Viral News – ಸಾಮಾನ್ಯವಾಗಿ ತನ್ನ ಹೆಂಡತಿ ಬೇರೊಬ್ಬನ ಜೊತೆಗೆ ಓಡಿಹೋಗಿದ್ದಾಳೆಂದು ದೂರು ನೀಡಿರುವಂತಹ ಅನೇಕ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಅದೇ ರೀತಿ ತನ್ನ ಗಂಡ ಬೇರೊಬ್ಬಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ (Viral News) ದೂರುಗಳನ್ನು ಸಹ ಕೇಳಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ತನ್ನ ಗರ್ಭಿಣಿ ಹೆಂಡತಿ ನಾಪತ್ತೆಯಾಗಿದ್ದಾಳೆ. ಆಕೆ ತನ್ನ ಸಲಿಂಗಿ ಪ್ರೇಯಸಿಯೊಂದಿಗೆ ಓಡಿ ಹೋಗಿದ್ದಾಳೆ ಎಂದು ಪತಿಯೊಬ್ಬ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಈ ಸುದ್ದಿ ಇದೀಗ ತುಂಬಾನೆ ವೈರಲ್ (Viral News) ಆಗುತ್ತಿದೆ.
ಅಂದಹಾಗೆ ಈ ಘಟನೆ ನಡೆದಿರೋದು ಗುಜರಾತ್ ನ ಅಹಮದಾಬಾದ್ ನಲ್ಲಿ ಎನ್ನಲಾಗಿದೆ. (Viral News) ಗಂಡನೋರ್ವ ತನ್ನ ಏಳು ತಿಂಗಳ ಗರ್ಭಿಣಿ ಹೆಂಡತಿ ಕಾಣೆಯಾಗಿದ್ದಾಳೆ. ಆಕೆ ತನ್ನ ಸಲಿಂಗಿ ಗೆಳತಿಯೊಂದಿಗೆ ಓಡಿ ಹೋಗಿದ್ದಾಳೆ ಎಂದು ಆರೋಪಿಸಿ ಗುಜರಾತ್ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ್ದಾನೆ. ಅಕ್ಟೋಬರ್ನಲ್ಲಿ ಮನೆಯಿಂದ ಹೊರಟು ಹೋದವಳು ಇನ್ನೂ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾನೆ. ಚಂದಖೇಡಾ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದೆ. (Viral News) ಆದರೆ ಆಕೆ ಎಲ್ಲಿಯವರೆಗೂ ಎಲ್ಲಿದ್ದಾಳೆ ಎಂಬುದು ಪತ್ತೆಯಾಗಿಲ್ಲ. ಈ ಕಾರಣದಿಂದ ಪತಿ ನ್ಯಾಯಾಲಯದ ಮೊರೆ ಹೋಗಿದ್ದಾನೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಈ ಜೋಡಿ ಕಳೆದ 2022 ರಲ್ಲಿ (Viral News) ಮದುವೆಯಾಗಿದ್ದರಂತೆ. ಈ ಜೋಡಿಯ ನಡುವೆ ಯಾವುದೇ ವೈವಾಹಿಕ ಸಮಸ್ಯೆಗಳೂ ಸಹ ಇರಲಿಲ್ಲವಂತೆ. ಜೊತೆಗೆ ಆತನ ಪತ್ನಿ ಗರ್ಭಿಣಿ ಸಹ ಆಗಿದ್ದಾರೆ. ಆದರೆ ಮದುವೆಗೂ ಮುಂಚೆಯೇ ಆತನ ಪತ್ನಿಗೆ ಸಲಿಂಗಿ ಸ್ನೇಹಿತೆಯೊಂದಿಗೆ ಸಂಬಂಧ ಏರ್ಪಟ್ಟಿತ್ತಂತೆ. ಓರ್ವ ಮಹಿಳೆಯ ಕುಟುಂಬಸ್ಥರು ಆಕೆಗೆ ಮದುವೆ ಮಾಡಿದ್ದಾರೆ. ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದಾಳೆ. ಅಕ್ಟೋಬರ್ ಮಾಹೆಯಲ್ಲಿ (Viral News) ಮತ್ತೊಮ್ಮೆ ಲೆಸ್ಬಿಯನ್ ಪ್ರೇಯಸಿ ಭೇಟಿಯಾಗಿದ್ದಾಳೆ. ನಂತರ ಆಕೆಯೊಂದಿಗೆ ಓಡಿಹೋಗಿದ್ದಾಳೆ. ಮದುವೆಗೂ ಮುಂಚೆಯೇ ಆಕೆ ಸಲಿಂಗಿಯೊಂದಿಗೆ ರಿಲೇಷನ್ ಶಿಪ್ ನಲ್ಲಿದ್ದು, ಈ ವಿಷಯ ಆಕೆಯ ಕುಟಂಬಸ್ಥರಿಗೂ ಗೊತ್ತಿತ್ತು (Viral News) ಎಂದು ಪೊಲೀಸ್ ಮೂಲಗಳು ತಿಳಿದುಬಂದಿದೆ.
ಇನ್ನೂ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಆದರೂ ಪತ್ನಿ ಎಲ್ಲಿದ್ದಾಳೆ ಎಂಬುದು ತಿಳಿಯದ ಕಾರಣ ಬೇಸತ್ತ ಪತಿ, ಕೋರ್ಟ್ ನಲ್ಲಿ ದೂರು ದಾಖಲಿಸಿದ್ದಾಣೆ. ಈ ಕುರಿತು ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ (Viral News) ಡಿ.24 ರೊಳಗೆ ಆಕೆಯನ್ನು ಕೋರ್ಟ್ ಮುಂದೆ ಹಾಜರುಪಡಿಸಬೇಕೆಂದು ಆದೇಶ ನೀಡಿದೆ ಎಂದು ತಿಳಿದುಬಂದಿದೆ. ಸದ್ಯ ಈ ಸುದ್ದಿ ತುಂಬಾನೆ ವೈರಲ್ (Viral News) ಆಗುತ್ತಿದೆ.