Pawan Kalyan – ಹೈದರಾಬಾದ್ ನ ಸಂಧ್ಯಾಥಿಯೇಟರ್ ಕಾಳ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ರವರನ್ನು ಪೊಲೀಸರು ಬಂಧಿಸಿದ್ದು, ಬಳಿಕ ಬೈಲ್ ಮೇಲೆ ಬಿಡುಗಡೆಯಾಗಿದ್ದು ನಡೆದಿದೆ. ಈ ಸುದ್ದಿ ಇಡೀ ದೇಶದಾದ್ಯಂತ ಭಾರಿ ಸದ್ದು ಮಾಡಿತ್ತು. ಈ ಕುರಿತು ನಟ ಹಾಗೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ವೈಸಿಪಿ ನಾಯಕರ ದಾಳಿಯಲ್ಲಿ ಗಾಯಗೊಂಡ ಎಂಪಿಡಿಒ ರವರನ್ನು ಭೇಟಿ ಮಾಡಿದ ಸಮಯದಲ್ಲಿ ಈ ಕುರಿತು ಮಾತನಾಡಿದ್ದಾರೆ.

ಕೆಲವು ದಿನಗಳಿಂದ ಅನೇಕ ಮಾಧ್ಯಮಗಳಲ್ಲಿ ಅಲ್ಲು ಅರ್ಜುನ್ ಬಂಧನದ ಕುರಿತು ಚರ್ಚೆ ನಡೆಯುತ್ತಲೇ ಇದೆ. ಈ ಪ್ರಕರಣದ ಕುರಿತು ಅನೇಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಿನೆಮಾ ಕಲಾವಿದರ ಜೊತೆಗೆ ರಾಜಕೀಯ ನಾಯಕರೂ ಸಹ ಈ ಕುರಿತು ಮಾತನಾಡಿದ್ದಾರೆ. ಜೊತೆಗೆ ಈ ಪ್ರಕರಣ ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ಹಿನ್ನೆಲೆಯಲ್ಲಿ ಅನೇಕರು ಈ ಕುರಿತು ಮಾತನಾಡುತ್ತಿಲ್ಲ. ಇಷ್ಟೆಲ್ಲಾ ನಡೆಯುತ್ತಿದ್ದರೂ ಮೆಗಾ ಕುಟುಂಬದ ಒಬ್ಬರೂ ಈ ಘಟನೆಯ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ. ಮೆಗಾಸ್ಟಾರ್ ಚಿರಂಜೀವಿ, ನಾಗಬಾಬು ರವರುಗಳು ಅಲ್ಲು ಅರ್ಜುನ್ ಬಂಧನವಾದ ದಿನ ಅವರ ಮನೆಗೆ ಹೋಗಿದ್ದರು. ಆದರೆ ಈ ಘಟನೆಯ ಬಗ್ಗೆ ಯಾರೂ ಪ್ರತಿಕ್ರಿಯೆ ನೀಡಿರಲಿಲ್ಲ.
ಆದರೆ ಈ ಕುರಿತು ನಟ ಹಾಗೂ ಡಿಸಿಎಂ ಪವನ್ ಕಲ್ಯಾಣ್ ರವರನ್ನು ಮಾತನಾಡುವಂತೆ ಮಾಧ್ಯಮದವರು ಒತ್ತಾಯಿಸಿದರು. ಈ ಘಟನೆಯ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಕಡಪದಲ್ಲಿ ವೈಸಿಪಿ ನಾಯಕರ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡ ಎಂಪಿಡಿಒ ಜವಾಹರ್ ಬಾಬು ರವರನ್ನು ಭೇಟಿ ಮಾಡಲು ಪವನ್ ಕಲ್ಯಾಣ್ ಬಂದಿದ್ದರು. ಇಲ್ಲಿಗೆ ಪವನ್ ಕಲ್ಯಾಣ್ ಬರುತ್ತಿದ್ದಾರೆ ಎಂದು ತಿಳಿದ ಅಭಿಮಾನಿಗಳು ಸಹ ಕಿಮ್ಸ್ ಆಸ್ಪತ್ರೆಯ ಬಳಿ ಬಂದಿದ್ದರು. ಈ ವೇಳೆ ಡಿಸಿಎಂ ಪವನ್ ಕಲ್ಯಾಣ್ ರವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಈ ಸಮಯದಲ್ಲಿ ಓರ್ವ ವರದಿಗಾರ ಸರ್ ಅಲ್ಲು ಅರ್ಜುನ್ ಬಂಧನದ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ. ಈ ಕುರಿತು ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನೆ ಕೇಳಿದರು.

ವರದಿಗಾರ ಕೇಳಿದ ಈ ಪ್ರಶ್ನೆಗೆ ಉತ್ತರಿಸಿದ ಪವನ್ ಕಲ್ಯಾಣ್, ನಾನು ಇಲ್ಲಿಗೆ ಬಂದಿರೋದು ಯಾವ ವಿಷಯಕ್ಕೆ, ಆಸ್ಪತ್ರೆಯ ಬಳಿ ನೀವು ಹೀಗೆ ಪ್ರಶ್ನೆ ಕೇಳುವುದು ಸರಿಯಲ್ಲ. ಘಟನೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಿ ಎಂದು ಉತ್ತರಿಸಿದರು. ಇನ್ನೂ ಅಲ್ಲಿ ನೆರೆದಿದ್ದ ಪವನ್ ಕಲ್ಯಾಣ್ ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು ಬಾಬುಲಕೇ ಬಾಬು, ಕಲ್ಯಾಣ್ ಬಾಬು, ಓಜಿ…ಓಜಿ.. ಎಂದು ಕೂಗಿದರು. ಇದಕ್ಕೂ ಕೋಪಗೊಂಡ ಪವನ್ ಕಲ್ಯಾಣ್ ಏನಯ್ಯ ನೀವು, ಎಲ್ಲಿ ಯಾವ ಘೋಷಣೆ ಕೂಗಬೇಖು ಗೊತ್ತಾಗೊಲ್ವಾ ನಿಮ್ಗೆ ಎಂದು ಆಕ್ರೋಷಗೊಂಡರು.