Viral News – ವಿವಾಹೇತರ, ಅನೈತಿಕ ಸಂಬಂಧಗಳ ಕಾರಣಗಳಿಂದ ಅನೇಕ ಅನಾಹುತಗಳು ನಡೆದಿದೆ. ಕೆಲವೊಂದು ಕಡೆ ಕೊಲೆಗಳು, ಆತ್ಮಹತ್ಯೆಗಳು ನಡೆದಿವೆ. ಮದುವೆಯಾದ ಗಂಡ-ಹೆಂಡತಿ ಹಣ, ಕಾಮತೃಷೆಗಳಿಂದ ಬೇರೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿರುತ್ತಾರೆ. ಈ ರೀತಿಯ ಅಕ್ರಮ ಸಂಬಂಧಗಳ ಕಾರಣದಿಂದ ಕೆಲವೊಂದು ಅನಾಹುತಗಳು ನಡೆದಿರುತ್ತವೆ. ಈ ಕುರಿತು ಕೆಲವೊಂದು ಸುದ್ದಿಗಳೂ ಸಹ ವೈರಲ್ ಆಗಿರುತ್ತವೆ. ಅಂತಹುದೇ ಘಟನೆಯೊಂದು ನಡೆದಿದೆ. ಯುವಕನೋರ್ವ ವಿವಾಹವಾಗಿರುವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಆಕೆಯೊಂದಿಗೆ ರೊಮ್ಯಾನ್ಸ್ ಮಾಡುವಾಗ (Viral News) ಸಿಕ್ಕಿಬಿದ್ದಿದ್ದಾನೆ. ಆಕೆಯ ಗಂಡ ಹಾಗೂ ಕುಟುಂಬಸ್ಥರು ಸಂಬಂಧ ಇಟ್ಟುಕೊಂಡಿದ್ದ ಯುವಕನಿಗೆ ಸರಿಯಾಗಿಯೇ ಗೂಸಾ ಕೊಟ್ಟಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಕ್ರಮ ಸಂಬಂಧ ಅಥವಾ ವಿವಾಹೇತರ ಸಂಬಂಧಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಅಂದರೇ, ಸಂಬಂಧ ಇಟ್ಟುಕೊಂಡವರು ಸಿಕ್ಕಿಬಿದ್ದಂತಹ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿರುತ್ತವೆ. ಇದೀಗ ಅಂತಹುದೇ ವಿಡಿಯೋ ಸಹ ವೈರಲ್ ಆಗಿದೆ. ಮನೆಯ ಟೇರೆಸ್ ಮೇಲೆ ಯುವಕನೊಬ್ಬ ವಿವಾಹಿತ ಮಹಿಳೆಯ ಜೊತೆ ರೊಮ್ಯಾನ್ಸ್ ಮಾಡ್ತಿದ್ದ ವೇಳೆ ಆಕೆಯ ಗಂಡ ಹಾಗೂ ಕುಟುಂಬಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಅನೈತಿಕ ಸಂಬಂಧದ ಆರೋಪದ ಮೇಲೆ ಯುವಕನೊಬ್ಬನಿಗೆ ತೀವ್ರವಾಗಿ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅವ್ರೋಹಾದಲ್ಲಿ ನಡೆದಿದೆ.
ವಿವಾಹಿತ ಮಹಿಳೆಯೊಂದಿಗೆ ಯುವಕನೋರ್ವ ಮನೆಯ ಮೇಲ್ಚಾವಡಿಯ ಮೇಲೆ ರೊಮ್ಯಾನ್ಸ್ ಮಾಡುತ್ತಾ ಇರುತ್ತಾರೆ. ಈ ವೇಳೆ ಮಹಿಳೆಯ ಗಂಡ ಹಾಗೂ ಕುಟುಂಬಸ್ಥರು ನೋಡಿದ್ದಾರೆ. ಈ ದೃಶ್ಯವನ್ನು ನೋಡಿದ ಗಂಡ ಕೋಪಗೊಂಡು ಯುವಕನ ಮೇಲೆ ಮನಸೋ ಇಚ್ಛೆ ಥಳಿಸಿದ್ದಾರೆ. ಈ ಕುರಿತ ವಿಡಿಯೋ ಒಂದನ್ನು @News1IndiaTweet ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅನೈತಿಕ ಸಂಬಂಧದ ಆರೋಪದ ಮೇರೆಗೆ ಯುವಕನೊಬ್ಬನಿಗೆ ಸರಿಯಾಗಿ ಥಳಿಸುತ್ತಿರುವ ದೃಶ್ಯವನ್ನು ನೋಡಬಹುದಾಗಿದೆ. ಚಪ್ಪಲಿ ಹಾಗೂ ಬೆಲ್ಟ್ ನಿಂದ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಕಳೆದ ಡಿಸೆಂಬರ್ 31, 2025 ರಂದು ಹಂಚಿಕೊಂಡ ಈ ವಿಡಿಯೋ ವೈರಲ್ ಆಗುತ್ತಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ಸ್ ಗಳನ್ನು ಹರಿಬಿಡುತ್ತಿದ್ದಾರೆ. ಅನೇಕರು ಈ ಘಟನೆಯ ಬಗ್ಗೆ ಪರವಾಗಿ ಕಾಮೆಂಟ್ ಮಾಡಿದ್ರೆ, ಮತ್ತೆ ಕೆಲವರು ವಿರೋಧವಾಗಿ ಕಾಮೆಂಟ್ಸ್ ಹಾಕುತ್ತಿದ್ದಾರೆ. ಓರ್ವ ನೆಟ್ಟಿಗ ಯುವಕನೊಂದಿಗೆ ಇದ್ದಂತಹ ಮಹಿಳೆಗೂ ಇದೇ ರೀತಿಯಲ್ಲಿ ಪಾಠ ಕಲಿಸಬೇಕಿತ್ತು ಎಂದರೇ, ಮತ್ತೊರ್ವ ತಪ್ಪು ಇಬ್ಬರದ್ದೂ ಎಂದಾದರೇ ಯುವಕನಿಗೆ ಮಾತ್ರ ಶಿಕ್ಷೆ ನೀಡಿದ್ದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.