...
HomeSpecialViral Video: ಇವನ್ಯಾನು ಗುರು, ದೀಪಾವಳಿ ಹಬ್ಬಕ್ಕೆ ಪಟಾಕಿ ಬದಲು ರಾಶಿ ರಾಶಿ ಸುಟ್ಟು ಹಾಕಿದ...

Viral Video: ಇವನ್ಯಾನು ಗುರು, ದೀಪಾವಳಿ ಹಬ್ಬಕ್ಕೆ ಪಟಾಕಿ ಬದಲು ರಾಶಿ ರಾಶಿ ಸುಟ್ಟು ಹಾಕಿದ ಭೂಪ…!

ಕೋಟ್ಯಂತರ ಭಾರತೀಯರು ಮಾತ್ರವಲ್ಲದೇ ವಿಶ್ವದ ಮೂಲೆ ಮೂಲೆಯಲ್ಲೂ ದೀಪಾವಳಿ ಹಬ್ಬವನ್ನು (Diwali 2024) ಸಂಭ್ರಮ ಹಾಗೂ ಸಡಗರಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬ ಎಂದ ಕೂಡಲೇ ನೆನಪಿಗೆ ಬರೋದು ಪಟಾಕಿಗಳು. ಮಕ್ಕಳಿಗಂತೂ ಪಟಾಕಿ ಸುಡುವುದು ಎಂದರೇ ತುಂಬಾನೆ ಇಷ್ಟ. ಮಕ್ಕಳು ಮಾತ್ರವಲ್ಲದೇ ದೊಡ್ಡವರೂ ಸಹ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ ಇಲ್ಲೊಬ್ಬ ಭೂಪ ಮಾತ್ರ ಪಟಾಕಿ ಸಿಡಿಸುವ ಬದಲಿಗೆ 500,100 ಮುಖಬೆಲೆಯ (viral video)  ನೋಟುಗಳನ್ನು ಸುಟ್ಟು ಹಾಕಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (viral video) ಸಖತ್ ವೈರಲ್ ಆಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗುವುದಕ್ಕೋ ಅಥವಾ ಬೇರೆ ಉದ್ದೇಶಕ್ಕೋ ತಿಳಿಯದು ಕೆಲವೊಂದು ವಿಚಿತ್ರ ಹಾಗೂ ವಿಭಿನ್ನ ವಿಡಿಯೋಗಳನ್ನು (viral video) ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಂತಹುದೇ ವಿಡಿಯೋ ಒಂದು ಸದ್ದು ಮಾಡುತ್ತಿದೆ. kumardineshbhai049 ಎಂಬುವವರ ಇನ್ಸ್ಟಾ ಖಾತೆಯಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಕೋಟಿಗಟ್ಟಲೇ ವೀಕ್ಷಣೆ ಕಂಡಿದೆ. (viral video)ವಿಡಿಯೊ ವೈರಲ್ ಆಗುತ್ತಿದ್ದು, ಕಾಮೆಂಟ್ ಗಳೂ ಸಹ ಹರಿದು ಬರುತ್ತಿದ್ದು, ಆತನ ವರ್ತನೆಗೆ ಆಕ್ರೋಷ ಸಹ ವ್ಯಕ್ತವಾಗುತ್ತಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ: Click Here

ವೈರಲ್ ಆಗುತ್ತಿರುವ ವಿಡಿಯೋದಲ್ಲಿ 100, 500 ಮುಖ ಬೆಲೆಯ ನೋಟುಗಳನ್ನು ಸುಡುತ್ತಿರುವುದನ್ನು ಕಾಣಬಹುದಾಗಿದೆ. ಈತ ಫೇಮಸ್ ಆಗೋದಕ್ಕೆ ಈ ರೀತಿಯಾಗಿ ಮಾಡಿದ್ದಾನಾ ಅಥವಾ ಬೇರೆ ಉದ್ದೇಶಕ್ಕಾಗಿಯೇ ಎಂಬುದರ ಬಗ್ಗೆ ತಿಳಿದುಬಂದಿಲ್ಲ. ಆದರೆ ಈ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ (viral video) ಸಖತ್ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರು ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ನಿಮಗೆ ಹಣ ಬೇಡವಾದರೇ ಬಡವರಿಗೆ ಹಣ ನೀಡಿ, ಈ ರೀತಿಯಾಗಿ ಹಣ ಸುಡುವುದು ಸರಿಯಲ್ಲ ಎಂದು ಟೀಕೆ ಮಾಡುತ್ತಿದ್ದಾರೆ. ಇನ್ನೂ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಯ ಪ್ರಕಾರ (viral video) ಯಾವುದೇ ಕರೆನ್ಸಿ ನೋಟುಗಳನ್ನು ನಾಶಪಡಿಸುವುದು ಅಥವಾ ಶಿಕ್ಷಾರ್ಹ ಅಪರಾಧವಾಗಿದೆ. ಈ ರೀತಿ ಮಾಡಿದರೇ ಏಳು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಅನೇಕರು ಈ ಕಾಯ್ದೆಯಡಿ ನೋಟು ಸುಟ್ಟ ವ್ಯಕ್ತಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

Most Popular

Seraphinite AcceleratorOptimized by Seraphinite Accelerator
Turns on site high speed to be attractive for people and search engines.