Viral Video – ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಸಮಯದಲ್ಲಿ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಕೆಲವೊಂದು ಕಡೆ ರಸ್ತೆ ರಿಪೇರಿ ಮಾಡಲು ಅಥವಾ ಇತರೆ ಕೆಲಸಗಳಿಗಾಗಿ ಗುಣಿಗಳನ್ನು ಅಗೆದಿರುತ್ತಾರೆ ಜೊತೆಗೆ ಅಲ್ಲಲ್ಲಿ ತೆರೆದ ಚರಂಡಿ ಗುಂಡಿಗಳೂ ಸಹ ಇರುತ್ತವೆ. ಇದೀಗ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಪೋನ್ ನಲ್ಲಿ ಮಾತನಾಡುತ್ತಾ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಲ್ಲಿದ್ದ ತೆರೆದ ಚರಂಡಿ ಗುಂಡಿಯೊಳಗೆ ಮಹಿಳೆ ಬಿದ್ದಿದ್ದಾಳೆ. ಈ ಅಘಾತಕಾರಿ ವಿಡಿಯೋ ವೈರಲ್ ಆಗುತ್ತಿದ್ದು, ನೋಡುಗರು ಬೆಚ್ಚಿಬಿದ್ದಿದ್ದಾರೆ.

ಅಂದಹಾಗೆ ಈ ಘಟನೆ ನಡೆದಿರೋದು ಕಳೆದ 2021 ರಲ್ಲಿ. ಫರಿದಾಬಾದ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದೇ ವಿಡಿಯೋ ಇದೀಗ ಮತ್ತೊಮ್ಮೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪೋನ್ ನಲ್ಲಿ ಮಾತನಾಡುತ್ತಾ ಮಹಿಳೆಯೊಬ್ಬರು ತೆರೆದ ಚರಂಡಿ ಗುಂಡಿಯೊಳಗೆ ಬಿದಿದ್ದಾರೆ. ಮಗುವಿನ ಸಮೇತ ಆಕೆ ಗುಂಡಿಗೆ ಬಿದಿದ್ದಾರೆ. ಪೋನ್ ನಲ್ಲಿ ಮಾತನಾಡುತ್ತಾ ಮಹಿಳೆ ರಸ್ತೆ ಬದಿಯಿಂದ ತೆರೆದ ಚರಂಡಿ ಗುಂಡಿಯನ್ನು ಗಮನಿಸಿಯೇ ಇಲ್ಲ. ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಪೋನ್ ನಲ್ಲಿ ಮಾತನಾಡುತ್ತಾ ಆಯತಪ್ಪಿ ಚರಂಡಿಯೊಳಗೆ ಮಗುವಿನ ಸಮೇತ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಮಗುವನ್ನು ಹಾಗೂ ಮಹಿಳೆಯನ್ನು ಚರಂಡಿಯಿಂದ ಎತ್ತಿ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ ವಿಡಿಯೋವನ್ನು @ EUFreeCitizen ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ. ರಸ್ತೆಯ ಬದಿಯಲ್ಲಿದ್ದ ಚರಂಡಿ ಗುಂಡಿಯನ್ನು ಗಮನಿಸದೇ ಆಕೆ ಮಗುವಿನ ಸಮೇತ ಚರಂಡಿ ಗುಂಡಿಗೆ ಬಿದ್ದಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಹಂಚಿಕೊಂಡ ಈ ವಿಡಿಯೋ ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದಾಡುತ್ತಿವೆ.