Video : ಬೈಕ್‌ನಲ್ಲಿ ‘ಕೇರಿಂಗ್ ಅಂಡ್ ಶೇರಿಂಗ್’: ಸಿಗರೇಟ್ ಹಂಚಿಕೊಂಡ ಜೋಡಿಯ ವಿಡಿಯೋ ವೈರಲ್…!

Video – ಸಂಬಂಧ ಅಂದ್ರೆ ಹೊಂದಾಣಿಕೆ, ಪ್ರೀತಿ ಮತ್ತು ಪರಸ್ಪರ ಕಾಳಜಿ. ಆದರೆ, ಕೆಲವೊಮ್ಮೆ ಈ ‘ಕಾಳಜಿ’ಯ ವ್ಯಾಖ್ಯಾನವೇ ವಿಚಿತ್ರವಾಗಿ ಕಾಣಬಹುದು. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಅಂತಹದ್ದೇ ಒಂದು ಸನ್ನಿವೇಶವನ್ನು ಅನಾವರಣಗೊಳಿಸಿದೆ. ಬೈಕಿನಲ್ಲಿ ಕುಳಿತ ಜೋಡಿಯೊಂದು, ಅದರಲ್ಲಿಯೂ ಮುಖ್ಯವಾಗಿ ಪತ್ನಿ ಅಥವಾ ಪ್ರೇಯಸಿ ಸಿಗರೇಟ್ ಸೇದುತ್ತಲೇ ತಮ್ಮ ಸಂಗಾತಿಗೂ ಸಿಗರೇಟ್ ನೀಡಿರುವ ದೃಶ್ಯ, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.

Indian woman sitting on a motorbike behind her husband, smoking a cigarette and handing it to him at a traffic signal, viral video moment

Video – ‘ಕೇರಿಂಗ್ ಅಂಡ್ ಶೇರಿಂಗ್’ – ಅಂದು, ಇಂದು!

ಈ ವಿಡಿಯೋ ನೋಡಿದ ಮೇಲೆ, ಒಂದು ಕಾಲದಲ್ಲಿ ‘ಕೇರಿಂಗ್ ಅಂಡ್ ಶೇರಿಂಗ್’ ಅಂದ್ರೆ ಕಷ್ಟದಲ್ಲಿ ಜೊತೆಯಾಗಿ ನಿಲ್ಲೋದು, ಸಂತೋಷದಲ್ಲಿ ಪಾಲ್ಗೊಳ್ಳೋದು ಅಂತ ಅರ್ಥ ಇತ್ತು. ಆದರೆ ಈ ವಿಡಿಯೋದಲ್ಲಿ ಸಿಗರೇಟ್ ಹಂಚಿಕೊಳ್ಳುವ ಮೂಲಕ ‘ಕೇರಿಂಗ್’ ತೋರಿಸಿರುವ ದೃಶ್ಯ, ಎಷ್ಟೋ ಮಂದಿಗೆ ಅಚ್ಚರಿ ಮೂಡಿಸಿದೆ. “ಇದೇನಾ ಇಂದಿನ ಆದರ್ಶ ಸಂಬಂಧಗಳು?” ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಮೂಡಿದೆ. ಕೆಲವರು “ಕಾಲ ಬದಲಾಗಿದೆ” ಅಂತ ಅಂದ್ರೆ, ಇನ್ನೂ ಕೆಲವರು “ನಮ್ಮ ಕಣ್ಣು ಪಾವನವಾಯಿತು!” ಅಂತ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.

Video – ಆದರ್ಶ ದಂಪತಿಗಳೋ ಅಥವಾ ಟ್ರೆಂಡ್ ಸೆಟ್ಟರ್‌ಗಳೋ?

