Wayanad Landslide: ವಯನಾಡು ದುರಂತ: ಚಿರಂಜೀವಿ, ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ದೇಣಿಗೆ….!

ಕಳೆದ ಜು.30 ರಂದು ಕೇರಳದ ವಯನಾಡನಲ್ಲಿ ಭೂಕುಸಿತ (Wayanad Landslide) ಸಂಭವಿಸಿ ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ಇಲ್ಲಿಯವರೆಗೂ ಸುಮಾರು 300 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಊರಿಗೆ ಊರೇ ಸ್ಮಶಾನವಾಗಿದೆ. ವಯನಾಡು ಸಂತ್ರಸ್ತರಿಗೆ ಇದೀಗ ನೆರವಿನ ಅಗತ್ಯ ತುಂಬಾನೆ ಇದೆ. ಈಗಾಗಲೇ ಕರ್ನಾಟಕ ಸರ್ಕಾರ ಅಲ್ಲಿ ಮನೆ ಕಳೆದುಕೊಂಡವರಿಗೆ ನೂರು ಮನೆ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದೆ. ಇದೀಗ ವಯನಾಡು ಸಂತ್ರಸ್ತರಿಗೆ (Wayanad Landslide)  ತೆಲುಗು ಸ್ಟಾರ್‍ ನಟರಾದ ಮೆಗಾಸ್ಟಾರ್‍ ಚಿರಂಜೀವಿ, ರಾಮ್ ಚರಣ್ ತೇಜ್ ಹಾಗೂ ಅಲ್ಲು ಅರ್ಜುನ್ ರವರುಗಳು ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Tollywood stars helped wayanad 2

ವಯನಾಡು ಭೂಕುಸಿತದ (Wayanad Landslide) ಸಂತ್ರಸ್ತರಿಗೆ ಮೆಗಾ ಸ್ಟಾರ್‍ ಚಿರಂಜೀವಿ ಹಾಗೂ ರಾಮ್ ಚರಣ್ ಜಂಟಿಯಾಗಿ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಸಂಬಂಧ ಮೆಗಾಸ್ಟಾರ್‍ ಚಿರಂಜೀವಿಯವರು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ. ಕೆಲವು ದಿನಗಳಿಂದ ಕೇರಳದಲ್ಲಿ ಪ್ರಾಕೃತಿಕ ವಿಕೋಪಕ್ಕೆ ನೂರಾರು ಮಂದಿ ಪ್ರಾಣ ಕಳೆದುಕೊಂಡಿರುವ ಸುದ್ದಿ ತಿಳಿದು ನನಗೆ ತೀವ್ರ ನೋವು ಉಂಟಾಗಿದೆ. ಈ (Wayanad Landslide) ದುರಂತದ ಸಂತ್ರಸ್ತರಿಗೆ ನನ್ನ ಮನ ಮಿಡಿಯುತ್ತಿದೆ. ಚರಣ್ ಹಾಗೂ ನಾನು ಜೊತೆಯಾಗಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಸಂತ್ರಸ್ತರ (Wayanad Landslide) ಬೆಂಬಲಕ್ಕೆ ನಿಲ್ಲುತ್ತೇವೆ. ನೋವಿನಲ್ಲಿರುವ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

Tollywood stars helped wayanad 0

ಇನ್ನೂ ಸೌತ್ ಸಿನಿರಂಗದ ಅನೇಕ ಸ್ಟಾರ್‍ ಗಳೂ ಸಹ (Wayanad Landslide) ಕೇರಳ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ. ಸ್ಟಾರ್‍ ನಟ ಅಲ್ಲು ಅರ್ಜುನ್ 25 ಲಕ್ಷ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ 10 ಲಕ್ಷ, ಮಲಯಾಳಂ ಸೂಪರ್‍ ಸ್ಟಾರ್‍ ಮೋಹನ್ ಲಾಲ್ 3 ಕೋಟಿ, ಮುಮ್ಮುಟ್ಟಿ ಹಾಗೂ ದುಲ್ಕರ್‍ ಸಲ್ಮಾನ್ ರವರು ಜಂಟಿಯಾಗಿ 35 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಜೊತೆಗೆ ನಜ್ರಿಯಾ, ಫಹಾದ್, ಸೂರ್ಯ, ಕಾರ್ತಿ, ಚಿಯಾನ್ ವಿಕ್ರಂ ಸೇರಿದಂತೆ ಅನೇಕರು (Wayanad Landslide) ವಯನಾಡು ಸಂತ್ರಸ್ಥರಿಗೆ ಸಹಾಯಾಸ್ತ ಚಾಚಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Leave a Comment

Your email address will not be published. Required fields are marked *

Scroll to Top