Viral Video – ಲೈಂಗಿಕ ದೌರ್ಜನ್ಯ, ಕಿರುಕುಳಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದ್ದರೂ ಸಹ ಈ ರೀತಿಯ ದೌರ್ಜನ್ಯಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಅದರಲ್ಲೂ ಸಾರ್ವಜನಿಕ ಪ್ರದೇಶಗಳಾದ ಬಸ್, ರೈಲ್ ಸೇರಿದಂತೆ ಹಲವು ಕಡೆ (Viral Video) ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅನೇಕ ಮಹಿಳೆಯರು ಭಯದಿಂದಲೋ ಅಥವಾ ಮರ್ಯಾದೆಗೆ ಅಂಜಿ ಸುಮ್ಮನಾಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನಗೆ ಕಿರುಕುಳ ನೀಡಿದ ವ್ಯಕ್ತಿಗೆ ಸರಿಯಾಗಿ ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗಿದೆ.
ಚಲಿಸುತ್ತಿರುವ ಬಸ್ ಒಂದರಲ್ಲಿ ಪ್ರಯಾಣಿಸುತ್ತಿರುವ (Viral Video) ಮಹಿಳೆಯೊಬ್ಬರಿಗೆ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ಬೇಸತ್ತ ಆ ಮಹಿಳೆ ಎಲ್ಲರ ಎದುರಲ್ಲೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣುವಂತೆ ಕುಡಿದ ಅಮಲಿನಲ್ಲಿರುವ ವ್ಯಕ್ತಿಯೋರ್ವ ಮಹಿಳೆಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಆಕೆಯನ್ನು ಸ್ಪರ್ಶಿಸಲು ಪ್ರಯತ್ನ ಮಾಡಿದ್ದಾನೆ. (Viral Video) ಆಗ ಕೋಪಗೊಂಡ ಮಹಿಳೆ 26 ಕ್ಕೂ ಹೆಚ್ಚು ಬಾರಿ ಕಪಾಳಮೋಕ್ಷ ಮಾಡಿದ್ದಾರೆ.
ಇನ್ನೂ ವಿಡಿಯೋದಲ್ಲಿ ಮಹಿಳೆಯ ಆ ವ್ಯಕ್ತಿಗೆ ಹೊಡೆಯುತ್ತಿದ್ದಾಗ ಆತ ಕ್ಷಮೆಯಾಚಿಸುತ್ತಾನೆ, (Viral Video) ಆಕೆ ಮತ್ತೆ ಮತ್ತೆ ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಗಲಾಟೆಯ ಸಮಯದಲ್ಲಿ ಬಸ್ ನಲ್ಲಿದ್ದ ಓರ್ವ ಪ್ರಯಾಣಿಕರೂ ಸಹ ಮಧ್ಯಪ್ರವೇಶ ಮಾಡಿಲ್ಲ. ಮಹಿಳೆ ಆತನಿಗೆ ಒಡೆಯಲು ಅವಕಾಶ ಮಾಡಿಕೊಟ್ಟರು ಎನ್ನಲಾಗಿದೆ. ಕೊನೆಯದಾಗಿ ಬಸ್ ಕಂಡಕ್ಟರ್ (Viral Video) ಬಂದು ಸಮಾಧಾನ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಒಪ್ಪದ ಮಹಿಳೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/lokmat/status/1869646286661836945
ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ (Viral Video) ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅನೇಕರು ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಯಾರಾದರೂ ಮಹಿಳೆಯರಿಗೆ ಕಿರುಕುಳ ಕೊಟ್ಟಾಗ ಇದೇ ರೀತಿಯಾಗಿ ತಿರುಗಿ ಬೀಳಬೇಕು. ಸಾರ್ವಜನಿಕವಾಗಿಯೇ ಅವರಿಗೆ ತಕ್ಕಪಾಠ ಕಲಿಸಬೇಕು. ಆ ವ್ಯಕ್ತಿಗೆ ಕೈಯಿಂದ ಅಲ್ಲ ಚಪ್ಪಲಿಯಿಂದ ಹೊಡೆಯಬೇಕೆಂದು ಅನೇಕರು ತಮ್ಮ ಅಭಿಪ್ರಾಯಗಳನ್ನು (Viral Video) ಕಾಮೆಂಟ್ ಗಳ ಮೂಲಕ ಹರಿಬಿಟ್ಟಿದ್ದಾರೆ.