Dog Love : ಮಾಲೀಕನನ್ನು ಬಿಡಲೊಲ್ಲದ ಮುದ್ದು ನಾಯಿ, ಮನ ಗೆಲ್ಲುವ ವಿಡಿಯೋ ವೈರಲ್…!

Dog Love – ನಾಯಿಗಳು ಮನುಷ್ಯನ ಆಪ್ತ ಸ್ನೇಹಿತ ಅನ್ನೋದು ಸುಳ್ಳಲ್ಲ. ಅವುಗಳ ಪ್ರೀತಿ ಎಷ್ಟೊಂದು ಆಳವಾದದ್ದು ಅನ್ನೋದಕ್ಕೆ ಇಲ್ಲೊಂದು ಮನಮುಟ್ಟುವ ವಿಡಿಯೋ ಸಾಕ್ಷಿಯಾಗಿದೆ. ಮಾಲೀಕನನ್ನು ಒಂದು ಕ್ಷಣವೂ ಬಿಟ್ಟಿರಲಾರದ ಮುದ್ದು ಶ್ವಾನವೊಂದು ಮನೆಯಿಂದ ಹೊರಹೋಗಲು ಪ್ರಯತ್ನಿಸುತ್ತಿದ್ದ ತನ್ನ ಮಾಲೀಕನನ್ನು ತಡೆಯಲು ಪಟ್ಟಿರುವ ಸರ್ಕಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

Loyal dog clings to owner to stop him from leaving home – heartwarming viral moment

Dog Love – ಮಾಲೀಕನಿಗಾಗಿ ಶ್ವಾನದ ಹಠ!

ಸಾಮಾನ್ಯವಾಗಿ ನಾಯಿಗಳು ತಮ್ಮ ಮಾಲೀಕರು ಮನೆಗೆ ಬರುವ ದಾರಿ ಕಾಯುತ್ತವೆ, ಅವರ ಹಿಂದೆ ಹಿಂದೆ ಹೋಗುತ್ತವೆ. ಆದರೆ, ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಮಾಲೀಕ ಹೊರಗೆ ಹೋಗುವುದನ್ನೇ ತಡೆಯಲು ನಾಯಿಯೊಂದು ಯತ್ನಿಸಿದೆ. Instagram ನ ‘Quickheadlineindia’ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ, “ಮನೆ ಬಿಡೋದು ಇಷ್ಟೊಂದು ಕಷ್ಟನಾ?” ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

Dog Love – ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಮನೆಯಿಂದ ಹೊರಹೋಗಲು ಪ್ರಯತ್ನಿಸುತ್ತಾನೆ. ಆದರೆ ಅವನ ಮುದ್ದಿನ ನಾಯಿ, ಅವನು ಹೋಗದಂತೆ ಅವನ ಮೈಮೇಲೆ ಜಿಗಿಯುತ್ತಾ, ಕಾಲುಗಳನ್ನು ಹಿಡಿದುಕೊಂಡು ಹಠ ಮಾಡುತ್ತದೆ. ಕೊನೆಗೆ ನಾಯಿಯ ಕೈಯಿಂದ ತಪ್ಪಿಸಿಕೊಳ್ಳಲು ಮಾಲೀಕ ಗೇಟ್ ಹಾರಿ ಹೋಗುತ್ತಾನೆ. ಮಾಲೀಕ ಬೈಕ್ ಏರಿ ಹೊರಟಾಗ, ನಾಯಿ ಬೇರೆ ದಾರಿಯಲ್ಲಿ ಅವನನ್ನು ಹಿಂಬಾಲಿಸಲು ಪ್ರಯತ್ನಿಸುತ್ತದೆ. ಈ ದೃಶ್ಯ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ.

Loyal dog clings to owner to stop him from leaving home – heartwarming viral moment

Read this also : ಸಾಕು ನಾಯಿ ಹುಟ್ಟುಹಬ್ಬಕ್ಕೆ ಬರೊಬ್ಬರಿ 2.5 ಲಕ್ಷ ಬೆಲೆಯ ಬಂಗಾರು ಚೈನ್ ಗಿಫ್ಟ್ ಕೊಟ್ಟ ಮಹಿಳೆ…..!

Dog Love – ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಈ ಮುದ್ದು ನಾಯಿಯ ನಿಷ್ಕಲ್ಮಷ ಪ್ರೀತಿಗೆ ಮನಸೋತಿದ್ದಾರೆ. ಕೆಲವರು, “ಈ ಪ್ರೀತಿ ಶ್ವಾನ ಪ್ರೇಮಿಗಳಿಗೆ ಮಾತ್ರ ಅರ್ಥವಾಗುತ್ತದೆ” ಎಂದಿದ್ದರೆ, ಇನ್ನೊಬ್ಬರು “ಬೆಕ್ಕು ಈ ರೀತಿ ನಿಮ್ಮನ್ನು ಪ್ರೀತಿಸಲು ಸಾಧ್ಯವಿಲ್ಲ” ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, “ನಮ್ಮ ಮನೆಯ ನಾಯಿದು ಇದೇ ಕಥೆ, ಅದರ ಕಣ್ಣು ತಪ್ಪಿಸಿ ಹೋಗಬೇಕೆಂದರೆ ಸಾಕಾಗಿ ಹೋಗುತ್ತದೆ” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top