Friday, August 29, 2025
HomeStateViral Video: ಸ್ಕೂಲ್ ಪಿಕ್ನಿಕ್ ಗೆ ಸ್ನೇಹಿತನನ್ನು ಕರೆದುಕೊಂಡು ಹೋಗಲು ಹಣ ಸಂಗ್ರಹ, Its True...

Viral Video: ಸ್ಕೂಲ್ ಪಿಕ್ನಿಕ್ ಗೆ ಸ್ನೇಹಿತನನ್ನು ಕರೆದುಕೊಂಡು ಹೋಗಲು ಹಣ ಸಂಗ್ರಹ, Its True Friendship….!

Viral Video – ಸಾಮಾನ್ಯವಾಗಿ ಶಾಲಾ ಮಕ್ಕಳಿಗೆ ಸ್ಕೂಲ್ ಟ್ರಿಪ್‌ ಅಥವಾ ಪಿಕ್ನಿಕ್ ಗೆ ಹೋಗುವುದು ಅಂದ್ರೆ ಅಪಾರ ಸಂತೋಷ ನೀಡುವ ಕ್ಷಣ. ಆದರೆ ಕೆಲವು ಮಕ್ಕಳು ಹಣಕಾಸಿನ ಸಮಸ್ಯೆಯಿಂದಾಗಿ ಈ ಖುಷಿಯಿಂದ ವಂಚಿತರಾಗುತ್ತಾರೆ.ಹಣಕಾಸಿನ ಕೊರತೆಯ ಕಾರಣ ಕೆಲ ಪೋಷಕರು ತಮ್ಮ ಮಕ್ಕಳನ್ನು ಟ್ರಿಪ್‌ಗೆ ಕಳಿಸಲು ಹಿಂದೇಟು ಹಾಕ್ತಾರೆ. ಇಲ್ಲೊಂದು ಅಂತಹುದೇ ಘಟನೆ ನಡೆದಿದೆ. ಪಿಕ್ನಿಕ್ ಗೆ ಹೋಗಲು ತನ್ನಲ್ಲಿ ಹಣ ಇಲ್ಲ ಎಂದ ಸ್ನೇಹಿತನಿಗಾಗಿ ಇತರೆ ವಿದ್ಯಾರ್ಥಿಗಳು  ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಆ ಶಾಲೆಯ ವಿದ್ಯಾರ್ಥಿಗಳ ಕೆಲಸಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

"School students collect funds to help a friend join the picnic – True Friendship"

Viral Video – ನೇಪಾಳದ ಶಾಲೆಯೊಂದರಲ್ಲಿ ನಡೆದ ಘಟನೆ:

ಅಂದಹಾಗೆ ಈ ಘಟನೆ ನಡೆದಿರೋದು ನೇಪಾಳದಲ್ಲಿ. ನೇಪಾಳದ ಶಾಲೆಯೊಂದರಲ್ಲಿ ಬಡ ಸ್ನೇಹಿತನೋರ್ವನನ್ನು ಶಾಲೆಯ ಪಿಕ್ನಿಕ್ ಗೆ ಕರೆದುಕೊಂಡು ಹೋಗಲು ಇತರೆ ಸಹಪಾಠಿಗಳು ಸೇರಿ ತಮ್ಮ ಪ್ಯಾಕೆಟ್ ಮನಿಯನ್ನು ಸಂಗ್ರಹಿಸಿ, ಇದು ತನ್ನ ಸ್ನೇಹಿತರ ಪಿಕ್ನಿಕ್ ಫೀಸ್ ಎಂದು ಟೀಚರ್‍ ಕೈಯಲ್ಲಿ ಕೊಟ್ಟಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ. ಇನ್ನೂ ತನ್ನ ಸ್ನೇಹಿತರ ಈ ಪ್ರೀತಿ ಹಾಗೂ ಕಾಳಜಿಯನ್ನು ಕಂಡ ಆ ಬಡ ಬಾಲಕ ಕಣ್ಣೀರು ಹಾಕಿದ್ದಾನೆ. ಇನ್ನೂ ಈ ಕುರಿತ ವಿಡಿಯೋ ಒಂದು @mesangye ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಳಾಗಿದೆ. ಒಬ್ಬರಿಗೊಬ್ಬರು ಸಹಾಯ ಮಾಡುವುದು ಅತ್ಯುತ್ತಮ ಕೆಲಸ ಎಂದು ಹೇಳಲಾಗುತ್ತದೆ. ಅದಕ್ಕೆ ಈ ಘಟನೆ ಉದಾಹರಣೆ ಎನ್ನಲಾಗುತ್ತಿದೆ.

Viral Video ಇಲ್ಲಿದೆ ನೋಡಿ: Click Here

ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದು, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೇಪಾಳದ ಶಾಲೆಯೊಂದರ ತರಗತಿಯಲ್ಲಿ ಕುಳಿತ ಸಹಪಾಠಿಗಳು ತಮ್ಮ ಸ್ನೇಹಿತನನ್ನು ಸ್ಕೂಲ್ ಪಿಕ್ನಿಕ್ ಗೆ ಕರೆದುಕೊಂಡು ಹೋಗಲು ಹಣ ಸಂಗ್ರಹ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಸಂಗ್ರಹಿಸಿದ ಹಣವನ್ನು ತಮ್ಮ ಶಾಲೆಯ ಶಿಕ್ಷಕಿಯ ಕೈಯಲ್ಲಿ ಕೊಟ್ಟಿದ್ದಾರೆ. ಸ್ನೇಹಿತರ ಈ ಪ್ರೀತಿ ಹಾಗೂ ಕಾಳಜಿಯನ್ನು ಕಂಡ ಆ ಬಾಲಕ ಕಣ್ಣಿರು ಹಾಕಿದ್ದಾನೆ. ಕೆಲವು ದಿನಗಳ ಹಿಂದೆಯಷ್ಟೆ ಹಂಚಿಕೊಂಡ ಈ ವಿಡಿಯೋ ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡಿದೆ. ಜೊತೆಗೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಈ ಪೈಕಿ ಅನೇಕರು ಇದು ಶಾಲೆಯಲ್ಲಿ ಚಿಕ್ಕ ಸ್ವರ್ಗ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಮತ್ತಷ್ಟು ಮೆಚ್ಚುಗೆಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular