Sad News: ಕ್ಷುಲ್ಲಕ ಕಾರಣಕ್ಕೆ ಜೀವ ಕಳೆದುಕೊಂಡ BBA ವಿದ್ಯಾರ್ಥಿನಿ….!

ಇತ್ತೀಚಿಗೆ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವೊಂದು ಪ್ರಕರಣಗಳಲ್ಲಿ ಸಾಲಬಾದೆ, ಪ್ರೇಮ ವೈಫಲ್ಯ ಸೇರಿದಂತೆ ಹಲವು ಕಾರಣಗಳಿಂದ ಆತ್ಮಹತ್ಯೆಗಳು ನಡೆದರೇ, ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದ ಆತ್ಮಹತ್ಯೆ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮನೆಯಲ್ಲಿ ಪೋಷಕರು ಬೈದ ಕಾರಣದಿಂದ ಮನನೊಂದು BBA ವಿದ್ಯಾರ್ಥಿನಿಯೊಬ್ಬರು (Sad News) ಆತ್ಮಹತ್ಯೆಗೆ ಶರಣಾಗಿದ್ದಾರೆ.

Shravya suicide in Chamarajpet 0

ಇಂದಿನ ಕಾಲದಲ್ಲಿ ತಮ್ಮ ಮಕ್ಕಳಿಗೆ ಅಪ್ಪ ಅಮ್ಮ ಬೈಯ್ಯೊದು, ಬುದ್ದಿವಾದ ಹೇಳುವುದು ತಪ್ಪು ಎಂಬಂತಾಗಿಬಿಟ್ಟಿದೆ. ತಮ್ಮ ಮಕ್ಕಳು ಉದ್ದಾರವಾಗಲಿ ಎಂದು ಬುದ್ದಿವಾದ ಹೇಳಲು ಕೋಪದಿಂದ ಜೋರಾಗಿ ಮಾತನಾಡಿದರೂ ಕೆಲ ಮಕ್ಕಳು ಸಹಿಸಿಕೊಳ್ಳುವುದಿಲ್ಲ. ತಮ್ಮ ಪೋಷಕರು ಏತಕ್ಕಾಗಿ ಕೋಪದಲ್ಲಿ ಮಾತನಾಡುತ್ತಿದ್ದಾರೆ ಎಂಬುದನ್ನೂ ಸಹ ಮಕ್ಕಳು ಅರ್ಥ ಮಾಡಿಕೊಳ್ಳಲು ಸಿದ್ದರಿರುವುದಿಲ್ಲ. ಕೋಪದಲ್ಲಿ ಬುದ್ದಿ ಕಳೆದುಕೊಂಡ ಮಕ್ಕಳು ಮನೆಯನ್ನು ಬಿಟ್ಟು ಹೋಗುವ ತಪ್ಪು ನಿರ್ಣಯ ತೆಗೆದುಕೊಳ್ಳುತ್ತಾರೆ, ಆದ್ದರಿಂದ ವಯಸ್ಸಿಗೆ ಬಂದ ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದು ಇಂದಿನ ಕಾಲದಲ್ಲಿ ಪೋಷಕರಿಗೆ ತುಂಬಾನೆ ಕಷ್ಟಕರವಾಗಿದೆ.

ಈ ರೀತಿಯ ಕ್ಷುಲ್ಲಕ ಕಾರಣದಿಂದ ಬದುಕಿ ಬಾಳಬೇಕಾದ 19 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರಿನ ಚಾಮರಾಜಪೇಟೆ 3ನೇ ಮೈನ್ ಮನೆಯೊಂದರಲ್ಲಿ ವಾಸವಾಗಿದ್ದ ಶ್ರಾವ್ಯ (19) ಎಂಬ ಯುವತಿ ಮೃತ ದುರ್ದೈವಿ. ಶ್ರಾವ್ಯ ಖಾಸಗಿ ಕಾಲೇಜೊಂದರಲ್ಲಿ ಬಿಬಿಎ ಮೊದಲ ವರ್ಷದಲ್ಲಿ ಓದುತ್ತಿದ್ದಳು. ಅಮ್ಮ ನಿಂದಿಸಿದ್ದಾಳೆ ಅಂತಾ ಕೋಪಗೊಂಡ ಶ್ರಾವ್ಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ. ಬದುಕಿ ತಂದೆ ತಾಯಿಗೆ ಒಳ್ಳೆಯ ಹೆಸರು ತಂದುಕೊಡಬೇಕಾಗಿದ್ದ ಶ್ರಾವ್ಯ ಇದೀಗ ಇಹಲೋಕ ತ್ಯೆಜಿಸಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

Next Post

Viral Video : ತಾತ ನಿನಗಿದು ಬೇಕಿತ್ತಾ, ಕಣ್ಸನ್ನೆ ಮೂಲಕ ಹಾವನ್ನು ನಿಯಂತ್ರಿಸಲು ಹೋದವನಿಗೆ ಏನಾಯ್ತು ಗೊತ್ತಾ?

Sun Oct 20 , 2024
ಹಾವುಗಳು ಎಂದರೇ ಯಾರಿಗೆ ಭಯ ಇರೊಲ್ಲ ಹೇಳಿ. ಆದರೆ ಕೆಲ ಹಾವು ತಜ್ಞರು ವಿಶೇಷ ಕಲೆಯ ಮೂಲಕ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ನಿರ್ಜನ ಪ್ರದೇಶದಲ್ಲಿ ಬಿಡುತ್ತಾರೆ. ಆದರೆ ಕೆಲವರಿಗೆ ಯಾವುದೇ ತರಬೇತಿ ಇಲ್ಲದೇ ಇದ್ದರೂ ಹಾವು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡಿರುತ್ತಾರೆ. ಅದೇ ರೀತಿಯ ಘಟನೆಯೊಂದು ನಡೆದಿದೆ. ವೃದ್ದನೋರ್ವ ಅತಿಯಾದ ಆತ್ಮವಿಶ್ವಾಸದಿಂದ ತನ್ನ ಕಣ್ಣುಗಳ ಮೂಲಕ ಹಾವನ್ನು ನಿಯಂತ್ರಿಸಲು (Viral Video) ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಸಂಬಂಧ ವಿಡಿಯೋ […]
king cobra attacked mens eye
error: Content is protected !!