Viral Video: ಮಗನ ಹುಟ್ಟುಹಬ್ಬದ ಆಚರಣೆ ಸಮಯದಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಮಾತನಾಡಿದ್ದಕ್ಕಾಗಿ ಪತ್ನಿಯ ಕಪಾಳಕ್ಕೆ ಹೊಡೆದ ಪತಿ….!

ಇತ್ತೀಚಿಗೆ ಮದುವೆ ಸೇರಿದಂತೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಸಣ್ಣಪುಟ್ಟ ಕಾರಣಗಳಿಂದ ದೊಡ್ಡ ಮಟ್ಟದಲ್ಲೆ ಜಗಳಗಳು ನಡೆಯುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮಗನ ಹುಟ್ಟುಹಬ್ಬದ ಸಂಭ್ರಮದ ಸಮಯದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಮಾತನಾಡಿದ್ದಕ್ಕಾಗಿ ಪತ್ನಿಯ (Viral Video) ಮೇಲೆ ಪತಿ ಕೈ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಮನೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮಗಳು ನಡೆದಾಗ ಎಲ್ಲರೂ ಸಂತೋಷದಿಂದ ಸಂಭ್ರಮಿಸುವುದು ಸಾಮಾನ್ಯ ಎನ್ನಬಹುದು. ಆದರೆ ಕೆಲವೊಂದು ಸಮಾರಂಭಗಳಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆಗಳು ನಡೆದು ಕಾರ್ಯಕ್ರಮ ಹಾಳಾಗಿಬಿಡುತ್ತದೆ. ಅಂತಹುದೇ ಘಟನೆಯೊಂದು ನಡೆದಿದ್ದು, ಮಗನ ಹುಟ್ಟುಹಬ್ಬದ ಸಂಭ್ರಮದ ಸಮಯದಲ್ಲಿ ಪತಿ ವಿಡಿಯೋ ಮಾಡುತ್ತಿರುತ್ತಾನೆ. ಈ ವೇಳೆ ಪತ್ನಿ ವಿಡಿಯೋ ಮಾಡುತ್ತಿದ್ದಾಗ ಮದ್ಯೆ ಮಾತನಾಡಿದ್ದಾಳೆ. ಇದರಿಂದ ಕೋಪಗೊಂಡ ಪತಿ ಹೆಂಡತಿಯ ಕಪಾಳಕ್ಕೆ ಹೊಡೆದಿದ್ದಾನೆ. ಈ ಕುರಿತು @Deadlykalesh ಎಂಬ ಹೆಸರಿನ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮಗನ ಹುಟ್ಟು ಹಬ್ಬದ ಸಂಭ್ರಮದ ವಿಡಿಯೋ ರೆಕಾರ್ಡ್ ಮಾಡುವಾಗ ಮಾತನಾಡಿದ್ದಕ್ಕಾಗಿ ಪತ್ನಿಗೆ ಪತಿಯಿಂದ ಕಪಾಳಮೋಕ್ಷ ಎಂಬ ಟೈಟಲ್ ನಡಿ ವಿಡಿಯೋ ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಇನ್ನೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದಂಪತಿಗಳು ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸುತಿರುತ್ತಾರೆ. ಈ ಕ್ಷಣಗಳನ್ನು ಮಗನ ಅಪ್ಪ ವಿಡಿಯೋ ಮಾಡುತ್ತಿರುತ್ತಾನೆ. ತಮ್ಮ ಮಗನನ್ನು ಮಧ್ಯೆ ಕೂರಿತಿ ವಿಡಿಯೋ ಮಾಡುತ್ತಾ ಕೇಕ್ ಕಟ್ಟಲು ದಂಪತಿ ಮುಂದಾಗುತ್ತಾರೆ. ಈ ವೇಳೆ ವಿಡಿಯೋ ರೆಕಾರ್ಡ್ ಮಾಡುವ ವೇಳೆ ಮಗುವಿನ ತಾಯಿ ಏನೋ ಮಾತನಾಡಲು ಮುಂದಾಗುತ್ತಾಳೆ, ಈ ಸಮಯದಲ್ಲಿ ಕೋಪಗೊಂಡ ಪತಿ ಆಕೆಯ ಕೆನ್ನೆಗೆ ಸರಿಯಾಗಿ ಬಾರಿಸಿ ಅಲ್ಲಿಂದ ಎದ್ದು ಹೋಗುತ್ತಾನೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಆ ವ್ಯಕ್ತಿಯ ಅಷ್ಟೊಂದು ಅತಿರೇಕದ ವರ್ತನೆ ತೋರುವುದು ಬೇಕಿತ್ತಾ, ಈ ರೀತಿಯ ಘಟನೆ ಆ ಪುಟ್ಟ ಮಗುವಿನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

Bank Jobs: ಬ್ಯಾಂಕ್ ನಲ್ಲಿ ಕೆಲಸ ಬಯಸುವವರಿಗೆ ಗುಡ್ ನ್ಯೂಸ್, ಯೂನಿಯನ್ ಬ್ಯಾಂಕ್ ನಲ್ಲಿವೆ 1500 ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!

Sat Oct 26 , 2024
ಅನೇಕರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ತುಂಬಾನೆ ಆಸಕ್ತಿಯಿರುತ್ತದೆ. ಅಂತಹವರಿಗಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶುಭಸುದ್ದಿಯನ್ನು ನೀಡಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶದಾದ್ಯಂತ 8500ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಇದರ ಪ್ರಧಾನ ಕಚೇರಿ ಮುಂಬೈನಲ್ಲಿದೆ. ಈ ಬ್ಯಾಂಕ್ ನಲ್ಲಿ ಬರೊಬ್ಬರಿ 75 ಸಾವಿರ ಉದ್ಯೋಗಿಗಳಿದ್ದಾರೆ. ಸದ್ಯ ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿಯಿರುವ 1500 ಹುದ್ದೆಗಳ ಭರ್ತಿಗೆ ಅಧಿಸೂಚನೆ (Bank Jobs) ಹೊರಡಿಸಿದ್ದು, […]
Union Bank Recruitment 2024 1500 posts
error: Content is protected !!