@dbabuadvocate ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. “ಕೆಲವು ಜೋಡಿಗಳನ್ನು ದೇವರು ಸ್ವರ್ಗದಲ್ಲೇ ನಿಶ್ಚಯ ಮಾಡಿರುತ್ತಾನೆ. 36 ಗುಣಗಳನ್ನು ಹೊಂದಿರುವ ಜೋಡಿ ಇದುವೇ ಇರಬೇಕು, ಇದನ್ನೇ ಹೆಗಲಿಗೆ ಹೆಗಲು ಕೊಟ್ಟು ನಡೆಯುವುದು ಎನ್ನುವುದು” ಎಂಬ ತಮಾಷೆಯ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಕಾಣಿಸುವಂತೆ, ಸಿಗ್ನಲ್‌ನಲ್ಲಿ ನಿಂತಿರುವ ಬೈಕಿನ ಹಿಂಬದಿಯಲ್ಲಿ ಕುಳಿತ ಮಹಿಳೆಯೊಬ್ಬಳು ಆರಾಮವಾಗಿ ಸಿಗರೇಟ್ ಸೇದುತ್ತಾಳೆ. ನಂತರ, ಮುಂದೆ ಕುಳಿತಿರುವ ವ್ಯಕ್ತಿಗೆ ಸಿಗರೇಟನ್ನು ಆತನ ಬಾಯಿಗೆ ಇಟ್ಟು, ಸೇದಲು ಅವಕಾಶ ಮಾಡಿಕೊಡುತ್ತಾಳೆ. ಇದು ನಿಜಕ್ಕೂ ಅವರ ನಡುವಿನ ಪ್ರೀತಿ, ವಿಶ್ವಾಸವನ್ನು ತೋರಿಸುತ್ತದೆಯೇ ಅಥವಾ ಇತ್ತೀಚಿನ ಸೋಷಿಯಲ್ ಮೀಡಿಯಾ ಟ್ರೆಂಡ್‌ಗಳನ್ನು ಅನುಸರಿಸುವ ಪ್ರಯತ್ನವೇ ಎಂಬ ಚರ್ಚೆ ಶುರುವಾಗಿದೆ.

Indian woman sitting on a motorbike behind her husband, smoking a cigarette and handing it to him at a traffic signal, viral video moment

ವೈರಲ್ ವಿಡಿಯೋ ಇಲ್ಲಿದೆ ನೋಡಿ: ವೀಡಿಯೊ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Video – ನೆಟ್ಟಿಗರ ಪ್ರತಿಕ್ರಿಯೆಗಳು: ಅಚ್ಚರಿ, ತಮಾಷೆ, ಮತ್ತು ಚಿಂತೆ!

ಜೂನ್ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 2000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ವಿಡಿಯೋ ನೋಡಿದ ಬಳಿಕ ಸೋಷಿಯಲ್ ಮೀಡಿಯಾ ಬಳಕೆದಾರರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ:

Read this also : ಹೆಂಡತಿಯನ್ನು ಬಾಲ್ಕನಿಯಲ್ಲಿ ನೇತುಹಾಕಿದ ಪತಿ – ಭಯಾನಕ ದೃಶ್ಯ, ರಿಷಿಕೇಶ್‌ ನಲ್ಲಿ ನಡೆದ ಘಟನೆ…!

  • ಒಬ್ಬರು “ಇವರೇ ನೋಡಿ ಆದರ್ಶ ದಂಪತಿಗಳು, ನಮ್ಮ ಕಣ್ಣು ಪಾವನವಾಯಿತು” ಅಂದ್ರೆ,
  • ಮತ್ತೊಬ್ಬರು, “ಆತ ಇಂತಹ ಪತ್ನಿಯನ್ನು ಪಡೆಯಲು ಪುಣ್ಯ ಮಾಡಿರಬೇಕು” ಅಂತ ಕಾಮೆಂಟ್ ಮಾಡಿದ್ದಾರೆ.
  • ಇನ್ನೊಬ್ಬರು ಹಿಂದಿನ ಕಾಲವನ್ನು ನೆನಪಿಸಿಕೊಳ್ಳುತ್ತಾ, “ನಮ್ಮ ಕಾಲದಲ್ಲಿ ಸಿಗರೇಟ್ ಕೈಯಲ್ಲಿ ಹಿಡಿದರೆ ಹೆಂಡ್ತಿ ಚಂಡಿಯಾಗುತ್ತಿದ್ದಳು..ಆದರೆ ಈಗ ಕಾಲ ನೋಡಿ ಹೇಗಾದಿದೆ” ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top