ಒ.ಡಿ ಮೇಡಂ ಪುಷ್ಪಾ-2 ಸಿನೆಮಾದ ಫೀಲಿಂಗ್ಸ್ ಎಂಬ ಹಾಡಿಗೆ ವಿದ್ಯಾರ್ಥಿಗಳ ಜೊತೆಗೂಡಿ ಭರ್ಜರಿಯಾಗಿ ಸ್ಟೆಪ್ಸ್ (Viral Video) ಹಾಕಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದ ಪುಷ್ಪಾ-2 ಸಿನೆಮಾ ಬಾಕ್ಸ್ ಆಫೀಸ್ ಲೂಟಿ ಮಾಡುತ್ತಾ ನಾಗಾಲೋಟ ಮುಂದುವರೆಸಿದೆ. ಈ ಸಿನೆಮಾದ ಹಾಡುಗಳು, ಡೈಲಾಗ್ ಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅನೇಕರು ಈ ಸಿನೆಮಾದ ಹಾಡುಗಳಿಗೆ, ಡೈಲಾಗ್ ಗಳಿಗೆ ರೀಲ್ಸ್ ಮಾಡುತ್ತಾ ಆ ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಕೇರಳದ ಕೊಚ್ಚಿನ್ ವಿಶ್ವವಿದ್ಯಾನಿಲಯದ ಸೈನ್ಸ್ ಅಂಡ್ ಟೆಕ್ನಾಲಜಿಯ ಮೈಕ್ರೋ ಬಯೋಲಜಿ ವಿಭಾಗದ ಹೆಚ್.ಒ.ಡಿ ಪಾರ್ವತಿ ವೇಣು ಎಂಬುವವರು ಪುಷ್ಪಾ-2 ಸಿನೆಮಾದ ವಚ್ಚಿಂದೇ ಫೀಲಿಂಗ್ಸ್ ಎಂಬ ಹಾಡಿಗೆ ವಿದ್ಯಾರ್ಥಿಗಳೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡುತ್ತಿದೆ ಎನ್ನಲಾಗಿದೆ.
ಕೇರಳದ ಕೊಚ್ಚಿನ್ ವಿಶ್ವವಿದ್ಯಾನಿಯಲದಲ್ಲಿ ನಡೆದ ಈವೆಂಟ್ ಒಂದರಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಪುಷ್ಪಾ-2 ಸಿನೆಮಾದ ಫೀಲಿಂಗ್ಸ್ ಎಂಬ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದರು. ಈ ಸಮಯದಲ್ಲಿ ಅಲ್ಲಿಗೆ ಬಂದ ಸೈನ್ಸ್ ಅಂಡ್ ಟೆಕ್ನಾಲಜಿಯ ಮೈಕ್ರೋ ಬಯೋಲಜಿ ವಿಭಾಗದ ಹೆಚ್.ಒ.ಡಿ ಪಾರ್ವತಿ ವೇಣು ಸಹ ವಿದ್ಯಾರ್ಥಿನೀಯರೊಂದಿಗೆ ಹೆಜ್ಜೆ ಹಾಕಿದ್ದಾರೆ. ಸೀರೆಯಲ್ಲಿಯೇ ಅವರು ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಆರಂಭದಲ್ಲಿ ವಿದ್ಯಾರ್ಥಿನಿಯರ ಡ್ಯಾನ್ಸ್ ನೋಡುತ್ತಾ, ಬಳಿಕ ತನ್ನ ಕೈಯಲ್ಲಿದ್ದ ಹ್ಯಾಂಡ್ ಬ್ಯಾಗ್ ಅನ್ನು ಪಕ್ಕಕ್ಕೆ ಇಟ್ಟು ವಿದ್ಯಾರ್ಥಿನಿಯರೊಂದಿಗೆ ಸೇರಿಕೊಂಡು ನೃತ್ಯ ಮಾಡಲು ಶುರು ಮಾಡಿದ್ದಾರೆ.
ಇನ್ನೂ ಕಾಲೇಜಿನ ಹೆಚ್.ಒ.ಡಿ ರವರೇ ವಿದ್ಯಾರ್ಥಿನಿಯರೊಂದಿಗೆ ನೃತ್ಯ ಮಾಡಲು ಸೇರಿಕೊಂಡಾಗ ವಿದ್ಯಾರ್ಥಿನಿಯರ ಜೋಷ್ ಮತ್ತಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಇದು ಅಲ್ಲಿದ್ದವರಿಗೆಲ್ಲಾ ಒಂದು ತರಹ ಶಾಕ್ ಆದಂತೆ ಆಗಿದೆ ಎನ್ನಲಾಗಿದೆ. ಈ ವಿಡಿಯೋ ವನ್ನು ottta_mynd ಎಂಬ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ನಿಮ್ಮ ಹೆಚ್.ಒ.ಡಿ ಮೇಡಂ ನಿಮಗಿಂತ ವೈಬ್ ಆದಾಗ ಎಂಬ ಕ್ರೇಜಿ ಟೈಟಲ್ ಅನ್ನು ನೀಡಲಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಜೊತೆಗೆ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ವಿಡಿಯೋಗೆ ಮತ್ತಷ್ಟು ವೈಬ್ ಹೆಚ್ಚಾಗುವಂತೆ ಮಾಡಿದ್ದಾರೆ.