Transgender Love – ಪ್ರೀತಿಗೆ ಜಾತಿ, ಧರ್ಮ, ಹಣ, ವಯಸ್ಸು ಯಾವುದು ಅಡ್ಡಿಯಿಲ್ಲ ಎಂದು ಹೇಳಲಾಗುತ್ತದೆ. ಇತ್ತೀಚಿಗೆ ಸಲಿಂಗಿಗಳು ಪ್ರೀತಿಸಿ ಮದುವೆಯಾಗುತ್ತಿರುವುದು ನೋಡುತ್ತಿರುತ್ತೇವೆ. ಅದೇ ರೀತಿ ಮಂಗಳಮುಖಿಯನ್ನು ಯುವಕನೋರ್ವ ಪ್ರೀತಿಸಿದ್ದಾನೆ. ಆಕೆಯನ್ನೇ ಮದುವೆಯಾಗಲು ಮಗ ನಿರ್ಧಾರ ಮಾಡಿದ್ದಾನೆ. ಇದರಿಂದ ಮನನೊಂದ ಯುವಕನ (Transgender Love) ಪೋಷಕರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಆಂಧ್ರಪ್ರದೇಶದ ನಂದ್ಯಾಲದಲ್ಲಿ ನಡೆದಿದೆ ಎನ್ನಲಾಗಿದೆ.
ಆಂಧ್ರಪ್ರದೇಶದ ನಂದ್ಯಾಲದಲ್ಲಿ ಈ ಘಟನೆ ನಡೆದಿದೆ. ನಂದ್ಯಾಲದ ಸುಬ್ಬುರಾಯುಡು ಹಾಗೂ ಸರಸ್ಪತಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದಂಪತಿಯ ಪುತ್ರ ಸುನೀಲ್ (24) ಬಿ ಟೆಕ್ ಪದವೀಧರನಾಗಿದ್ದಾನೆ. ಈತ ಸ್ಮಿತ ಎಂಬ (Transgender Love) ಮಂಗಳಮುಖಿಯೊಂದಿಗೆ ಸ್ನೇಹ ಬೆಳೆಸಿದ್ದ. ಈ ಸ್ನೇಹ ಹೋಗುತ್ತಾ ಹೋಗುತ್ತಾ ಪ್ರೀತಿಯಾಗಿ ಬದಲಾಗಿದೆ. ಆ ಮಂಗಳಮುಖಿಯನ್ನೇ ಮದುವೆಯಾಗಲು ನಿರ್ಧಾರ ಮಾಡಿದ್ದಾನೆ. ಈ ವಿಚಾರ ಪೋಷಕರ ಬಳಿ ಹೇಳಿದ್ದಾನೆ. ತಾನು ಸ್ಮಿತಾ ಎಂಬ ಮಂಗಳಮುಖಿಯನ್ನು ಪ್ರೀತಿಸುತ್ತಿದ್ದೇನೆ, (Transgender Love) ಆಕೆಯನ್ನೇ ಮದುವೆಯಾಗುವುದಾಗಿ ಪೋಷಕರ ಬಳಿ ಕಡ್ಡಿ ಮುರಿದಂತೆ ಹೇಳಿದ್ದನಂತೆ. ಈ ವಿಚಾರ ತಿಳಿಯುತ್ತಿದ್ದಂತೆ ಪೋಷಕರು ಆತನಿಗೆ ಹಲವು ಭಾರಿ ಬುದ್ದಿ ಹೇಳಿದ್ದಾರೆ. ಜೊತೆಗೆ ಹುಡುಗಿಯೊಬ್ಬಳನ್ನು ನೋಡಿ ಆಕೆಯೊಂದಿಗೆ ಮದುವೆ ಮಾಡುವುದಾಗಿ ಪೋಷಕರು ನಿರ್ಧಾರ ಮಾಡಿದ್ದಾರೆ.
ನಂತರ ಮಗ ಮಂಗಳಮುಖಿಯನ್ನು (Transgender Love) ಪ್ರೀತಿಸುತ್ತಿರುವುದನ್ನು ತಪ್ಪಿಸಲು ಕೌನ್ಸಿಲಿಂಗ್ ಮಾಡಿಸಲು ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಕೌನ್ಸಿಲಿಂಗ್ ನಂತರವೂ ಸುನೀಲ್ ಸ್ಮಿತಾಳನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಮಗನ ಈ ನಿರ್ಧಾರ ಪೋಷಕರು ಬೇಸತ್ತಿದ್ದಾರೆ ಜೊತೆಗೆ ಅವಮಾನ ಸಹ ಅನುಭವಿಸಿದ್ದಾರಂತೆ. (Transgender Love) ಈ ಕಾರಣಗಳಿಂದ ಸುಬ್ಬುರಾಯುಡು ಹಾಗೂ ಸರಸ್ಪತಿ ಇಬ್ಬರೂ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿದ ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.