Crime News : ಕ್ಷುಲ್ಲಕ ಕಾರಣದಿಂದ ಬದುಕಿ ಬಾಳಬೇಕಾಗಿದ್ದ 15 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಬೆಂಗಳೂರಿನ ಕಾಡುಗೋಡಿಯ ಅಸೆಟ್ಸ್ ಮಾರ್ಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಪಾರ್ಟ್‌ಮೆಂಟ್ ನ 20 ನೇ ಅಂತಸ್ಥಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮೃತ ದುರ್ದೈವಿಯನ್ನು ಅವಂತಿಕಾ ಚೌರಾಸಿಯಾ ಎಂದು ಗುರ್ತಿಸಲಾಗಿತ್ತು, ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Crime News : ಮೊಬೈಲ್ ಬೇಡ ಅಂದಿದ್ದೇ ತಪ್ಪಾಯ್ತಾ?
ಮೃತಳ ಕುಟುಂಬ ಮೂಲತಃ ಮಧ್ಯಪ್ರದೇಶದವರಾಗಿದ್ದು ಬೆಂಗಳೂರಿನ ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದರು. ಮೃತ ಬಾಲಕಿಯ ತಂದೆ ಖಾಸಗಿ ಕಂಪನಿಯ ಇಂಜನೀಯರ್ ಆಗಿದ್ದು, ತಾಯಿ ಗೃಹಿಣಿಯಾಗಿದ್ದಳು. ಅವಂತಿಕಾ ಚೌರಾಸಿಯಾ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ SSLC ಓದುತ್ತಿದ್ದಳು. ಈ ಹಿಂದೆ ನಡೆದ ಪರೀಕ್ಷೆಯೊಂದರಲ್ಲಿ ಅವಂತಿಕಾ ಕಡಿಮೆ ಅಂಕ ಪಡೆದಿದ್ದಳಂತೆ. ಇನ್ನೇನು ಕೆಲವೇ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಸಹ ಶುರುವಾಗಲಿದೆ. ಆದರೆ ಅವಂತಿಕಾ ಮೊಬೈಲ್ ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಳಂತೆ. ಇನ್ನೂ ಇದನ್ನು ಕಂಡ ತಾಯಿ ಮೊಬೈಲ್ ಬೇಡ ಎಂದು ಬುದ್ದಿಮಾತು ಹೇಳಿದ್ದಾರೆ. ಪರೀಕ್ಷೆ ಹತ್ತಿರವಿದೆ ಓದುವುದನ್ನು ಬಿಟ್ಟು ಮೊಬೈಲ್ ನಲ್ಲೇ ಬ್ಯುಸಿಯಾಗಿರತ್ತೀಯಾ ಎಂದು ಬೈದಿದ್ದಾರೆ. ಇದರಿಂದಾಗಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಕ್ಷುಲ್ಲಕ ಕಾರಣದಿಂದ ಇದೀಗ ಬದುಕಿ ಬಾಳಬೇಕಿದ್ದ ಬಾಲಕಿ ಇಹಲೋಕ ತ್ಯೆಜಿಸಿದ್ದಾಳೆ.
Crime News – ಆನೇಕಲ್ ನಲ್ಲಿ ಯುವತಿಯ ಅನುಮಾನಸ್ಪದ ಸಾವು, ಮರ್ಯಾದಾ ಹತ್ಯೆ ಎಂದ ಯುವತಿಯ ಪ್ರಿಯಕರ…!
ಬೆಂಗಳೂರಿನ ಆನೇಕಲ್ ತಾಲೂಕಿನ ಹೊಸ್ಕೂರು ಕೆರೆಯಲ್ಲಿ ಯುವತಿಯೊಬ್ಬಳ ಶವ ಕಂಡುಬಂದಿದೆ. ಮೃತಳನ್ನು ಸಹನಾ (21) ಎಂದು ಗುರ್ತಿಸಲಾಗಿದ್ದು, ಆಕೆ ಅನುಮಾನಸ್ಪದವಾಗಿ ಸತ್ತಿರುವ ಶಂಕೆ ವ್ಯಕ್ತವಾಗಿದೆ. ತಂದೆ ಹಾಗೂ ಮೃತ ಯುವತಿ ಬೈಕ್ ನಲ್ಲಿ ಹೋಗುತ್ತಿರುವಾಗ ಬೈಕ್ ಕೆರೆಗೆ ಬಿದ್ದಿದೆ. ಈ ವೇಳೆ ತಂದೆ ಈಜುತ್ತಾ ದಡ ಸೇರಿದ್ದಾರೆ. ನಂತರ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆದರೆ ಸಹನಾ ಮಾತ್ರ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾಳೆ. ಮಗಳನ್ನು ರಕ್ಷಣೆ ಮಾಡದೇ ನೇರವಾಗಿ ರಾಮಮೂರ್ತಿ ಪೊಲೀಸ್ ಠಾಣೆಗೆ ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ, ಸಹನಾ ಪೋಷಕರ ವಿರುದ್ದ ಆಕೆಯ ಪ್ರಿಯಕರ ನಿತಿನ್ ಇದು ಮರ್ಯಾದಾ ಹತ್ಯೆ ಎಂಬ ಆರೋಪ ಮಾಡಿದ್ದಾರೆ.

