ಹಾವುಗಳು ಎಂದರೇ ಯಾರಿಗೆ ಭಯ ಇರೊಲ್ಲ ಹೇಳಿ. ಆದರೆ ಕೆಲ ಹಾವು ತಜ್ಞರು ವಿಶೇಷ ಕಲೆಯ ಮೂಲಕ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ನಿರ್ಜನ ಪ್ರದೇಶದಲ್ಲಿ ಬಿಡುತ್ತಾರೆ. ಆದರೆ ಕೆಲವರಿಗೆ ಯಾವುದೇ ತರಬೇತಿ ಇಲ್ಲದೇ ಇದ್ದರೂ ಹಾವು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡಿರುತ್ತಾರೆ. ಅದೇ ರೀತಿಯ ಘಟನೆಯೊಂದು ನಡೆದಿದೆ. ವೃದ್ದನೋರ್ವ ಅತಿಯಾದ ಆತ್ಮವಿಶ್ವಾಸದಿಂದ ತನ್ನ ಕಣ್ಣುಗಳ ಮೂಲಕ ಹಾವನ್ನು ನಿಯಂತ್ರಿಸಲು (Viral Video) ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೋಷಿಯಲ್ ಮಿಡಿಯಾದಲ್ಲಿ ಕೆಲವರು ಫೇಮಸ್ ಆಗಲು ಹೋಗಿ ಪ್ರಾಣದ ಮೇಲೆ ಎಳೆದುಕೊಳ್ಳುತ್ತಾರೆ. ಅಂತಹುದೇ ಘಟನೆಯೊಂದು ನಡೆದಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಓರ್ವ ವ್ಯಕ್ತಿ ತನ್ನ ಕಣ್ಸನ್ನೆ ಮೂಲಕ ಹಾವನ್ನು ನಿಯಂತ್ರಿಸುತ್ತೇನೆ ಎಂದು ಭಾವಿಸಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ಅಷ್ಟಕ್ಕೂ ಆ ಹಾವು ಆತನಿಗೆ ಏನು ಮಾಡಿದೆ. ಹಾವನ್ನು ನಿಯಂತ್ರಿಸಿದನೇ ಎಂಬುದನ್ನು ತಿಳಿಯಲು ಮುಂದೆ ಓದಿ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಅಂದಹಾಗೆ ಈ ವಿಡಿಯೋವನ್ನು therealtarzann ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವೃದ್ದನೋರ್ವ ಖುರ್ಚಿಯಲ್ಲಿ ಕುಳಿತುಕೊಂಡಿರುತ್ತಾನೆ. ಆತನ ಮುಂದೆ ನಾಗರಹಾವು ಹೆಡೆ ಎತ್ತಿಕೊಂಡು ಇರುತ್ತದೆ. ಆ ವೃದ್ದ ಮಿತಿಮೀರಿದ ಆತ್ಮವಿಶ್ವಾಸದೊಂದಿಗೆ ತನ್ನ ಕಣ್ಣುಗಳಿಗೆ ಹಾವನ್ನು ನಿಯಂತ್ರಣ ಮಾಡಲು ಯತ್ನಿಸುತ್ತಾನೆ. ನೋಡ ನೋಡುತ್ತಿದ್ದಂತೆ ಆ ಹಾವು ವೃದ್ದನ ಕಣ್ಣಿಗೆ ಕಚ್ಚುತ್ತದೆ. ಹಾವು ಆಕಸ್ಮಿಕ ದಾಳಿಗೆ ವೃದ್ದ ಶಾಕ್ ಆಗಿದ್ದಾನೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ 1.3 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.