ಇನ್ನೂ ಸಹನಾ ಹಾಗೂ ನಿತಿನ್ ಕಳೆದ ಒಂದು ವರ್ಷದಿಂದ ಪ್ರೀತಿಸಿಕೊಳ್ಳುತ್ತಿದ್ದರಂತೆ, ಕಳೆದೆರಡು ದಿನಗಳ ಹಿಂದೆಯಷ್ಟೆ ಈ ವಿಚಾರ ಯುವತಿಯ ಪೋಷಕರಿಗೆ ತಿಳಿಸಿದೆ. ನಂತರ ನಿತಿನ್ ಗೆ ಕರೆ ಮಾಡಿದ ಸಹನಾ ತಂದೆ, ಮಾತುಕತೆಗೆ ಬರುವಂತೆ ತಿಳಿಸಿದ್ದರು. ಅದರಂತೆ ಸಹನಾ ತಂದೆಯ ಸ್ನೇಹಿತನ ಮನೆಯಲ್ಲಿ ರಾಜಿ ಪಂಚಾಯತಿ ನಡೆದಿದೆ. ಈ ಸಮಯದಲ್ಲಿ ರಾಮಮೂರ್ತಿ ಸಹನಾ ಮೇಲೆ ಹಲ್ಲೆ ಮಾಡಿದ್ದನಂತೆ. ಪ್ರಾಣ ಹೋದರೂ ಈ ಪ್ರೀತಿಯನ್ನು ಒಪ್ಪುವುದಿಲ್ಲ ಎಂದು ಹೇಳಿದ್ದರಂತೆ. ಈ ಸಮಯದಲ್ಲಿ ನಿತಿನ್ ತಾಯಿ ರಾಮಮೂರ್ತಿಯವರನ್ನು ಮದುವೆ ಒಪ್ಪಿಕೊಳ್ಳುವಂತೆ ಕೇಳಿದ್ದಾರೆ. ಎರಡು ದಿನ ಸಮಯ ಕೇಳಿ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಇನ್ನೂ ಮಾರ್ಗಮಧ್ಯೆ ಸಹನಾಳನ್ನು ಕೆರೆಗೆ ತಳ್ಳಿ ಕೊಲೆ ಮಾಡಿರುವುದಾಗಿ ನಿತಿನ್ ಆರೋಪ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಹೆಬ್ಬಗೋಡಿ ಪೊಲೀಸರು ಕಾಯುತ್ತಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇನ್ನೂ ಮೃತ ಸಹನಾ ತನ್ನ ಪ್ರಿಯಕರ ನಿತಿನ್ ನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳಂತೆ. ಆದರೆ ಸಹನಾ ಪೋಷಕರು ಸಂಬಂಧಿಕರ ಕಡೆಯ ವರನಿಂದ ಮದುವ ಮಾಡಲು ಮುಂದಾಗಿದ್ದರಂತೆ. ಆದರೆ ಈ ಮದುವೆಗೆ ಸಹನಾ ಒಪ್ಪಿರಲಿಲ್ಲವಂತೆ. ಈ ಕಾರಣದಿಂದಲೇ ತಂದೆ-ಮಗಳ ಜೊತೆ ಗಲಾಟೆ ನಡೆದಿದ್ದು, ಇದೇ ಕಾರಣದಿಂದ ಸಹನಾಳನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಿಯಕರ ನಿತಿನ್ ಗಂಭೀರ ಆರೋಪ ಮಾಡಿದ್ದಾನೆ.